ನವರಸ ನಾಯಕನ ಮಾತಿಗೆ ಕಣ್ಣೀರಿಟ್ಟ ಅಭಿನಯ ಚಕ್ರವರ್ತಿ..!!

ಸ್ಯಾಂಡಲ್ ವುಡ್ ನಲ್ಲಿ ವಿಭಿನ್ನ ರೀತಿಯ ಕಥಾ ಹಂದರವನ್ನು ಹೊಂದಿರುವ ಸಿನಿಮಾಗಳು ಸಾಕಷ್ಟಿವೆ…ಅದರ ಜೊತೆಗೆ ಇದೀಗ ಬಿಡಉಗಡೆಯಾಗಿರುವ ಪ್ರೀಮಿಯರ್ ಪದ್ಮಿನಿ ಸಿನಿಮಾ ಕೂಡ ಯಶಸ್ಸನ್ನು ಕಾಣುತ್ತಿದೆ.. ಸಿನಿಮಾವನ್ನು ನೋಡಿದ ಮಂದಿ ಕೊಟ್ಟ ಕಾಸಿಗೆ ಮೋಸವಿಲ್ಲ ಎಂಬ ಭಾವದಿಂದ ಹೊರಬರುತ್ತಿದ್ದಾರೆ.. ಚಿತ್ರದ ಒಂದೊಂದು ದೃಶ್ಯವು ಕೂಡ ನೋಡುಗರನ್ನು ಹಿಡಿದಿಟ್ಟುಕೊಳ್ಳುವಂತಿದೆ ಎನ್ನುತ್ತಿದ್ದಾರೆ ಸಿನಿ ರಸಿಕರು.. ಇದೀಗ ಈ ಸಿನಿಮಾವನ್ನು ಅಭಿನಯ ಚಕ್ರವರ್ತಿ ಸುದೀಪ್ ಕೂಡ ಮೆಚ್ಚಿಕೊಂಡಿದ್ದಾರೆ.
ಸಿನಿಮಾದಲ್ಲಿ ಎಲ್ಲಾ ನಟರು ಕೂಡ ಪರಕಾಯ ಪ್ರವೇಶ ಮಾಡಿ ಅಭಿನಯಿಸಿದ್ದಾರೆ. ಪಾತ್ರಗಳನ್ನು ಆಯ್ಕೆ ಮಾಡಿಕೊಂಡ ನಿರ್ದೇಶಕರಿಗೆ ನನ್ನದೊಂದು ಸಲಾಂ… ಇನ್ನೂ ಹೇಳಬೇಕೆಂದರೆ ಜಗ್ಗೇಶ್ ಸರ್ ಬಗ್ಗೆ ನನಗೆ ತುಂಬಾ ಸಂತೋಷವಾಯಿತು. ನಮ್ಮೆಲ್ಲರ ಹೃದಯಕ್ಕೆ ಹತ್ತಿರವಾದ ಪಾತ್ರ ಅವರದು. ಎಂಥಾ ಕಠಿಣವಾದ ಪಾತ್ರವನ್ನು ಕೂಡ ಅಷ್ಟೆ ಸುಲಭವಾಗಿ ನಿರ್ವಹಿಸಬಲ್ಲ ಸಮರ್ಥ ನಟರು ಜಗ್ಗೇಶಶ್ ಅವರು.. ನಿಮ್ಮ ಮೌನ ಸಾವಿರ ಮಾತುಗಳನ್ನು ಹೇಳುತ್ತದೆ. ಸಿನಿಮಾ ಕೊನೆಗೊಳ್ಳುವ ರೀತಿಯೂ ಇಷ್ಟವಾಯಿತು. ನಾವು ಎಷ್ಟೇ ತಡೆಯಲು ಯತ್ನಿಸಿದರೂ ಕೊನೆಯ ಮಾತು ಕೇಳುತ್ತಿದ್ದಂತೆ ಕಣ್ಣ ಹನಿಯೊಂದು ಕೆನ್ನೆಗೆ ಇಳಿಯಿತು. ಎಂದು ಅಭಿನಯ ಚಕ್ರವರ್ತಿ ಸುದೀಪ್ ಟ್ವೀಟ್ ಮಾಡಿ ಇಡೀ ಸಿನಿಮಾ ತಂಡಕ್ಕೆ ಅಭಿನಂದನೆಯನ್ನು ಸಲ್ಲಿಸಿದ್ದಾರೆ.. ಜಗ್ಗೇಶ್ ಕೂಡ ಪ್ರೀಮಿಯರ್ ಪದ್ಮಿನಿ ಸಿನಿಮಾದ ಮೂಲಕ ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದಾರೆ.
Comments