'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದವರು ಕರೆಯದೇ ಸಾಧಕ ಸೀಟ್ ನಲ್ಲಿ ಬಂದು ಕುಳಿತ ಕಾಂಗ್ರೆಸ್ ರಾಜಕಾರಣಿ...? ಫೋಟೋ ವೈರಲ್..!!!

ವಾಹಿನಿಯವರು ಕರೆಯದೇ ವೀಕೆಂಡ್ ಟೆಂಟ್ ನಲ್ಲಿ ಕಾಣಿಸಿಕೊಂಡಿದ್ದಾರೆ ರಾಜಕೀಯದ ನಾಯರೊಬ್ಬರು. ಅಯ್ಯೋ…! ಇದೇನಿದು ಕೇಳಿದ್ರೆ ಅಚ್ಚರಿಯಾಗಬಹುದು ಅಲ್ವಾ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ವೀಕೆಂಡ್ ಟೆಂಟ್ ನಲ್ಲಿ ಆ ನಾಯಕ ಕಾಣಿಸಿಕೊಂಡಿದ್ದಾರೆ. ಆದರೆ ಈ ಬಗ್ಗೆ ವೀಕೆಂಡ್ ವಿತ್ ಕಾರ್ಯಕ್ರಮ ತಂಡವನ್ನು ವಿಚಾರಿಸಿದಾಗ ನಾವು ಇವರನ್ನು ಸಾಧಕರ ಚೇರ್ ನಲ್ಲಿ ಕೂರಿಸಿಲ್ಲ. ಅಷ್ಟೇ ಅಲ್ಲಾ ನಾವು ವಾಹಿನಿಯ ಕಾರ್ಯಕ್ರಮಕ್ಕೆ ಇವರನ್ನು ಇನ್ವೈಟ್ ಮಾಡೇ ಇಲ್ಲ ಎಂದಿದ್ದಾರೆ.
ಸಾಧಕರ ಚೇರಿನಲ್ಲಿ ಪ್ರಭಾವಿ ರಾಜಕಾರಣಿ ಸತೀಶ್ ಜಾರಕಿಹೊಳಿಯವರು ಕೂತ್ಕೊಂಡಿರುವ ಫೋಟೋ ಸೋಶಿಯಲ್ ಮಿಡಿಯಾದಲ್ಲಿ ಭಾರಿಯೇ ಸೌಂಡು ಮಾಡ್ತಿದೆ. ಅಂದಹಾಗೇ ಕಾರ್ಯಕ್ರಮಕ್ಕೆ ಬರದೇ ಇರುವ ಇವರ ಫೋಟೋ ಅದೇಗೆ ವೈರಲ್ ಆಗುತ್ತಿದೆ…?ಜೀ ವಾಹಿನಿಯಲ್ಲಿ ಪ್ರಸಾರವಾಗುವ ವೀಕೆಂಡ್ ವಿತ್ ಕಾರ್ಯಕ್ರಮದಲ್ಲಿ ಅನೇಕರ ಸಾಧಕರ ಜೀವನ, ಹಲವರಿಗೆ ಸ್ಪೂರ್ತಿದಾಯಕ. ಅನೇಕರ ಮನಸ್ಸು ಪರಿವರ್ತಕ. ಇಂತಹ ಸಾಧಕರ ಸೀಟಿನಲ್ಲಿ ಕುಳಿತು, ತಮ್ಮನ್ನು ಪರಿಚಯಿಸಿಕೊಳ್ಳಬೇಕು ಎಂದು ಅದೆಷ್ಟೋ ಜನರು ಸಾಲುಗಟ್ಟಿ ಕಾಯುತ್ತಾರೆ. ಸಾಲಿನಲ್ಲಿ ನಿಂತು ಆ ಸೀಟ್ ಏರಲು ಹವಣಿಸುತ್ತಾ ಇರುವವರು ತುಂಬಾ ಜನ ಇದ್ಧಾರೆ.ಸಾಧಕ ಸೀಟ್ ನಲ್ಲಿ ಕುಳಿತುಕೊಂಡಿರುವ ಸತೀಶ್ ಜಾರಕಿಹೊಳಿಯ ಪೋಟೋ ಇದೀಗ ವೈರಲ್ ಆಗಿದೆ. ವೀಕೆಂಡ್ ವಿತ್ ರಮೇಶ್ ಜತೆ..
ಸಾಧಕ ಸೀಟ್ ನಲ್ಲಿ ಅರಣ್ಯ ಸಚಿವ ಸತೀಶ್ ಜಾರಕಿಹೊಳಿ, ಕುಳಿತಿದ್ದಾರೆ. ಅವರ ಸಾಧನೆ, ನಡೆದು ಬಂದ ಹಾದಿಯ ಬದುಕನ್ನು ಈ ನಾಡಿನ ಜನರಿಗೆ ಪರಿಚಯಿಸುತ್ತಿದ್ದಾರೆ ಎನ್ನುವಂತೆ ಫೋಟೋ ಎಡಿಟ್ ಮಾಡಿ ಹರಿ ಬಿಟ್ಟಿದ್ದಾರೆ. ಹೀಗೆ ಸತೀಶ್ ಜಾರಕಿಹೊಳಿಯವರು ವೀಕ್ ಎಂಡ್ ವಿತ್ ರಮೇಶ್ ಕಾರ್ಯಕ್ರಮದ ಸಾಧಕಸೀಟ್ ನಲ್ಲಿ ಕುಳಿತಿರುವ ಪೋಟೋವನ್ನು ಎಡಿಟ್ ಮಾಡಿ ಬಿಟ್ಟಿರುವ ಅವರ ಅಭಿಮಾನಿಗಳು, ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಇದೀಗ ಆ ಪೋಟೋ ವೈರಲ್ ಆಗಿದ್ದು, ಎಲ್ಲರಲ್ಲಿಯೂ ಕುತೂಹಲ ಮೂಡಿಸಿದೆ ಈ ಫೋಟೋ ನೋಡ್ತಿದ್ರೆ ಇದು ರಮೇಶ್ ಅರವಿಂದ್ ಅವರೇ ಶೋ ವನ್ನು ನಿರೂಪಣೆ ಮಾಡುತ್ತಿದ್ದಾರೆ ಎನ್ನುವಂತಿದೆ.
Comments