ಮದುವೆಗೂ ಮುನ್ನವೇ ಆ ಸ್ಟಾರ್ ನಟನ ಮೇಲೆ ಕ್ರಶ್ ಇತ್ತಂತೆ ಕಾಜೋಲ್ ಗೆ...? : ಸ್ಫೋಟಕ ಮಾಹಿತಿ ಬಿಚ್ಚಿಟ್ಟ ನಿರ್ಮಾಪಕ...!!!

ಸಿನಿಮಾ ರಂಗದಲ್ಲಿ ಲವ್, ಡೇಟಿಂಗ್, ಮದುವೆ ಬ್ರೇಕ್,ಅಪ್ ಎಲ್ಲಾ ಕಾಮನ್ ಆಗಿ ಬಿಟ್ಟಿದೆ. ಸ್ಟಾರ್ ನಟ-ನಟಿಯರು ಇಂದು ಒಬ್ಬರ ಜೊತೆ ಇದ್ರೆ ಮತ್ತೆ ಕಲವು ದಿನಗಳ ನಂತರ ಇನ್ನೊಬ್ಬರ ಜೊತೆ ಸುತ್ತಾಡುತ್ತಿರುತ್ತಾರೆ. ಅವರವರ ಭಾವನೆಗಳಿಗೆ ತಕ್ಕಂತೇ ಕಂಫರ್ಟಬಲ್ ವ್ಯಕ್ತಿಯನ್ನು ಅಥವಾ ಸಂಗಾತಿಯನ್ನು ಹುಡುಕಿಕೊಂಡಿರುತ್ತಾರೆ. ಅದೇನೆ ಇರಲಿ. ಬಾಲಿವುಡ್ ನಲ್ಲಿ ಅದೆಷ್ಟು ಮಂದಿ ಸ್ಟಾರ್ ಕಪಲ್ ಇದ್ದಾರೆ. ಇಂದಿಗೂ ಅವರ ಜೀವನ ಸುಖವಾಗಿ ಸಂತೋಷವಾಗಿದೆ.ಈಗಾಗಲೇ ಮದುವೆಯಾಗಿ , ಮಕ್ಕಳು ಆಗಿ ಸಿನಿಮಾ ರಂಗದಲ್ಲಿ ಸಾಕಷ್ಟು ದೂರ ಶ್ರಮಿಸಿರುವ ಸ್ಟಾರ್ ಗಳಿಬ್ಬರ ಬಗ್ಗೆ ಕರಣ್ ಜೋಹರ್ ಹೇಳಿರುವ ಮಾತು ಅಭಿಮಾನಿಗಳನ್ನು ನಿದ್ದೆಗೆಡಿಸಿದ್ಯಂತೆ.
ನಟಿ ಕಾಜೋಲ್ ಅವರು ಇಂದು ಅಜಯ್ ದೇವಗನ್ ಜೊತೆ ಮಕ್ಕಳೊಂದಿಗೆ ಸುಖೀ ಸಂಸಾರ ನಡೆಸುತ್ತಿದ್ದಾರೆ. ಸಿನಿಮಾ, ಜಾಹೀರಾತು ಅಂತಾ ಸದಾ ಕಾಲ ಬ್ಯುಸಿ ಇರುವ ಕಾಜೋಲ್ ಟಿವಿ ಕಾರ್ಯಕ್ರಮಗಳಲ್ಲಿ ಬಾಗವಹಿಸುತ್ತಾರೆ. ಸರಳ ಸುಂದರವಾದ ನಟಿಗೆ ದೊಡ್ಡ ಅಭಿಮಾನಿ ಬಳಗವೇ ಇದೆ.ಒಂದಾನೊಂದು ಕಾಲದಲ್ಲಿ ಕಾಜೋಲ್ ಗೂ ಕೂಡ ಒಬ್ಬ ಸ್ಟಾರ್ ನಟನ ಮೇಲೆ ಕ್ರಶ್ ಆಗಿತ್ತಂತೆ. ಇದು ನಮಗೆ ಗೊತ್ತಿದೆ ಎಂದು ನಿರ್ಮಾಪಕ ಕರಣ್ ಜೋಹರ್ ತಿಳಿಸಿದ್ದಾರೆ. ಕಾಜೋಲ್ ಮನಸು ಗೆದ್ದ ಆ ನಟ ಬೇರೆ ಯಾರು ಅಲ್ಲ ಅಕ್ಷಯ್ ಕುಮಾರ್. ಅಕ್ಷಯ್ ಕುಮಾರ್ ಗೂ ಈಗ ಮದುವೆಯಾಗಿ ದಾಂಪತ್ಯ ಜೀವನ ಸುಖಕರವಾಗಿದೆ. ಆದರೆ ಅಂದು ಕಾಜೋಲ್ ಮನಸ್ಸು ಗೆದ್ದಿದ್ದು ನಟ ಅಕ್ಷಯ್ ಕುಮಾರ್ ಅಂತೆ.
ಅಂದಹಾಗೇ ಈಗ ಈ ವಿಚಾರ ಹಳೆಯದಾದರರೂ ಸುದ್ದಿ ಮಾತ್ರ ರಿವೀಲ್ ಮಾಡಿದ್ದು ಇತ್ತೀಚೆಗೆ. ಕರಣ್ ಮತ್ತು ಕಾಜೋಲ್ ಇಬ್ಬರು ಒಂದೇ ಟಿವಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ವೇಳೆ ಕರಣ್, ಕಾಜೋಲ್ ಅವರ ಕೆಲ ರಹಸ್ಯಗಳನ್ನು ಬಿಚ್ಚಿಟ್ಟಿದ್ದಾರೆ. ಆದರೆ ಕಾಜೋಲ್ ಲವ್ ನಲ್ಲಿ ಬಿದ್ದಿದ್ರಾ, ಅಥವಾ ಕ್ರಶ್ ಅಷ್ಟೆನಾ ಬಗ್ಗೆ ಕರಣ್ ಅಡ್ಡಗೋಡೆ ಮೇಲೆ ದೀಪ ವಿಟ್ಟ ಹಾಗೇ ಮಾತನಾಡಿ ಫುಲ್ ಸ್ಟಾಪ್ ಇಟ್ಟಿದ್ದಾರೆ. ಸದ್ಯ ಕಾಜೋಲ್ ಗೆ ಇಬ್ಬರು ಮಕ್ಕಳಿದ್ದಾರೆ. ಅಷ್ಟೇ ಅಲ್ಲಾ, ಇತ್ತೀಚೆಗೆ ನಟ ಅಕ್ಷಯ್ ಕುಮಾರ್ ಅವರು ಮೋದಿಯನ್ನು ಸಂದರ್ಶನ ಮಾಡಿ ವ್ಯಾಪಕ ಪ್ರಶಂಸೆಗಳಿಸಿದ್ದಾರೆ.
Comments