ಶಿವಣ್ಣನಿಗೆ ಥ್ಯಾಂಕ್ಸ್ ಹೇಳಿ, ಉಪ್ಪಿಗೆ ಸ್ಸಾರಿ ಕೇಳಿದ ಖ್ಯಾತ ನಟ..?!!!

ತಮಿಳಿನ ಸ್ಟಾರ್ ಒಬ್ಬರು ಶಿವಣ್ಣನಿಗೆ ಥ್ಯಾಂಕ್ಸ್ ಹೇಳಿ, ಉಪ್ಪಿಗೆ ಸ್ಸಾರಿ ಕೇಳಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಕಾಂಚನಾ-3 ಸಿನಿಮಾ ಸದ್ಯ ಬಾಕ್ಸ್ ಆಫೀಸ್ ನಲ್ಲಿ ಸೌಂಡ್ ಮಾಡ್ತಿದೆ. ಈಗಾಗಲೇ ಕಾಂಚನಾ-1 ,ಕಾಂಚನಾ-2 ಸಿನಿ ಪ್ರೇಕ್ಷಕರನ್ನು ರಂಜಿಸಿದ್ದು ಇದೀಗ ಮತ್ತದೇ ಸ್ಟೈಲ್ ನಲ್ಲಿ ಥ್ರಿಲ್ ಕೊಡ್ತಿದ್ಯಂತೆ ಕಾಂಚನಾ-3. ಡ್ಯಾನ್ಸ್ ಕೊರಿಯೋಗ್ರಾಫರ್ ಆದ ರಾಘವ ಲಾರೆನ್ಸ್ ಅವ್ರು ಸದ್ಯ ಕಾಲಿವುಡ್ ನಲ್ಲಿ ಬಹು ಬೇಡಿಕೆ ನಟರಾಗಿದ್ದಾರೆ. ಎರಡು ಭಾಗದಲ್ಲಿ ಲಾರೆನ್ಸ್ ಅವರೇ ಹೀರೋ ಆಗಿ ಅಭಿನಯಿಸಿದ್ದರು.
ಸದ್ಯ ಕಾಂಚನಾ-3 ನಲ್ಲೂ ಅವರೇ ನಾಯಕ ನಟನಾಗಿ ಮುಂದುವರೆದಿದ್ದಾರೆ. ಸಿನಿಮಾ ಹಿಟ್ ಆಗುತ್ತಿದ್ದಂತೇ ಪತ್ರಿಕಾ ಗೋಷ್ಠಿ ನಡೆಸಿಕದ ಲಾರೆನ್ಸ್ ಅವರು ಕನ್ನಡದ ಸ್ಟಾರ್ ನಟರಿಬ್ಬರ ಬಗ್ಗೆ ಮಾತನಾಡಿದ್ದಾರೆ.ಶಿವಣ್ಣನ ಬಗ್ಗೆ ಮಾತನಾಡುತ್ತಾ ಒಂದು ಕಾಲದಲ್ಲಿ ನನಗೆ ಅದೃಷ್ಟ ತಂದುಕೊಟ್ಟಿದ್ದು ಶಿವರಾಜ್ ಕುಮಾರ್ ಅವರು. ಅವರ ಸಿನಿಮಾ ಅಸುರದಲ್ಲಿ ಡ್ಯಾನ್ಸ್ ಕೊರಿಯೋಗ್ರಾಫ್ ಮಾಡಿದ್ದಲ್ಲದೇ, ಸಾಂಗ್ ವೊಂದರಲ್ಲಿ ಸ್ಟೆಪ್ಪು ಕೂಡ ಹಾಕಿದ್ದಾರೆ. ನಾನೇನು ಅಲ್ಲಾ ಎಂದ ದಿವಸದಲ್ಲಿ ನನಗೆ ಅವಕಾಶ ಕೊಟ್ಟ ಹ್ಯಾಟ್ರಿಕ್ ಹೀರೋಗೆ ನಿಜಕ್ಕೂ ನನ್ನ ಧನ್ಯವಾದಗಳು. ನಾನ್ ಎಂದೂಕ ಕನ್ನಡ ಸಿನಿಮಾ ಅಸುರವನ್ನು ಮರೆಯುವುದಿಲ್ಲವೆಂದರು. ಇನ್ನು ಮಾತನಾಡುತ್ತಾ ಸೂಪರ್ ಸ್ಟಾರ್ ಉಪೇಂದ್ರ ಬಗ್ಗೆ ಮಾತನಾಡುತ್ತಾ ಉಪ್ಪಿ ಸರ್ ಅವರನ್ನ ನಾನು ಕ್ಷಮೆ ಕೇಳಬೇಕು. ಉಪ್ಪಿ ಸರ್ ತನ್ನ ಕಾಂಚನಾ ಎರಡು ಭಾಗವನ್ನು ಕನ್ನಡದಲ್ಲಿ ಮಾಡಿದ್ದರು. ಸಿನಿಮಾ ಚೆನ್ನಾಗಿ ಮೂಡಿ ಬಂದತು. ಸಿನಿಮಾ ಕೂಡ ಸಕ್ಸ್’ಸ್ ಆಯ್ತು. ಆದರೆ ಈ ಬಾರಿ ಕಾಂಚನಾ-3 ಸಿನಿಮಾ ಮಾಡಲು ಅವಕಾಶ ಇಲ್ಲ. ಏಕೆಂದರೆ ಕಾಂಚನಾ -3 ನೇರವಾಗಿ ಕನ್ನಡದಲ್ಲಿಯೇ ರಿಮೇಕ್ ಆಗುತ್ತಿದೆ. ಅದಕ್ಕಾಗಿ ಉಪ್ಪಿ ಸರ್ ಗೆ ಕ್ಷಮೆ ಕೇಳಿದ್ದಾರೆ ಲಾರೆನ್ಸ್.
Comments