ಪೊಲೀಸ್ ಅಧಿಕಾರಿಯಾಗಿ ಸ್ಯಾಂಡಲ್ವುಡ್ಗೆ ರೀ ಎಂಟ್ರಿ ಕೊಟ್ಟಿ ಲಕ್ಷ್ಮಿ ರೈ
ನಟಿಮಣಿಯರಿಗೆ ಒಂದು ಸಿನಿಮಾವಾದ ಮೇಲೆ ಮತ್ತೊಂದು ಸಿನಿಮಾದ ಆಫರ್ ಸಿಗುವುದು ಸ್ವಲ್ಪ ಕಷ್ಟವೇ ಸರಿ.. ಇದರಿಂದ ಸ್ಯಾಂಡಲ್ ವುಡ್ ಕೂಡ ಹೊರತಾಗಿಲ್ಲ… ಸಾಲು ಸಾಲು ಸಿನಿಮಾಗಳನ್ನು ಮಾಡುವುದು ಕೆಲವು ನಟಿಯರು ಮಾತ್ರ… ಇನ್ನೂ ಕೆಲವರು ಒಂದೆರಡು ಸಿನಿಮಾ ಮಾಡಿ ಪರಭಾಷೆಯತ್ತ ಮುಖ ಮಾಡಿಬಿಡುತ್ತಾರೆ. ಇದೇ ಸಾಲಿಗೆ ಕನ್ನಡದ ಕರಾವಳಿ ಹುಡುಗಿ ಕೂಡ ಸೇರಿಕೊಳ್ಳುತ್ತಾರೆ.
ಕನ್ನಡದ ಕರಾವಳಿ ಬೆಡಗಿ ನಟಿ ಲಕ್ಷ್ಮಿ ರೈ ಸದ್ಯ ದಕ್ಷಿಣ ಭಾರತದ ಬೇರೆ ಭಾಷೆಗಳಲ್ಲಿ ತುಂಬಾ ಹೆಸರು ಮಾಡುತ್ತಿದ್ದಾರೆ. ಅದರಲ್ಲೂ ಹಸಿ ಬಿಸಿ ದೃಶ್ಯಗಳು ಹಾಗೂ ಬೋಲ್ಡ್ ಪಾತ್ರಗಳಲ್ಲೇ ಲಕ್ಷ್ಮಿ ರೈ ಕಾಣಿಸಿಕೊಳ್ಳುತ್ತಿದ್ದಾರೆ. ಕನ್ನಡದಲ್ಲಿ ಸ್ನೇಹನಾ ಪ್ರೀತಿನ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್’ಗೆ ಜೋಡಿಯಾಗಿದ್ದರು.. ನಂತರ ಸುಮಾರು ವರ್ಷಗಳ ಹಿಂದೆ ಉಪ್ಪಿ ಅಭಿನಯದ ಕಲ್ಪನ ಚಿತ್ರದಲ್ಲಿ ಅಭಿನಯಿಸಿದ್ದರು.. ನಂತರ ದಕ್ಷಿಣ ಭಾರತದ ಬೇರೆ ಭಾಷೆಗಳಲ್ಲಿ ತುಂಬಾ ಲಕ್ಷ್ಮಿ ರೈ ಬ್ಯುಸಿಯಾಗಿದ್ದರು. ಹಾಗೂ ಕೆಲ ತಿಂಗಳ ಹಿಂದೆ ಬಾಲಿವುಡ್ ನ ಜೂಲಿ – 2 ಚಿತ್ರದಲ್ಲಿ ನಟಿಯಾಗಿ ಬಹಳ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು. ಸದ್ಯ ಇದೀಗ ಲಕ್ಷ್ಮಿ ಸ್ಯಾಂಡಲ್ ವುಡ್ ಗೆ ರೀ ಎಂಟ್ರಿ ಕೊಡುತ್ತಿದ್ದಾರೆ. ಅದು ಸಹ ಖಡಕ್ ಪೊಲೀಸ್ ಅಧಿಕಾರಿಯಾಗಿ ‘ಝಾನ್ಸಿ’ ಎಂಬ ಚಿತ್ರದಲ್ಲಿ ಅಭಿನಯಿಸಿದ್ದಾರೆ.. ಈ ಪಾತ್ರಕ್ಕಾಗಿ ಅವರು ಜಿಮ್ನಲ್ಲಿ ಬೆವರಿಳಿಸುವುದರೊಂದಿಗೆ, ಮಾರ್ಷಲ್ ಆರ್ಟ್ಸ್ ಸಹ ಕಲಿತ್ತಿದ್ದಾರೆ. ಅವರ ಕೆಲವು ಫೋಟೋಗಳು ಈಗ ವೈರಲ್ ಆಗಿದೆ. ಇವರ ಪೋಟೋಗಳನ್ನು ನೋಡಿ ಸ್ಯಾಂಡಲ್ ವುಡ್ ಮರುಳಾಗಿದೆ.
Comments