ಏಪ್ರಿಲ್ 28 ನನಗೆ ಭಾವನಾತ್ಮಕ ದಿನ ಎಂದ ಬಾಹುಬಲಿ ನಾಯಕ..!!

ಒಬ್ಬರಿಗೆ ಒಬ್ಬೊಬ್ಬರನ್ನು ಕಂಡರೆ ತುಂಬಾ ಇಷ್ಟ.. ಇನ್ನೂ ಕೆಲವರಿಗೆ ಕೆಲವೊಂದು ದಿನಗಳನ್ನು ನೆನಸಿಕೊಂಡರೆ ತುಂಬಾ ಭಾವನಾತ್ಮಕವಾಗಿ ಬಿಡುತ್ತಾರೆ..ಅದೇ ರೀತಿ ಟಾಲಿವುಡ್ ನಟ ಪ್ರಭಾಸ್ ಅಭಿನಯಿಸಿದ ‘ಬಾಹುಬಲಿ 2- ದಿ ಕನ್‍ಕ್ಲೂಶನ್’ ಚಿತ್ರದ ಬಿಡುಗಡೆಯಾಗಿ ಭಾನುವಾರ ಅಂದರೆ ನೆನ್ನೆಗೆ ಎರಡು ವರ್ಷವಾಗಿದೆ. ಈ ದಿನ ನನಗೆ ಎಂದಿಗೂ ಭಾವನಾತ್ಮಕವಾಗಿರುತ್ತೆ ಎಂದು ಪ್ರಭಾಸ್ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಬರೆದುಕೊಂಡು ಎಲ್ಲರ ಜೊತೆ ಹಂಚಿಕೊಂಡಿದ್ದಾರೆ.
ಬಾಹುಬಲಿ 2- ದಿ ಕನ್‍ಕ್ಲೂಶನ್ ಚಿತ್ರದ ಬಿಡುಗಡೆಯಾಗಿ ಎರಡು ವರ್ಷಗಳಾಗಿವೆ.. ಎರಡು ವರ್ಷ ಹೇಗೆ ಕಳೆಯಿತೋ ಗೊತ್ತಿಲ್ಲ… . ಈ ದಿನ ನನಗೆ ಯಾವಾಗಲೂ ಕೂಡ ಎಮೋಶನಲ್ ಆಗಿರುತ್ತದೆ. ಎಸ್‍ಎಸ್ ರಾಜಾಮೌಳಿ ಹಾಗೂ ಇಡೀ ಚಿತ್ರತಂಡಕ್ಕೆ ನಾನು ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದರು... ನನ್ನ ಜೊತೆಯಲ್ಲಿ ಇದ್ದ ಎಲ್ಲ ಅಭಿಮಾನಿಗಳಿಗೆ ಪ್ರೀತಿಯ ಅಪ್ಪುಗೆ ನೀಡಲು ಇಷ್ಟಪಡುತ್ತೇನೆ. ಬಾಹುಬಲಿ ಚಿತ್ರವನ್ನು ಬೆಂಬಲಿಸಿ ಅದನ್ನು ಸೂಪರ್ ಹಿಟ್ ಮಾಡಿದಕ್ಕೆ ಧನ್ಯವಾಗಳು ಎಂದು ಭಾವನಾತ್ಮಕವಾಗಿ ಬರೆದು ಪೋಸ್ಟ್ ಮಾಡಿದ್ದಾರೆ. ಈ ಚಿತ್ರದಲ್ಲಿ ದೊಡ್ಡ ತಾರಾಬಳಗವೇ ಇತ್ತು.. ಚಿತ್ರ ನೋಡಿದವರೆಲ್ಲಾ ಪ್ರಭಾಸ್ ನನ್ನು ಮತ್ತಷ್ಟು ಮೆಚ್ಚಿಕೊಂಡರು.. ಪ್ರಭಾಸ್ ಕೂಡ ಅಷ್ಟೆ ಅಭಿಮಾನಿಗಳು ಎಂದರೆ ತುಂಬಾ ಇಷ್ಟ ಪಡುತ್ತಾರೆ.
Comments