'ರಂಗನಾಯಕಿ'ಯ ಫಸ್ಟ್ ಲುಕ್ ಗೆ ಅಭಿಮಾನಿಗಳು ಫಿದಾ...
ಸ್ಯಾಂಡಲ್ ‘ವುಡ್ ನಲ್ಲಿ ಸಿನಿಮಾವೊಂದರ ಟೈಟಲ್'ವೊಂದು ಶುರುವಿನಲ್ಲೇ ಭಾರೀ ಸುದ್ದಿ ಆಯ್ತು. ಇದೀಗ ಸಿನಿಮಾದ ಫಸ್ಟ್ ಲುಕ್ ಗೆ ಅಭಿಮಾನಿಗಳು ರೆಸ್ಪಾನ್ಸ್ ಮಾಡಿದ್ದಾರೆ. ಅಂದಹಾಗೇ ಸಿನಿಮಾದ ನಾಯಕಿಯಾಗಿ ನಟಿ ಅಧಿತಿ ಪ್ರಭುದೇವ್ ಅವರು ನಟಿಸುತ್ತಿರುವ ಸಿನಿಮಾ ರಂಗನಾಯಕಿ ಅಭಿಮಾನಿಗಳ ಮನದಲ್ಲಿ ಭಾರಿಯೇ ಕ್ರೇಜ್ ಹುಟ್ಟಿಸಿದೆ.
ಚಿತ್ರದ ಪೋಸ್ಟರ್ ರಿಲೀಸ್ ಆಗಿದೆ. ಅಂದಹಾಗೇ ಕರಾಳ ರಾತ್ರಿ ಸಿನಿಮಾ ನಿರ್ದೇಶನ ಮಾಡಿದ ನಿರ್ದೇಶಕ ದಯಾಳ್ ಅವರು ಸಿನಿಮಾ ನಿರ್ದೇಶನ ಮಾಡುತ್ತಿದ್ದು ಇದೀಗ ಮೊದಲ ಪೋಸ್ಟರ್ ಎಲ್ಲರನ್ನು ಸೆಳೆದಿದೆ. ಏಫ್ರಿಲ್ 26 ರಂದು ಚಿತ್ರದ ಮುಹೂರ್ತ ಕಾರ್ಯಕ್ರಮ ನಡೆದಿದೆ. ಮತ್ತೊಂದು ಕಡೆ ಸಿನಿಮಾದ ಸಬ್ ಟೈಟಲ್ ವಾಲ್ಯೂಮ್ 1- ವರ್ಜಿನಿಟಿ ಚರ್ಚೆಗೆ ಆಸ್ಪದವಾಗಿದೆ. ಎಸ್ ವಿ ನಾರಾಯಣ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಮಣಿಕಾಂತ್ ಕದ್ರಿ ಮ್ಯೂಸಿಕ್ ನೀಡಿದ್ದಾರೆ. ಅಧಿತಿ ಪ್ರಭುದೇವ್, ಶ್ರೀನಿ ಹಾಗೂ ತ್ರಿವಿಕ್ರಮ್ ನಟಿಸಿದ್ದಾರೆ. ಅಂದಹಾಗೇ ಈಗಾಗಲೇ ದಯಾಳ್ ಅವರು ಬಿಗ್ಬಾಸ್ ಸ್ಪರ್ಧಿ ಕೂಡ ಆಗಿದ್ದರು. ಅವರದ್ದೇ ಸೀಸನ್ ನಲ್ಲಿದ್ದ ಬಿಗ್ ಬಾಸ್ ಸ್ಪರ್ಧಿಗಳಾಗಿದ್ದ ಜಯರಾಂ ಕಾರ್ತಿಕ್ ಮತ್ತು ಅನುಪಮಾ ಅವರನ್ನು ಹಾಕಿಕೊಂಡು ಸಿನಿಮಾ ಕೂಡ ಮಾಡಿದ್ದಾರೆ.
Comments