ಸಮಂತಾ ಗೆ ಕನ್ನಡದ ಈ ಸ್ಟಾರ್ ನಟನನ್ನು ಕಂಡರೆ ಸಿಕ್ಕಾಪಟ್ಟೆ ಇಷ್ಟವಂತೆ..!!

ತೆಲುಗಿನ ಟಾಪ್ ನಟಿಯರಲ್ಲಿ ಸಮಂತಾ ಅಕ್ಕಿನೇನಿ ಕೂಡ ಒಬ್ಬರು.. ಸಮಂತಾ ಗೆ ಅಭಿಮಾನಿಗಳ ಬಳಗ ದೊಡ್ಡದೆ ಇದೆ… ತನ್ನ ಅಭಿನಯದ ಮೂಲಕವೇ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ… ಈ ನಟಿ ಸಿನಿಮಾ ರಿಲೀಸ್ ಆಗ್ತಿದೆ ಎಂದರೆ ಸಾಕು ಅದೆಷ್ಟೋ ಪಡ್ಡೆ ಹುಡುಗರು ನಿದ್ದೆ ಇಲ್ಲದೆ ಥಿಯೇಟರ್ ಮುಂದೆ ಹಾಜರಾಗುತ್ತಾರೆ… ಸಣ್ಣ ನಟರಿಂದ ಹಿಡಿದು ಟಾಪ್ ನಟರ ತನಕ ಎಲ್ಲಾ ನಟರ ಜೊತೆ ಅಭಿನಯ ಮಾಡಿರುವ ನಟಿ ಎಂದರೆ ಅದು ಸಮಂತಾ… ಇದೀಗ ಸಮಂತಾ ಬಗ್ಗೆ ಒಂದು ಇನ್ಟ್ರೆಸ್ಟಿಂಗ್ ವಿಷಯ ಬೆಳಕಿಗೆ ಬಂದಿದೆ…
ಇತ್ತಿಚಿಗಷ್ಟೆ ಸಂದರ್ಶನವೊಂದರಲ್ಲಿ ಸಮಂತಾ ಏನ್ ಹೇಳಿದ್ದಾರೆ ಗೊತ್ತಾ..? .ನಮ್ಮ ಕನ್ನಡ ಚಿತ್ರರಂಗ ಯಾವ ಚಿತ್ರರಂಗಕ್ಕೂ ಕಡಿಮೆ ಇಲ್ಲ ಎಂದು ಇತ್ತೀಚಿಗೆ ಸಾಬೀತು ಪಡಿಸಲಾಗಿದೆ. ಹಿಂದಿನ ದಿನಗಳಲ್ಲಿ ಕನ್ನಡ ಚಿತ್ರರಂಗಕ್ಕೆ ಜಾಸ್ತಿ ಪ್ರಾಮುಖ್ಯತೆ ಕೊಡದಿರದ ಜನರು ಈಗ ನಮ್ಮ ಚಿತ್ರರಂಗದಲ್ಲಿ ನಟಿಸಲು ಇಷ್ಟ ಪಡುತ್ತಿದ್ದಾರೆ.. ಕನ್ನಡ ಸಿನಿಮಾ ಇಂಡಸ್ಟ್ರಿ ತುಂಬಾ ಎತ್ರಕ್ಕೆ ಬೆಳೆದಿದೆ ಎಂದಿದ್ದಾರೆ. ಅಷ್ಟೆ ಅಲ್ಲದೆ ಮಾದ್ಯಮದವರು ನಿಮಗೆ ಇಷ್ಟವಾದ ನಟ ಯಾರು ಎಂದು ಕೇಳಿದಾಗ ನನಗೆ ಸುದೀಪ್ ಸರ್ ಎಂದರೆ ತುಂಬಾ ಇಷ್ಟ.ಅವರ ಜೊತೆ ಈಗ ಚಿತ್ರದಲ್ಲಿ ನಟಿಸಿದ್ದು ನನಗೆ ತುಂಬಾ ಖುಷಿ ಕೊಟ್ಟಿದೆ.ಅವರ ಅಭಿನಯ ನೋಡಿ ಬೆರಾಗಾಗಿದ್ದೆ ಅಂತಹ ಅಭಿನಯ ಅವರದ್ದು ಎಂದು ಸುದೀಪ್ ಅವರನ್ನು ಕೊಂಡಾಡಿದ್ದಾರೆ. ಸಮಂತಾ ಸುದೀಪ್ ಅಭಿನಯ ನೋಡಿ ಮೆಚ್ಚಿ ಕೊಂಡಿದ್ದಾರೆ.. ಆಕಸ್ಮಾತ್ ತೆರೆ ಮೇಲೆ ಇವರಿಬ್ಬರಿಗೂ ಅಭಿನಯಿಸೋ ಅವಕಾಶ ಸಿಕ್ಕಿದರೆ ಅಭಿಮಾನಿಗಳು ಖುಷಿ ಪಡುತ್ತಾರೆ…
Comments