ಗರ್ಭಿಣಿಯಾಗಿದ್ದ ನಾನು ರೇಪ್ ಸೀನ್ ನಂತರ ಆಸ್ಪತ್ರೆ ಸೇರಿದ್ದೆ : ಖ್ಯಾತ ನಟಿ...!!!
ಅಂದಹಾಗೇ ನಮಗೆ ಸಿನಿಮಾ ನೋಡುವಾಗ ಕಲಾವಿದರು ಶೂಟಿಂಗ್ ನಲ್ಲಿ ಅನುಭವಿಸಿದ ಕಷ್ಟಗಳು ಕಣ್ಣ ಮುಂದೆ ಬರುವುದಿಲ್ಲ. ಸಿನಿಮಾ ಹಿಟ್ ಆದಾಗ ಅದರ ನೆನಪುಗಳನ್ನು ಅವರೇ ಮೆಲುಕು ಹಾಕುತ್ತಾರೆ. ಆದರೆ ತಾನು ಅನುಭವಿಸಿದ ಕಷ್ಡವನ್ನು ಬಿಚ್ಚಿಟ್ಟಿದ್ದಾರೆ ಬಾಲಿವುಡ್ ನ ಖ್ಯಾತ ತಾರೆ ಮೌಸಮಿ. ಅಂದಹಾಗೇ ಮದುವೆಯಾದ ನಂತರ ಚಿತ್ರರಂಗಕ್ಕೆ ಕಾಲಿಟ್ಟು ಹಿಟ್ ಸಿನಿಮಾಗಳನ್ನು ಕೊಡುವುದರ ಮೂಲಕ ಸ್ಟಾರ್ ಹೀರೋಯಿನ್ ಆದ ಮೌಸಮಿ ರೇಪ್ ದೃಶ್ಯವೊಂದರ ಶಾಟ್ ತೆಗೆಯುವಾಗ ತಾನು ಗರ್ಭಿಣಿಯಾಗಿದ್ದೆ, ನನ್ನ ಮೇಲೆ ಅತ್ಯಾಚಾರ ಮಾಡುವ ಶೂಟಿಂಗ್ ಇತ್ತು ಎಂದು ಆ ದಿನಗಳಲ್ಲಿ ಆದ ಘಟನೆಯನ್ನು ನೆನೆದಿದ್ದಾರೆ ನಟಿ ಮೌಸಮಿ.
ಇಂದು ಮೌಸಮಿಗೆ 71 ನೇ ಜನ್ಮ ದಿನದ ಸಂಭ್ರಮ. 110 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ಕೀರ್ತಿ ಮೌಸಮಿಗೆ ಸಲ್ಲುತ್ತದೆ. ತನ್ನ ಅಭಿನಯದಿಂದ ಪ್ರತಿಭಾವಂತೆ ನಟಿ ಎಂದು ಕೂಡ ಹೆಸರು ಮಾಡಿದ್ದಾರೆ ಮೌಸಮಿ. ರೇಪ್ ದೃಶ್ಯದಲ್ಲಿ ನಟಿಸಿ ಆ ನಂತರ ತಾನು ಆಸ್ಪತ್ರೆಗೆ ಸೇರಿದ್ದರ ಕುರಿತಾಗಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಬಾಲಿವುಡ್ ಚಿತ್ರವೊಂದರ ಶೂಟಿಂಗ್ ಇತ್ತು. ಅದು ನನ್ನ ಮೇಲೆ ರೇಪ್ ಮಾಡುವ ದೃಶ್ಯದ ಚಿತ್ರೀಕರಣ. ಆದರೆ ನಾನು ಆಗ ಗರ್ಭಿಣಿಯಾಗಿದ್ದೆ. ನನಗೆ ಅನಿವಾರ್ಯವಾಗಿ ಆ ಶೂಟಿಂಗ್ ನಲ್ಲಿ ಭಾಗಿಯಾಗಬೇಕಿತ್ತು. ನಾನು ಗರ್ಭಿಣಿಯಾಗಿದ್ದೀನಿ, ಅದೇಗೆ ರೇಪ್ ದೃಶ್ಯದ ಚಿತ್ರೀಕರಣ ಮಾಡ್ತಾರೆ ಎಂದು ಚಿಂತೆಗೊಳಗಾಗಿದ್ದೆ. ಆದರೆ ನನ್ನ ಮೇಲೆ ಅತ್ಯಾಚಾರ ವಾಯ್ತು. ಶೂಟಿಂಗ್ ನಲ್ಲಿ ಕೇವಲ ಬ್ಲೌಸ್ ಹರಿಯುವ ದೃಶ್ಯ ಮಾತ್ರ ಚಿತ್ರೀಕರಿಸಿದ್ದರು. ಆ ವೇಳೆ ಎರಡು ಬ್ಲೌಸ್ ಧರಿಸಿದ್ದೆ. ಆದ್ರೆ ದೃಶ್ಯದಲ್ಲಿ ನನ್ನ ಮೈ ಮೇಲೆ ಹಿಟ್ಟು ಬೀಳಬೇಕಿತ್ತು. ಮೈ ಮೇಲೆ ಬಿದ್ದ ಹಿಟ್ಟು ಬಾಯಿ, ಮೂಗಿಗೆ ಸೇರಿ ವಾಂತಿ ಬಂದಿತ್ತು. ತಕ್ಷಣ ಆಸ್ಪತ್ರೆಗೆ ಹೋಗುವ ಸ್ಥಿತಿ ನಿರ್ಮಾಣವಾಯ್ತು ಎಂದು ಮೌಸಮಿ ಹೇಳಿದ್ದರು.ಬಾಲಿವುಡ್ ಹಿರಿಯ ನಟಿ ಮೌಸಮಿ ಚಟರ್ಜಿ ಇಂದು 71 ನೇ ಜನ್ಮದಿನ ಆಚರಿಸಿಕೊಳ್ತಿದ್ದಾರೆ.
Comments