ಮೀಟೂ ಆರೋಪದ ನಟ ರಾಧಿಕ ಕುಮಾರಸ್ವಾಮಿಯನ್ನು ತಬ್ಬಿಕೊಂಡಿದ್ಯಾಕೆ…?

ಕೆಲವು ತಿಂಗಳುಗಳ ಹಿಂದೆ ಸ್ಯಾಂಡಲ್ ವುಡ್ ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದ್ದು ಮೀಟೂ ಆರೋಪ…ಅರ್ಜುನ್ ಸರ್ಜಾ ಅವರ ವಿರುದ್ದ ಶೃತಿ ಹರಿಹರನ್ ಮಾಡಿದ್ದ ಆರೋಪ ಸ್ಯಾಂಡಲ್ ವುಡ್ ನನ್ನೆ ಬೆಚ್ಚಿಬೀಳಿಸಿತ್ತು…ಇದೀಗ ಅರ್ಜುನ್ ಸರ್ಜಾ ರಾಧಿಕ ಕುಮಾರಸ್ವಾಮಿಯವರನ್ನು ತಬ್ಬಿಕೊಂಡ ವಿಡಿಯೋ ಫುಲ್ ವೈರಲ್ ಆಗಿದೆ.
ರಾಧಿಕ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡವರು.. 2002ರಲ್ಲಿ ನಿನಗಾಗಿ ಕನ್ನಡ ಚಿತ್ರದ ಮೂಲಕ ಚಿತ್ರ ರಂಗಕ್ಕೆ ಕಾಲಿಟ್ಟು ಸಿನಿ ಜರ್ನಿ ಆರಂಭಿಸಿದ್ದರು ಮದುವೆಯಾದ ಮೇಲೆ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿ ಸ್ವೀಟಿ ಎನ್ನುವ ಸಿನಿಮಾವನ್ನು ಮಾಡಿದರು..ಇದೀಗ ರಾಧಿಕ ಕುಮಾರಸ್ವಾಮಿಯ ವಿಡಿಯೋವೊಂದು ವೈರಲ್ ಆಗಿದ್ದು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.. ಹೌದು ರಾಧಿಕಾ ಹಾಗೂ ಅರ್ಜುನ್ ಸರ್ಜಾ ಕಾಂಟಾಕ್ಟ್ ಚಿತ್ರದಲ್ಲಿ ನಟಿಸುತ್ತಿದ್ದು, ಈ ಚಿತ್ರದಲ್ಲಿ ಹೋಮ್ಲಿ ಲುಕ್ನಲ್ಲಿ ಕಾಣಿಸಿಕೊಂಡಿರುವ ರಾಧಿಕಾ ಅರ್ಜುನ್ ಸರ್ಜಾ ಜೊತೆ ಮೈಚಳಿ ಬಿಟ್ಟು ನಟಿಸಿದ್ದಾರೆ. ಇದೇ ಚಿತ್ರದಲ್ಲಿ ಅಚ್ಚ ಕೆಂಪಿನ ಸೀರೆ ಕಂಗೊಳಿಸುವ ರಾಧಿಕಾ ಅರ್ಜುನ್ ಸರ್ಜಾರನ್ನು ತಬ್ಬಿಕೊಳ್ಳುವ ವಿಡಿಯೋವೊಂದು ಈಗ ಲೀಕ್ ಆಗಿದ್ದು, ಎಲ್ಲೆಡೆ ವೈರಲ್ ಆಗಿದೆ. ಇದೀಗ ರಾಧಿಕ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ಧಾರೆ.
Comments