ರವಿಚಂದ್ರನ್'ಗೂ ಜಗ್ಗೇಶ್ ಮನೆಯಲ್ಲಿರುವ ವಿಗ್ರಹಕ್ಕೂ ಏನಿದೆ ನಂಟು : ಮಗಳ ಮದುವೆಗೆ ಕರೆಯೊಲೋದ ಕ್ರೇಜಿಸ್ಟಾರ್ ಗೆ ಕಾದಿತ್ತು ಅಚ್ಚರಿ....!!!
ಅಂದಹಾಗೇ ಕ್ರೇಜಿ ಸ್ಟಾರ್ ರವಿಚಂದ್ರನ್ ಸದ್ಯ ಮಗಳ ಮದುವೆಯಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಸ್ಯಾಂಡಲ್ ವುಡ್ ನ ಗಣ್ಯರು, ಸ್ನೇಹಿತರು, ಕುಟುಂಬದವರಿಗೆ ಮತ್ತು ಆಪ್ತರ ಮನೆಗೆ ಹೋಗಿ ಮದುವೆ ಆಮಂತ್ರಣ ಪತ್ರಿಕೆ ನೀಡಿ ಆಹ್ವಾನ ಮಾಡುತ್ತಿದ್ದಾರೆ. ಪುತ್ರ ಮನೊರಂಜನ್ ಜೊತೆ ನವರಸ ನಾಯಕ ಜಗ್ಗೇಶ್ ಮನೆಗೆ ಆಗಮಿಸಿದ ಕ್ರೇಜಿಸ್ಟಾರ್ ಮಗಳ ಮದುವೆಗೆ ಆಹ್ವಾನಿಸಿದ್ದಾರೆ. ಈ ವೇಳೆ ಜಗ್ಗೇಶ್ ಮನೆಗೆ ಬಂದ ರಣಧೀರನಿಗೆ ತಮ್ಮ ಮನೆಯಲ್ಲಿರುವ ವಿಗ್ರಹವೊಂದನ್ನು ತೋರಿಸಿದ್ದಾರೆ.ರವಿಚಂದ್ರನ್ ತಮ್ಮ ಮನೆಗೆ ಎಂಟ್ರಿ ಕೊಟ್ಟಾಗ ಆದ ಸಂತಸವನ್ನು, ಕಷ್ಟಕಾಲದಲ್ಲಿ ತಮಗೆ ಸಹಾಯ ಮಾಡಿದ್ದ ರವಿಚಂದ್ರನ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ.
ಅಂದಹಾಗೇ ರವಿಚಂದ್ರನ್’ಗೂ, ಜಗ್ಗೇಶ್ ಮನೆಯಲ್ಲಿರುವ ಆ ವಿಗ್ರಹಕ್ಕೂ ಬಿಡಿಸಲಾಗದ ನಂಟೊಂದಿದೆ. ಜಗ್ಗೇಶ್ ಕಷ್ಟಕಾಲದಲ್ಲಿ ಇದ್ದಾಗ ರವಿಚಂದ್ರನ್ ಅವರು ಜಗ್ಗೇಶ್’ಗೆ ಹಣ ಸಹಾಯ ನೀಡಿದ್ದರು. ಆ ಹಣದಲ್ಲಿಯೇ ಜಗ್ಗೇಶ್ ದಂಪತಿ ಆ ವಿಗ್ರಹವನ್ನು ತಂದು ದೇವರ ಮನೆಯಲ್ಲಿ ಇಟ್ಟು ಪೂಜಿಸುತ್ತಿದ್ದಾರೆ. ರವಿಚಂದ್ರನ್ ಮಗಳ ಮದುವೆಗೆ ಜಗ್ಗೇಶ್ ದಂಪತಿ ಸಮೇತ ಬನ್ನಿ ಎಂದು ಕರೆಯಲು ಹೋದಾಗ ಕ್ರೇಜಿಸ್ಟಾರ್’ರನ್ನು ಜಗ್ಗೇಶ್ ದೇವರಕೋಣೆ ಬಳಿ ಕರೆದು ಹೋಗಿ ಆವಿ ಗ್ರಹ ತೋರಿಸಿ ಅಂದಿನ ಘಟನೆಯನದನು ನೆಪಿಸಿದ್ದರಂತೆ. ಇದನ್ನು ನೋಡಿ ಮೂಕ ವಿಸ್ಮಿತರಾಗಿದ್ದಾರೆ ರಣಧೀರ.
ಕಷ್ಟಕಾಲದಲ್ಲಿ ನನಗೆ ಸಂಬಳ, ಪ್ರೀತಿ, ಉತ್ಸಾಹ ತುಂಬಿ ಭುಜ ತಟ್ಟಿದ ರಣಧೀರ ಮನೆಗೆ ಬಂದಾಗ ನನಗೆ ಹೆಮ್ಮೆಯಾಯಿತು. ಭವಿಷ್ಯ ನಾನು, ರಣಧೀರ, ಶಿವಣ್ಣ ಭಾವನಾತ್ಮಕವಾಗಿ ಬದುಕಿರುವ ಕಡೆಯ ತಲೆಮಾರು ಚಿತ್ರರಂಗಕ್ಕೆ ಅನ್ನಿಸಿತು ಮನ. ಹತ್ತಿದ್ದ ಏಣಿನಾ ಒದಿಬ್ಯಾಡ. ನನ್ನ ಹಾಡಿನ ಸಾಲಿನಂತೆ ಬದುಕಿರುವೆ ಕೊನೆಯವರೆಗೂ. ನೂರ್ಕಾಲ ದೀರ್ಘ ಸುಮಂಗಲಿಯಾಗಿ ಬಾಳಿ ಎಂದು ಶುಭ ಹಾರೈಸಿ ರಣಧೀರನ ಮಗಳಿಗೆ. ಇಂತಿ ರಣಧೀರನ ಅನ್ನ ಉಂಡವ” ಎಂದು ಬರೆದುಕೊಂಡು ರವಿಚಂದ್ರನ್ ಮಾಡಿದ ಸಹಾಯವನ್ನು ಮೆಲುಕು ಹಾಕಿದ್ದಾರೆ.
Comments