ಮಗುವಿನ ಆರೈಕೆಗೆ ಅಡ್ಡಿಯಾಗುತ್ತಿದೆಯಂತೆ ‘ಈ’ ನಟಿಯ ಮದ್ಯ ವ್ಯಸನ..!!

ಮಧ್ಯವ್ಯಸನ ಅನ್ನೋದು ಮನುಷ್ಯರ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ… ಒಮ್ಮೆ ಕುಡಿಯುವುದನ್ನು ಕಲಿತರೆ ಸಾಕು ಬಿಡುವುದು ತುಂಬಾ ಕಷ್ಟ.. ಚಟಕ್ಕೆ ಬಿದ್ದಂಗೆ ಅನಿಸದೇ ಇರದು.. ಕುಡಿತ ಬಿಡಲು ಎಷ್ಟೆ ಪ್ರಯತ್ನ ಮಾಡಿದರು ಕೂಡ ಬಿಡಲು ಕಷ್ಟ ಸಾಧ್ಯವಾಗುತ್ತದೆ. ಇದೀಗ ನಟಿಯೊಬ್ಬಳಿಗೆ ಇದೇ ಪ್ರಸಂಗ ಎದುರಾಗಿದೆ. ಆಸ್ಕರ್ ಪ್ರಶಸ್ತಿ ವಿಜೇತೆ ಅಮೆರಿಕಾ ನಟಿ ಆನ್ ಹ್ಯಾಥ್ವೇ ಸಿಕ್ಕಾಪಟ್ಟೆ ಮಧ್ಯಪಾನ ಮಾಡುತ್ತಿದ್ದರು.. ಅದನ್ನು ಬಿಡಲು ಆಕೆಗೆ ಕಷ್ಟವಾಗುತ್ತಿತ್ತು…
ಇದೀಗ ಆಕೆ ಮಧ್ಯಪಾನ ಮಾಡದಿರಲು ನಿರ್ಧಾರ ಮಾಡಿದ್ದಾರಂತೆ. ಮದ್ಯಪಾನ ಬಿಡಲು ಮುಖ್ಯ ಕಾರಣ ಮಗ ಎಂದೂ ನಟಿ ಹೇಳಿಕೊಂಡಿದ್ದಾರೆ. ಮೂರು ವರ್ಷದ ಮಗನ ಆರೈಕೆ ಬಹಳ ಮುಖ್ಯ. ಮದ್ಯದ ಚಟದಿಂದ ಮಗನನ್ನು ಸರಿಯಾಗಿ ನೋಡಿಕೊಳ್ಳಲು ಆಗ್ತಿಲ್ಲ ಎಂದಿದ್ದಾರೆ. ನಿಯತಕಾಲಿಕವೊಂದಕ್ಕೆ ಸಂದರ್ಶನ ನೀಡಿದ ನಟಿ, ಮಗುವಾದ್ಮೇಲೆ ತನ್ನ ಜೀವನ ಹೇಗಿದೆ ಎಂಬುದನ್ನು ಹೇಳಿದ್ದಾರೆ. ಮದ್ಯ ಸೇವನೆಯಿಂದಾಗಿ ಮಗನ ಜವಾಬ್ದಾರಿಯನ್ನು ಸಂಪೂರ್ಣವಾಗಿ ನಿಭಾಯಿಸಲು ಸಾಧ್ಯವಾಗ್ತಿಲ್ಲ ಎಂದಿದ್ದಾರೆ. ಮದ್ಯಪಾನವನ್ನು ತುಂಬಾ ಇಷ್ಟಪಡುವ ಆನ್, ಕಳೆದ ಒಂದು ವರ್ಷಗಳಿಂದ ಮದ್ಯಪಾನ ಕಡಿಮೆ ಮಾಡಿದ್ದರಂತೆ. ಮದ್ಯಪಾನ ಮಾಡಿದ ನಂತ್ರ ಅದ್ರ ಹ್ಯಾಂಗ್ ಓವರ್ 5 ದಿನಗಳವರೆಗೆ ಇರುತ್ತದೆ. ಹಾಗಾಗಿ ಮಗುವನ್ನು ಸರಿಯಾಗಿ ನೋಡುಕೊಳ್ಳಲು ಸಾಧ್ಯವಾಗುತ್ತಿರಲ್ಲ ಎಂದಿದ್ದಾರೆ..
Comments