ಅಡ್ಡ ಮಾತ್ರ ಕೆಜಿಎಫ್'ದ್ದು, ಹವಾ ಕ್ರಿಯೇಟ್ ಮಾಡಿದ್ದು ಮಾತ್ರ ದರ್ಶನ್ ಮತ್ತು ಮೋದಿ..!!!
ನಿನ್ನೆಯಷ್ಟೇ ಕೆಜಿಎಫ್-2 ಆಡಿಷನ್ ಜೋರಾಗಿಯೇ ನಡೆದಿದೆ. ಆಡಿಷನ್’ಗೆ ಬಂದ ಜನ ಸಾಗರ ನೋಡಿ ಕೆಜಿಎಫ್ ಸಿನಿ ತಂಡವೇ ಅಚ್ಚರಿ ಪ ಟ್ಟಿದ್ಯಂತೆ. ಹೇಳಿ ಕೇಳಿ ಯಶ್ ಅವರ ಜೊತೆ ನಟಿಸೋಕೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಆದರೆ ಈ ಪರಿ ಕನ್ನಡ ಸಿನಿಮಾವೊಂದಕ್ಕೆ ಸಣ್ಣ ಅವಕಾಶಕ್ಕಾಗಿ ಕಾಯ್ತಾ ಇದ್ದುದ್ದು ಮಾತ್ರ ವಿಶೇಷ. ಬೆಂಗಳೂರಿನ ಮಲ್ಲೇಶ್ವರಂ ನಲ್ಲಿ ನಡೆಯುತ್ತಿದ್ದ ಆಡಿಷನ್ ಗೆಂದು ಬಂದ ಜನ ನೋಡಿ ಕಕ್ಕಾಬಿಕ್ಕಿಯಾಗಿದ್ದಾರೆ ಸಿನಿ ತಂಡ. ನಮ್ಮ ಕನ್ನಡಿಗರಷ್ಟೇ ಅಲ್ಲ ಬೇರೆ ದೇಶದ ಪ್ರಜೆ ಕೂಡ ಈ ಆಡಿಷನ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ಅಷ್ಟೇ ಅಲ್ಲಾ ಮೋದಿ ಕೂಡ ಆಡಿಷನ್ ನಲ್ಲಿ ಕಾಣಿಸಿಕೊಂಡು ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. ಅಯ್ಯೋ ನಿಜ ರೀ….ಮೋದಿಯನ್ನು ಕಂಡು ಆಡಿಷನ್ ನಲ್ಲಿದ್ದವರು ಶಾಕ್ ಆಗಿದ್ದಂತೂ ನಿಜ. ಹೌದು ….ಅಂದ್ರೆ ಥೇಟ್ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಂತೆ ಉಡುಗೆ ತೊಡುಗೆಯಲ್ಲಿ, ಅದೇ ಸ್ಟೈಲಲ್ಲಿ ಒಬ್ರು ಆಡಿಷನ್‌ಗೆ ಕೈಬೀಸ್ತಾ ಬಂದ್ರು. ಇವ್ರು ಆಡಿಶನ್‌ನಲ್ಲಿ ಭಾಗವಹಿಸೋಕೆ ಬಂದವರು. ಇನ್ನು, ಆಫ್ರಿಕಾದ ಪ್ರಜೆಯೊಬ್ರು ಕೂಡ ಆಡಿಶನ್‌ನಲ್ಲಿ ಭಾಗವಹಿಸೋಕೆ ದೂರದಿಂದ ಬಂದಿದ್ರು. ಅಂದಹಾಗೇ ಇವರು ಉಳಿದುಕೊಂಡಿರುವುದು ಬೆಂಗಳೂರಿನ ಯಲಹಂಕಾದಲ್ಲಿ. ಇವರು ಅದಾಗಲೇ ಕೆಜಿಎಫ್-1 ನೋಡಿ ಫಿದಾ ಆಗಿಬಿಟ್ಟಿದ್ದರು. ಯಶ್ ಅಭಿಮಾನಿಯಾಗಿದ್ದ ಆಫ್ರಿಕಾದ ಈ ಹುಡುಗ ಯಶ್ ಅವರ ಕಟಟ್ಆ ಅಭಿಮಾಣಿಯಂತೆ. ಆದರೆ ಆಡಿಷನ್ ನಲ್ಲಿ ದರ್ಶನ್ ಅವರ ಬುಲ್ ಬುಲ್ ಮಾತಾಡಕಿಲ್ವಾ ಡೈಲಾಗ್ ಮೂಲಕ ಎಲ್ಲರನ್ನುಅಚ್ಚರಿಗೊಳಿಸಿದ್ದಾರೆ. ಅಷ್ಟೇ ಅಲ್ಲ ಆಡಿಶನ್‌ನಲ್ಲಿ 1 ನಿಮಿಷದ ಡೈಲಾಗ್ ಹೇಳಿದ್ರಂತೆ. ಗಾಂಚಾಲಿ ಬಿಡಿ ಕನ್ನಡ ಮಾತಾಡಿ ಅಂತಾ ಕನ್ನಡದ ಡೈಲಾಗ್ ಹೊಡೆದಿದ್ದಾರೆ.
Comments