ಸಲ್ಮಾನ್ ಜೊತೆ ನಟಿಸೋಕೆ ಸುದೀಪ್ಪೇ ಬೇಕೆಂದು ಹಠ ಹಿಡಿದವರು ಯಾರ್ ಗೊತ್ತಾ..?!!!

ಸಲ್ಮಾನ್ ಜೊತೆ ನಟಿಸಲು ಸುದೀಪ್ ಗೆ ಆಫರ್ ಕೊಟ್ಟಿದ್ದು, ಅಥವಾ ಸುದೀಪ್ ಅವರ ಹೆಸರು ಹೇಳಿದ್ದೇ ಮತ್ತೊಬ್ಬ ಕನ್ನಡಿಗ. ಈಗಾಗಲೇ ಬಿ ಟೌನ್ ನಲ್ಲಿ ದಂಬಾಗ್-3 ಬಹಳವೇ ಸದ್ದು ಮಾಡ್ತಿದೆ. ಹೇಳಿ ಕೇಳಿ ಸಲ್ಲು ಸಿನಿಮಾ ಅಂದ್ರೆ ಸುಮ್ನೆನಾ. ಬಿಗ್ ಬಜೆಟ್ ನಲ್ಲಿ ಮೂಡಿ ಬರುತ್ತಿರುವ ದೊಡ್ಡ ಸಿನಿಮಾಗೆ ಸುದೀಪ್ ಸದ್ಯದಲ್ಲೇ ಸೇರಿಕೊಳ್ತಾರೆ. ಪೈಲ್ವಾನ್ ಮತ್ತು ಕೋಟಿಗೊಬ್ಬ ಸಿನಿಮಾ ಶೂಟಿಂಗ್ ಕಂಪ್ಲೀಟ್ ಆಗಿದ್ದು ಕಿಚ್ಚ ಇನ್ನೇನು ದಬಾಂಗ್ ಮಾಡೋಕೇ ಹೊರಡುತ್ತಾರೆ.
ಅದಕ್ಕೂ ಮುಂಚೆ ಸಲ್ನಾನ್ ಖಾನ್ ಜೊತೆ ನಟಿಸಲು ಸೂಕ್ತ ವ್ಯಕ್ತಿ ಯಾರು ಎಂದು ಚರ್ಚೆ ಮಾಡುತ್ತಿದ್ದ ಸಂದರ್ಭದಲ್ಲಿ ಕಿಚ್ಚನ ಹೆಸರು ಪ್ರಸ್ತಾಪವಾಯ್ತಂತೆ.ಕಿಚ್ಚನ ಹೆಸರು ಕೇಳುತ್ತಿದ್ದಂತೇ ಅಲ್ಲಿದ್ದವರೆಲ್ಲಾ ಹೋ… ಅವರಾ ಎಂದು ಖುಷಿ ಪಟ್ಟರಂತೆ. ದಬಾಂಗ್-3 ನಲ್ಲಿ ನಟಿಸೋಕೆ ಸುದೀಪ್ ಹೆಸರು ಸೂಚಿಸಿದ್ದು ಯಾರು ಗೊತ್ತಾ..?ದಬಾಂಗ್ ನಲ್ಲಿ ನಟಿ ಸೋನಾಕ್ಷಿ ಸಿನ್ಹಾ ನಾಯಕಿಯಾಗಿ ಕಾಣಿಸಿಕೊಳ್ತಿದ್ದಾರೆ. ಸಲ್ಮಾನ್ ಖಾನ್ ಹೀರೋ ಆಗಿ ಆ್ಯಕ್ಟ್ ಮಾಡ್ತಿದ್ದಾರೆ. ಇನ್ನುಳಿದಂತೇ ಸಿನಿಮಾ ನಿರ್ದೇಶನ ಮಾಡ್ತಾ ಇರೋದು ಪ್ರಭುದೇವ, ಇನ್ನು ಚಿತ್ರಕ್ಕೆ ಬಂಡವಾಳ ಹಾಕ್ತಿರೋದು ಸಲ್ಮಾನ್ ಸಹೋದರ ಅರ್ಬಾಜ್ ಖಾನ್. ಅಷ್ಟಕ್ಕೂ ಸ್ಕ್ರಿಪ್ಟ್ ಚರ್ಚೆ-ಮಾತುಕತೆಯಲ್ಲಿ ಯಾರನ್ನು ಸೆಲೆಕ್ಟ್ ಮಾಡ ಬೇಕು ಎಂದಾಗ ಥಟ್ ಎಂದು ಪ್ರಭುದೇವ ಅವರು ಸುದೀಪ್ ಹೆಸರು ಹೇಳಿದರಂತೆ. ನಟ ಪ್ರಭುದೇವ ಸುದೀಪ್ ಈ ಪಾತ್ರ ಮಾಡಲೇ ಬೇಕು, ಅವರು ಬಿಟ್ಟು ಬೇರೆ ಬೇಡ. ನನಗೆ ಸುದೀಪ್ ಅವರೇ ಬೇಕೆಂದು ಹಠ ಹಿಡಿದರಂತೆ. ಅಷ್ಟೇ ಅಲ್ಲದೇ ಸಿನಿಮಾದಲ್ಲಿ ಸುದೀಪ್ ನಟಿಸುವುದನ್ನು ಖುಷಿ ಪಟ್ಟರಂತೆ ಸಿನಿ ತಂಡ.ಇನ್ನು ಕಿಚ್ಚನನ್ನು ಕರೆ ತರಲು ಕಷ್ಟವಾಗಿಲ್ವಂತೆ ಚಿತ್ರತಂಡಕ್ಕೆ. ಕಾರಣ ಸಲ್ಮಾನ್ ಸಹೋದರ ಸೂಯೆಜ್ ಖಾನ್ ಸುದೀಪ್ ಆತ್ಮೀಯ ಸ್ನೇಹಿತನಂತೆ. ಇಬ್ಬರು ಸೇರಿ ಕ್ರಿಕೆಟ್ ಆಡ್ತಾರಂತೆ. ಸೋ ಫ್ರೆಂಡ್ ಹೇಳಿದ ಮೇಲೆ, ಬಿ ಟೌನ್ ಬ್ಯಾಡ್ ಬಾಯ್ ಜೊತೆ ಸ್ಕ್ರೀನ್ ಶೇರ್ ಮಾಡಿಕೊಳ್ತಿದ್ದಾರೆ ಅಭಿನಯ ಚಕ್ರವರ್ತಿ.
Comments