'ಎಲ್ಲಿಯೂ ಸಲ್ಲದ ಕುಮಾರ್ ಬಂಗಾರಪ್ಪ ಈ ಕೂಡಲೇ ಶಿವಣ್ಣನಲ್ಲಿ ಕ್ಷಮೆ ಕೇಳಬೇಕು' : ಅಭಿಮಾನಿಗಳು ವಾರ್ನಿಂಗ್

ಮಧು ಬಂಗಾರಪ್ಪ ಇತ್ತೀಚೆಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಬಗ್ಗೆ ಹೇಳಿದ ಹೇಳಿಕೆಯೊಂದು ವಿವಾದಕ್ಕೆ ಗುರಿಯಾಗಿತ್ತು. ಶಿವರಾಜ್ ಕುಮಾರ್ ಅಭಿಮಾನಿಗಳು ಮಧು ಬಂಗಾರಪ್ಪ ಅವರನ್ನ ಶಿವಣ್ಣನಲ್ಲಿ ಕ್ಷಮೆ ಕೇಳ ಬೇಕೆಂದು ಒತ್ತಾಯಿಸುತ್ತಿದ್ದಾರೆ. ಅಂದಹಾಗೇ ಶಿವರಾಜ್ ಕುಮಾರ್ ಅಭಿನಯದ ಕವಚ ಸಿನಿಮಾ ರಿಲೀಸ್ ಆಯ್ತು. ಈ ಸಂದರ್ಭದಲ್ಲಿ ನಟ ಶಿವರಾಜ್ಕುಮಾರ್ ರಾಜಕೀಯಕ್ಕೆ ಬರೋದಾದ್ರೆ ಕವಚ ತೆಗೆದಿಟ್ಟು ಬರಲಿ ಅಂತಾ ಬಿಜೆಪಿ ಶಾಸಕ ಕುಮಾರ್ ಬಂಗಾರಪ್ಪ ಲೇವಡಿ ಮಾಡಿದ್ರು. ಇದೀಗ ಈ ಹೇಳಿಕೆ ಖಂಡಿಸಿ ಕುಮಾರ ಬಂಗಾರಪ್ಪ ಕ್ಷಮೆ ಕೇಳುವಂತೆ ಶಿವಣ್ಣನ ಅಭಿಮಾನಿಗಳು ಒತ್ತಾಯಿಸಿದ್ದಾರೆ.
ಕುಮಾರ್ ಬಂಗಾರಪ್ಪ ತಾವು ಅತ್ತ ಸಿನಿಮಾಗೂ ಸಲ್ಲದೆ ಇತ್ತ ರಾಜಕೀಯಕ್ಕೂ ಸಲ್ಲದೆ ಸಿಕ್ಕ ಅವಕಾಶವನ್ನು ಜನಸೇವೆ ಮಾಡುವುದಕ್ಕೆ ಬಳಸಿಕೊಳ್ಳುವುದನ್ನು ಬಿಟ್ಟು ಕನ್ನಡ ಚಿತ್ರರಂಗದ ಹೆಮ್ಮೆಯ ನಟರಾದ ಡಾ.ಶಿವರಾಜಕುಮಾರ್ ಅವರ ಬಗ್ಗೆ ಹೋದಲ್ಲಿ- ಬಂದಲ್ಲಿ ತಮ್ಮ ಸ್ವಾರ್ಥ ಹಾಗೂ ಕೊಳೆತ ರಾಜಕೀಯಕ್ಕೆ ಬಳಸಿಕೊಳ್ಳುತ್ತಿರುವುದು ಅತ್ಯಂತ ನೀಚ ಹಾಗೂ ಕೆಟ್ಟ ವ್ಯಕ್ತಿತ್ವವಾಗಿರುತ್ತದೆ.ಶಿವರಾಜ್ ಕುಮಾರ್ ಒಬ್ಬರು ಪ್ರತಿಭಾನ್ವಿತ ನಟ. ಅವರು ಕವಚ ಸಿನಿಮಾ ಪ್ರಮೋಷನ್ ನಲ್ಲಿ ತೊಡಗಿಸಿಕೊಂಡಿದ್ದರು.. ಅವರು ಅವರ ಪಾಡಿಗೆ ಸಿನಿಮಾ ಪ್ರಚಾರದಲ್ಲಿ ತೊಡಗಿಸಿಕೊಂಡರೇ ಅದನ್ನು ರಾಜಕೀಯ ಅಂತಿರಲ್ಲಾ ರೀ , ಕುಮಾರ ಬಂಗಾರಪ್ಪ.
ಹೀಗಂತಾ ಕುಮಾರ್ ಬಂಗಾರಪ್ಪನಿಗೆ ಶಿವಣ್ಣನ ಅಭಿಮಾನಿಗಳು ಕ್ಲಾಸ್ ತೆಗೆದುಕೊಂಡಿದ್ದಾರೆ.ಪದೇ ಪದೇ ಶಿವಣ್ಣನ ವಿಚಾರಕ್ಕೆ ಬಂದು, ನಮ್ಮನ್ನು ಕೆಣಕುತ್ತಿದ್ದರೇ ನಾವು ಸುಮ್ಮನೇ ಕೂರುವುದಿಲ್ಲವೆಂದು ಕುಮಾರ್ ಬಂಗಾರಪ್ಪನವರಿಗೆ ಎಚ್ಚರಿಕೆ ನೀಡಿದ್ದಾರೆ.ಅಂದಹಾಗೇ ಶಿವರಾಜ್ ಕುಮಾರ್ ಅವರು ಕನ್ನಡಿಗರ ಆಸ್ತಿ. ಅವರ ತಂಟೆಗೆ ಬಂದ್ರೆ ಹುಷಾರ್ ಎಂದಿದ್ದಾರೆ. ಈ ಕೂಡಲೇ ಕುಮಾರ್ ಬಂಗಾರಪ್ಪನವರು ಶಿವರಾಜ್ ಕುಮಾರ್ ಅವರಲ್ಲಿ ಕ್ಷಮೆ ಕೇಳಬೇಕು ಎಂದು ಸೋಶಿಯಲ್ ಮಿಡಿಯಾಸದಲ್ಲಿ ಅಭಿಯಾನ ಆರಂಭಮಾಡಿದ್ದಾರೆ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿಮಾನಿಗಳು.
Comments