ಮುಖ್ಯಮಂತ್ರಿ ಕುಮಾರ ಸ್ವಾಮಿಗೆ ಸವಾಲೆಸೆದ ಚಾಲೆಂಜಿಂಗ್ ಸ್ಟಾರ್...!!!
ಲೋಕಸಭೆಯಲ್ಲಿ ಸ್ಟಾರ್’ಗಳಾದ ಯಶ್ ಮತ್ತು ದರ್ಶನ್ ಅವರು ಕುಮಾರ ಸ್ವಾಮಿ ಅವರಿಗೆ ಸವಾಲೊಂದನ್ನು ಹಾಕಿದ್ದಾರೆ. ಅಂದಹಾಗೇ ಸ್ಟಾರ್’ಗಳನ್ನು ಹಿಗ್ಗಾ-ಮುಗ್ಗಾ ಟೀಕೆ ಮಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸವಾಲೊಂದನ್ನು ಹಾಕಿದ್ದಾರೆ. ದರ್ಶನ್, ಲೋಕಸಭೆ ಕ್ಯಾಂಪೇನ್ ಮುಗಿದ ಮೇಲೆ ಒಂದಷ್ಟು ವಿಶ್ರಾಂತಿಗೆ ಜಾರಿದ್ದಾರೆ. ಈ ನಡುವೆ ಸಾಮಾಜಿಕ ಕಾರ್ಯಗಳಲ್ಲಿ ಭಾಗಿಯಾಗುವ ದರ್ಶನ್ ಇಂದು ನಗರದ ಬಿಐಟಿ ಕಾಲೇಜಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಿದ್ಯಾರ್ಥಿಗಳ ಜೊತೆ ಮಾತನಾಡುವಾಗ ನಾವೆಲ್ಲಾ ಇಲ್ಲಿ ನೆಮ್ಮದಿಯಾಗಿ ಇದ್ದೀವಿ ಅಂದರೆ ಅದಕ್ಕೆ ಕಾರಣ ನಮ್ಮನ್ನು ಕಾಯುತ್ತಿರುವ ಸೈನಿಕರು.
ಅದೇ ರೀತಿ ತುಂಬಾ ಕಡೆ ಸಾಲಮನ್ನ ಮಾಡಿಲ್ಲ, ಮಾಡಿಲ್ಲ ಎಂದು ಹೇಳುತ್ತಿದ್ದರು. ಆದರೆ ರೈತರ ಸಾಲಮನ್ನಾ ಮಾಡುವುದು ಬೇಡ. ಅವರಿಗೆ ಬೆಂಬಲ ಕೊಟ್ಟರೆ ಸಾಕು ರೈತರೇ ತಮ್ಮ ತಮ್ಮ ಸಾಲವನ್ನು ತೀರಿಸಿಕೊಳ್ಳುತ್ತಾರೆ. ರೈತರಿಗೆ ಸಾಲ ತೀರಿಸುವ ಶಕ್ತಿ ಇದೆ ಎಂದು ಹೇಳಿದ್ದಾರೆ.ನಿಮಗೆ ರೈತರ ಸಾಲಮನ್ನಾ ಮಾಡಲು ಸಾಧ್ಯವಾಗದೇ ಇದ್ದರೆ, ಅವರಿಗೆ ಬೆಂಬಲ ಬೆಲೆ ಕೊಡಿ. ಆಗ ರೈತರೇ ಸಾಲ ತೀರಿಸುತ್ತಾರೆ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದ್ದಾರೆ. ಅಂದಹಾಗೇ ದರ್ಶನ್ ಅಭಿನಯದ ಯಜುಮಾನ ಸಿನಿಮಾ ಕಟೌಟ್'ನ್ನು ಕಾಲೇಜಿನ ಆವರಣದಲ್ಲಿ ನಿಲ್ಲಿಸಲಾಗಿತ್ತು. ದರ್ಶನ್ ಅವರು ಬರುತ್ತಿದ್ದಂತೇ ವಿದ್ಯಾರ್ಥಿಗಳು ಡಿ ಬಾಸ್ ಡಿ ಬಾಸ್ ಎಂದು ಜೋರಾಗಿ ಕೂಗುತ್ತಿದ್ದರು. ಅಲ್ಲದೇ ದರ್ಶನ್ ಬಾಯಿಂದ ಡೈಲಾಗ್ ಕೇಳಲು ಡೈಲಾಗ್ ಪ್ಲೀಸ್, ಡೈಲಾಗ್ ಪ್ಲೀಸ್ ಎಂದು ಕೇಳುತ್ತಿದ್ದರು. ಅದಕ್ಕಾಗಿ ಅವರು ಏ ಕ್ಯಾಡ್ಬರೀಸ್…ಸ್ಟೂಡೆಂಟ್ಸ್ ನಡೆದಿದ್ದೇ ದಾರಿ’ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ ಕಾಲೇಜಿನ ವಿದ್ಯಾರ್ಥಿಗಳೆಲ್ಲಾ ಸೇರಿ ದರ್ಶನ್ ಗೆ ಗದೆಯೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ತಮಗೆ ನೀಡಿದ್ದ ಗದೆಯನ್ನು ಅದೇ ವೇದಿಕೆ ಮೇಲೆ ಎಂಜಿನಿಯರ್ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ದಾನ ಮಾಡಿದ್ದಾರೆ.
Comments