ತಮ್ಮ ಮನೆಗೆ ಬಂದ ಹೊಸ ಅತಿಥಿ ಕಂಡು ಚಾಲೆಂಜಿಂಗ್ ಸ್ಟಾರ್ ದರ್ಶನ್ ದಿಲ್ ಖುಷ್…

ಅಂದಹಾಗೇ ಮಗನ ಜೊತೆ ಸೇರಿ ಹಸು ಹಾಲು ಕರೆಯೋದು, ರಜಾ ಸಿಕ್ಕರೆ ಸಾಕು ಮೈಸೂರಿನತ್ತ ಪ್ರಯಾಣ ಬೆಳೆಸೋದು, ಅಲ್ಲಿನ ಪ್ರಾಣಿ ಪಕ್ಷಿಗಳ ಜೊತೆ ಆಟವಾಡೋದು ಇದೇನು ದರ್ಶನ್ ಗೆ ಹೊಸದಲ್ಲ ಬಿಡಿ. ಹೊಸದೇನಪ್ಪಾ ಅಂದ್ರೆ ಮಗನಿಗೂ ತನ್ನಾಗೆ ಪ್ರಾಣಿ ಪ್ರೀತಿ ಕಲಿಸಿದ್ದಾರೆ ದರ್ಶನ್. ಅಂದಹಾಗೇ ದರ್ಶನ್ ಮನೆಗೆ ಹೊಸ ಅತಿಥಿಯೊಬ್ಬರು ಬಂದಿದ್ದಾರೆ. ಆ ಗೆಸ್ಟ್ ಬರುತ್ತಿದ್ದಂತೇ ಚುನಾವಣಾ ಪ್ರಚಾರದಿಂದ ಸ್ವಲ್ಪ ಡಿಸ್ಟರ್ಬ್ ಆಗಿದ್ದ ಡಿ ಬಾಸ್ ದಿಲ್ ಖುಷ್ ಅಗಿದ್ದಾರೆ.
ದರ್ಶನ್ ಮನಗೆದ್ದ ಆ ಅತಿಥಿ ಯಾರ್ ಗೊತ್ತಾ..?ಈಗಾಗಲೇ ಮನೆಯಲ್ಲಿ ದುಬಾರಿ ವೆಚ್ಚದ ಲ್ಯಾಂಬೋರ್ಗಿನಿ ಕಾರ್ ಇದೆ. ಇದೀಗ ಮತ್ತೊಂದು ಲ್ಯಾಂಬೋರ್ಗಿನಿ ಉರುಸ್ ಕಾರನ್ನು ಕೊಂಡು ಕೊಂಡಿದ್ದಾರೆ. 5 ಕೋಟಿ ಕಾರಿನ ಒಡೆಯರಾಗಿರುವ ಇವರು ಇದೀಗ ಹಳದಿ ಬಣ್ಣದ ಮೂರುವರೆ ಕೋಟಿಯ ಲ್ಯಾಂಬೋರ್ಗಿನಿ ಉರುಸ್ ಕಾರನ್ನು ಖರೀದಿಸಿದ್ದಾರೆ. ದರ್ಶನ್ ಅವರು ಕಾರು ಖರೀದಿಸಿರುವ ಫೋಟೋ ಹಾಗೂ ವಿಡಿಯೋಗಳನ್ನು ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.ಇದೇ ದರ್ಶನ್ ಮಮನೆಗೆ ಬಂದ ಹೊಸ ಗೆಸ್ಟ್. ಮೊದಲು ಇರುವ ಕಾರಿನ ಬಣ್ಣ ಬಿಳಿ ಬಣ್ಣವಾಗಿದ್ದು, ಇದು ಹಳದಿ ಬಣ್ಣ, ನೋಡೋದಕ್ಕೆ ಆಕರ್ಷಕವಾಗಿದೆ. ಮೈಸೂರಿಗೆ ಆ ಕಾರಿನಲ್ಲಿ ಆಗಮಿಸಿ ನಂತರ ಚಾಮುಂಡಿ ಬೆಟ್ಟಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ ದರ್ಶನ್.ಅಂದಹಾಗೇ ದರ್ಶನ್ ಗೆ ಕಾರ್ ಕ್ರೇಜ್ ತುಂಬಾನೇ ಇದೆ. ಈಗಾಗಲೇ ಬೇರೆ ಬೇರೆ ಮಾಡೆಲ್ ಗಳ ಕಾರುಗಳ ಸಂಗ್ರಹವಿರುವ ದರ್ಶನ್ ಗೆ ಇದರ ಮೇಲೂ ಮನಸ್ಸಾಗಿದೆ. ಸದ್ಯ ದರ್ಶನ್ ನಿವಾಸಕ್ಕೆ ಬಂದ ಈ ಹೊಸ ಅತಿಥಿ ಕಂಡು ದಚ್ಚು ಫುಲ್ ಖುಷ್ ಆಗಿದ್ದಾರೆ. ಕಾರಿನ ಫೋಟೋಗಳನ್ನು ಡಿ ಬಾಸ್ ಫ್ಯಾನ್ಸ್ ತಮ್ಮ ಅಧಿಕೃತ ಗ್ರೂಫ್ ನಲ್ಲಿ ಹಂಚಿಕೊಂಡಿದ್ದಾರೆ.
Comments