ಅಪ್ಪನ ಜೊತೆ ಸೇರಿಕೊಂಡು ಹಸು ಹಾಲು ಕರೆದ ದರ್ಶನ್ ಪುತ್ರ...!

ಸ್ಯಾಂಡಲ್’ವುಡ್ ನಲ್ಲಿ ದರ್ಶನ್ ಓಡುವ ಕುದುರೆ. ದರ್ಶನ್ ಅವರನ್ನ ಲಕ್ಕಿ ಹ್ಯಾಂಡ್ ಎಂದೇ ಕರೆಯಲಾಗುತ್ತದೆ. ದರ್ಶನ್ ಮತ್ತು ಯಶ್ ಲೋಕಸಭೆ ಚುನಾವಣ ಫಲಿತಾಂಶಕ್ಕಾಗಿ ಬಕ ಪಕ್ಷಿಗಳಂತೇ ಕಾದು ಕುಳಿತಿದ್ದಾರೆ. ಪ್ರಚಾರದ ಬಳಿಕ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿ ಆಗಿರುವ ಡಿ ಬಾಸ್ ಇದೀಗ ಮಗನ ಜೊತೆ ಹಸುವಿನ ಹಾಲು ಕರೆದಿದ್ದಾರೆ. ಮಗ ವಿನೀಶ್ ಜೊತೆ ಸೇರಿ ಹಾಲು ಕರೆದಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದಲ್ಲಿಯೇ ಸೌಂಡು ಮಾಡ್ತಿದೆ. ಮಂಡ್ಯ ಕ್ಷೇತ್ರದ ಚುನಾವಣಾ ಪ್ರಚಾರದ ವೇಳೆ ದರ್ಶನ್ ಬಗ್ಗೆ ವ್ಯಂಗ್ಯವಾಡಿದ್ದ ಮುಖ್ಯಮಂತ್ರಿ ಕುಮಾರ ಸ್ವಾಮಿಗೆ ಮುಟ್ಟಿ ನೋಡಿಕೊಳ್ಳುವಂತೆ ಟಾಂಗ್ ನೀಡಿದ್ದರು ದಚ್ಚು.
ಎಸಿ ಕಾರ್'ನಲ್ಲಿ ಕುಳಿತು ಸಿನಿಮಾ ಶೂಟಿಂಗ್ ಮಾಡೋವ್ರಿಗೆ ರೈತರ ಕಷ್ಟ ಏನ್ ಗೊತ್ತು ಎಂದ ಮುಖ್ಯಮಂತ್ರಿ ಅಂಡ್ ಟೀಮ್'ಗೆ ದಚ್ಚು ತಾಕತ್ತಿದ್ರೇ ಅವರ ಕೈಯಲ್ಲಿ ಒಂದು ಲೋಟ ಹಾಲು ಕರೆಸಿ ಎಂದು ಸವಾಲೆಸಿದ್ದಿದ್ದರು. ಸದ್ಯ ದರ್ಶನ್ ಮಗನಿಗೂ ಪ್ರಾಣಿ-ಪಕ್ಷಿಗಳ ಪ್ರೀತಿ ಬೆಳೆಸಿದ್ದಾರೆ. ಹಸು-ಕರು, ಪ್ರಾಣಿಗಳ ಜೊತೆ ಒಡನಾಟ ಕಲಿಸಿದ್ದಾರೆ. ಅಷ್ಟೇ ಅಲ್ದೇ ತಾವು ಮೊದಲು ಮಾಡುತ್ತಿದ್ದ ಕಸುಬು ಹಾಲು ಕರೆದು, ಹಾಲು ಹಾಕುವುದನ್ನು ಮಗನಿಗೂ ಕಲಿಸಿದ್ದಾರೆ. ಅದಕ್ಕೆ ಸಾಕ್ಷಿ ದರ್ಶನ್ ಪುತ್ರ ವಿನೀಶ್ ಹಾಲು ಕರೆಯುತ್ತಿರುವ ಈ ವಿಡಿಯೋ. ರಜಾ ದಿನಗಳು ಬಂದ್ರೆ ಸಾಕು ಮೈಸೂರಿನಲ್ಲಿರುವ ಫಾರ್ಮ್ ಹೌಸ್ ಗೆ ಅಪ್ಪನಜೊತೆ ಹೋಗುವ ವಿನೀಶ್’ಗೆ ದರ್ಶನ್ ರಂತೇ ಕಾಡೆಂದರೇ ಬಲು ಇಷ್ಟ. ಅಲ್ಲಿನ ಕೆಲಸಗಳ ಬಗ್ಗೆ ದರ್ಶನ್ ಮಗನಿಗೆ ಹೇಳಿಕೊಡುತ್ತಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ತುಂಬಾನೇ ವೈರಲ್ ಆಗ್ತಿದೆ.
Comments