'ನಾನೇದ್ರೂ ರಾಜಕೀಯ ಸೇರಿದ್ರೆ ನನ್ನ ಪತ್ನಿ ಬಿಟ್ಟು ಹೋಗ್ತಾಳೆ'…!!!

'ರಾಜಕೀಯಕ್ಕೆ ಬಂದ್ರೆ ನನ್ನ ಹೆಂಡ್ತಿ ನನ್ನ ಬಿಟ್ಟು ಹೋಗ್ತಾಳೆ; ಇದೀಗ ಈ ಹೇಳಿಕೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿಯೇ ಸುದ್ದಿಯಾಗಿದೆ. ಅಂದಹಾಗೇ ಆರ್ ಬಿ ಐ ನ ಮಾಜಿ ಅಧ್ಯಕ್ಷ ರಘುರಾಂ ರಾಜನ್ ಅವರು ಹೀಗಂತಾ ಹೇಳಿ ಹಾಸ್ಯ ಚಟಾಕಿ ಹಾರಿಸಿದ್ದಾರೆ. ಅವರು ಯಾಕೆ ರಾಜಕೀಯ ಎಂಟ್ರಿಗೆ ಪತ್ನಿಯನ್ನು ಮಧ್ಯಕ್ಕೆ ಎಳೆ ತಂದ್ರು ಅಂತಾ ಯೋಚಿಸ್ತಾ ಇದ್ದೀರಾ..? ಈಗಾಗಲೇ ಅವರು ಆರ್ ಬಿ ಐ ಕಟು ನಿರ್ಧಾರಗಳ ಬಗ್ಗೆ ಪ್ರತಿಕ್ರಿಯಿಸಿ ಬೇಸರ ವ್ಯಕ್ತಪಡಿಸಿದ್ದಾರೆ. ಇದೀಗ ರಾಜಕೀಯದ ಬಗ್ಗೆ ಮಾತನಾಡಿ ಪತ್ನಿಯ ಸಬೀಬು ಕೊಟ್ಟಿದ್ದಾರೆ. ಯಾಕ್ ಈ ಮಾತು ಹೇಳಿದ್ದಾರೆ ಎಂದರೆ,
ಖಾಸಗಿ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ರಘುರಾಂ ರಾಜನ್ ಅವರು ರಾಜಕಾರಣದಲ್ಲಿ ಆಸಕ್ತಿ ಇಲ್ಲದಿರುವ ಕಾರಣ ಯಾವುದೇ ರಾಜಕೀಯ ಪಕ್ಷ ಸೇರುವ ಪ್ರಮೇಯವೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನನಗೆ ರಾಜಕೀಯ ಅಂದ್ರೆ ಇಷ್ಟವಿಲ್ಲ. ನನಗೆ ಆ ಕ್ಷೇತ್ರದ ಬಗ್ಗೆ ಅಸಹನೀಯ ಭಾವ ಮನೆ ಮಾಡಿದೆ. ಅಂದಹಾಗೇ ಈ ಕ್ಷೇತ್ರಕ್ಕೆ ಕಾಲಿಟ್ಟರೇ ನನ್ನ ಪತ್ನಿ ನನ್ನನ್ನು ಬಿಟ್ಟು ಹೋಗುವುದಾಗಿ ಬೆದರಿಕೆ ಹಾಕಿರುವುದಾಗಿ ರಘುರಾಂ ರಾಜನ್ ಹೇಳಿದ್ದಾರೆ.ಈ ಹಿಂದೆಯೇ ರಘುರಾಂ ರಾಜನ್ ಅವರು ರಾಜಕೀಯಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಅವರು ಕಾಂಗ್ರೆಸ್ ಪಕ್ಷದಲ್ಲಿರುತ್ತಾರೆ ಎಂಬೆಲ್ಲಾ ಸುದ್ದಿಯಿತ್ತು. ಒಂದು ವೇಳೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ರಘುರಾಂ ಗೆ ಸಚಿವ ಸ್ಥಾನ ಸಿಗಲಿದೆ ಎಂಬುದು ಕೆಲ ಊಹಾ-ಪೋಹವಷ್ಟೆ ಎಂದರು. ಇನ್ನು ಪಾಲಿಟಿಕ್ಸ್ ಮತ್ತು ಹೆಂಡತಿ ಬಗ್ಗೆ ಮಾತನಾಡಿದ ಅವರು ಸುಮ್ಮನೇ ಕಾಲೆಳೆಯುವ ಉದ್ದೇಶದಿಂದ ಪರೋಕ್ಷವಾಗಿ ನನಗೆ ರಾಜಕೀಯ ಆಸಕ್ತಿಯಿಲ್ಲವೆಂದು ಹೇಳಿದ್ದಾರೆ.
Comments