ಕಸದ ತೊಟ್ಟಿಯಲ್ಲಿದ್ದ ಅನಾಥ ಹೆಣ್ಣು ಮಗು ಇದೀಗ ಬಣ್ಣದ ಜಗತ್ತಿಗೆ ಎಂಟ್ರಿ
ಹೆಣ್ಣು ಮಕ್ಕಳು ಅಂದರೆ ಸಾಕಷ್ಟು ಜನಕ್ಕೆ ಆಲಸ್ಯ.. ಹುಟ್ಟಿದ ತಕ್ಷಣ ಹೆಣ್ಣು ಮಕ್ಕಳನ್ನು ಅನಾಥಶ್ರಮಕ್ಕೆ ಬಿಟ್ಟು ಬಿಡುತ್ತಾರೆ.. ಆದರೆ ಇನ್ನೂ ಕೆಲವರು ಚರಂಡಿ ಒಳಗೆ ಹಾಕಿಬಿಡುತ್ತಾರೆ.. ಜಗತ್ತು ಎಷ್ಟೆ ಮುಂದುವರೆದರೂ ಕೂಡ ಕೆಲವರ ಬುದ್ದಿ ಮಾತ್ರ ಬದಲಾಗುವುದಿಲ್ಲ .. ಈ ರೀತಿ ಕಸದ ತೊಟ್ಟಿಯಲ್ಲಿ ಸಿಕ್ಕ ಮಗುವೊಂದು ಇದೀಗ ಬಾಲಿವುಡ್ ಗೆ ಎಂಟ್ರಿ ಕೊಡಲಿದ್ದಾಳೆ.. ಅರೇ ಹೌದಾ ಅನ್ನಬೇಡಿ,, ಇದು ನಿಜವಾಗಿ ನಡೆದಿರುವ ಘಟನೆ…
ಹೆಣ್ಣು ಮಗುವೊಂದು ಕಸದ ತೊಟ್ಟಿಯಲ್ಲಿ ಇದ್ದದ್ದನ್ನ ನೋಡಿ ಯಾರೋ ಒಬ್ಬರು ಶಿಶು ಸಂರಕ್ಷಣಾ ಕೇಂದ್ರಕ್ಕೆ ಆ ಮಗುವನ್ನು ಒಪ್ಪಿಸಿದ್ದಾರೆ.. ಬಾಲಿವುಡ್ ನಟನೊಬ್ಬ ಆ ಮಗುವನ್ನು ನೋಡಿ ಮನಸು ಮರುಗಿ ಆ ಮಗುವನ್ನು ದತ್ತು ಪಡೆದು ಆ ಮಗುವಿಗೆ ದಿಶಾನಿ ಎಂದು ಹೆಸರಿಟ್ಟಿದ್ದಾರೆ… ಅದಾಗಲೇ ಆ ಬಾಲಿವುಡ್ ದಂಪತಿಗೆ ಮೂರು ಮಕ್ಕಳಿದ್ದರು ಕೂಡ ಈ ಮಗುವನ್ನು ದತ್ತು ಪಡೆದರು..ಬಾಲಿವುಡ್ ನಟ ಮಾಡಿದ ಆ ಕೆಲಸಕ್ಕೆ ಎಲ್ಲರೂ ಕೂಡ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದರು.. ಆ ಬಾಲಿವುಡ್ ನಟ ಯಾರು ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಿರಬಹುದು… ಈ ದತ್ತು ಮಗಳ ತಂದೆ-ತಾಯಿ ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ಹಾಗೂ ಇವರ ಪತ್ನಿ ಯೋಗಿತಾ ಬಾಲಿ.. ಇದೀಗ ನ್ಯೂಯಾರ್ಕ್ನಲ್ಲಿ ಅಭಿನಯ ತರಬೇತಿ ಪಡೆಯುತ್ತಿರುವ ದಿಶಾನಿ, ಸೋಷಿಯಲ್ ಮೀಡಿಯಾದಲ್ಲಿ ಆಗಾಗ ತಮ್ಮ ಫೋಟೋಗಳನ್ನು ಹಾಕಿ ಪ್ರಖ್ಯಾತಿ ಪಡೆಯುತ್ತಿದ್ದಾರೆ. ಬಾಲಿವುಡ್ಗೆ ಬರುವ ಮುನ್ನವೇ ಎಲ್ಲರ ಗಮನ ತಮ್ಮತ್ತ ಸೆಳೆಯುತ್ತಿದ್ದಾರೆ.
Comments