ಬ್ರೇಕ್ ಅಪ್ ಆದ ಕರ್ಣ ಮತ್ತು ಸಾನ್ವಿ ಮತ್ತೆ ಒಂದಾಗ್ತಾರಾ..? ಕ್ಲೂ ಕೊಟ್ರಾ ರಶ್ಮಿಕಾ..!!!
ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಜೋಡಿಗಳಿಗೆ ಕ್ರಶ್ ಆಗೋದು ಕಾಮನ್, ಲವ್ ಆಗೋದು ಕಾಮನ್, ಅದೇ ರೀತಿ ಬ್ರೇಕ್ ಅಪ್ ಆಗೋದು ಕೂಡ ಕಾಮನ್, ಸ್ಯಾಂಡಲ್ ವುಡ್ ನಲ್ಲಿ ಕ್ಯೂಟ್ ಕಪಲ್ ಅಂತಾನೇ ಪೇಮಸ್ ಆಗಿದ್ದು ಕರ್ನಾಟಕದ ಕರ್ಶ್ ಸಾನ್ವಿ ಹಾಗೂ ಕಿರಿಕ್ ಪಾರ್ಟಿ ಕರ್ಣ… ಇವರಿಬ್ಬರ ಜೋಡಿಯನ್ನು ತೆರೆ ಮೇಲೆ ನೋಡಿದ ಅಭಿಮಾನಿಗಳು ಮೇಡ್ ಪಾರ್ ಅದರ್ ಅಂದ್ರು…ಅದೇ ರೀತಿ ಅವರು ನಿಶ್ಚಿತಾರ್ಥ ಕೂಡ ಮಾಡಿಕೊಂಡರು.. ಆದರೆ ಅವರ ಪ್ರೀತಿ ಜಾಸ್ತಿ ದಿನ ಉಳಿಯಲಿಲ್ಲ… ಗೀತಾ ಗೋವಿಂದಂ ಚಿತ್ರದ ನಂತರ ಇವರಿಬ್ಬರ ನಡುವೆ ಬ್ರೇಕ್ ಅಪ್ ಆಗೋಯ್ತು.. ಅಭಿಮಾನಿಗಳು ಇದರಿಂದ ತುಂಬಾ ನಿರಾಶೆ ಮಾಡಿಕೊಂಡಿದ್ದರು…
ಇದೀಗ ಬೇಸರಗೊಂಡ ಅಭಿಮಾನಿಗಳು ಸ್ವಲ್ಪ ಮಟ್ಟಿಗೆ ಖುಷಿ ಪಡುವ ವಿಚಾರ ಸಿಕ್ಕಿದೆ.. ಕ್ಯೂಟ್ ಕಪಲ್ ಆಗಿದ್ದ ರಶ್ಮಿಕಾ ಮತ್ತು ರಕ್ಷಿತ್ ಶೆಟ್ಟಿ ಬ್ರೇಕ್ ಅಪ್ ಇದೀಗ ಪ್ಯಾಚ್ ಅಪ್ ಆಗುವ ಸಂಭವವಿದೆ ಎನ್ನಲಾಗುತ್ತಿದೆ… ಇದಕ್ಕೆ ಪುಷ್ಟಿ ಕೊಡುವಂತೆ ಇದೀಗ ಘಟನೆಯೊಂದು ನಡೆದಿದೆ… ರಶ್ಮಿಕಾ ತನ್ನ ಇನ್ಟಾಗ್ರಾಂ ನಲ್ಲಿ ರಕ್ಷಿತ್ ಜೊತೆಗಿನ ಪೋಟೋಗಳನ್ನು ಇನ್ನೂ ಡಿಲಿಟ್ ಮಾಡಿಲ್ಲ… ಇಬ್ಬರು ಜೊತೆಯಾಗಿದ್ದಾಗ ತೆಗೆದಿದ್ದ ಮುದ್ದಾದ ಫೋಟೊಗಳು, ಪ್ರೀತಿಯಿಂದ ಬರೆದಿದ್ದ ಕ್ಯಾಪ್ಶನ್ಗಳು ಇಂದಿಗೂ ಅಕೌಂಟ್ನಲ್ಲಿ ಹಾಗೆ ಇವೆ. ಇವು ಇಬ್ಬರು ಮತ್ತೆ ಸೇರುತ್ತಾರೆ ಎಂಬುದಕ್ಕೆ ಸಿಕ್ಕ ಸ್ಟ್ರಾಂಗ್ ಪ್ರೂಫ್.. ಅಚ್ಚರಿಯ ಸಂಗತಿ ಅಂದ್ರೆ ಗೀತ ಗೋವಿಂದಂ ಚಿತ್ರದ ಪ್ರಮೋಶನ್ ಫೋಟೋಗಳನ್ನು ಸಹ ಡಿಲಿಟ್ ಮಾಡಿದ್ದಾಳೆ. ಜೊತೆಗೆ ರಕ್ಷಿತ್ ಬಿಟ್ಟರೆ ಮತ್ಯಾವ ನಟನ ಚಿತ್ರಗಳು ಈಕೆಯ ಪ್ರೊಫೈಲ್ನಲ್ಲಿ ಕಾಣುವುದಿಲ್ಲ. ಮನಸ್ತಾಪ ಎಷ್ಟೆ ಬಂದರೂ ನಿಜಪ್ರೀತಿಗೆ ಯಾವಾಗಲೂ ಜಯ ಎಂಬುದನ್ನು ಈ ಜೋಡಿ ಮತ್ತೊಮ್ಮೆ ಸಾಬೀತುಪಡಿಸುತ್ತಾ ಕಾದು ನೋಡ್ಬೇಕಾಗಿದೆ.
Comments