ಶೂಟಿಂಗ್ ವೇಳೆ ನಟಿಯ ಐ ಫೋನ್ ಕಸಿದುಕೊಂಡು ಹೋದ ಕಳ್ಳರು...!!!
ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಹೋಮ್ ಮಿನಿಸ್ಟರ್ ಸಿನಿಮಾ ಶೂಟಿಂಗ್ ವೇಳೆ ಕಳ್ಳರು ತಮ್ಮ ಕೈ ಚಳಕ ತೋರಿಸಿದ್ದಾರೆ. ಅಂದಹಾಗೇ ಅಂದು ಸಿನಿಮಾದಲ್ಲಿ ನಟಿಸ್ತಾಯಿದ್ದ ಚಾಂದನಿ ಅವರ ಶಾಟ್ ಇತ್ತು. ಶೂಟಿಂಗ್ ನಡೆಯುತ್ತಿದ್ದುದ್ದನನ್ನು ಗಮನಿಸಿದ ಕಿಡಿಗೇಡಿಗಳು ಬೆಲೆ ಬಾಳುವ ಐ ಫೋನ್’ನನ್ನು ಕಸಿದುಕೊಂಡು ಹೋಗಿದ್ದಾರೆ. ಚಾಂದಿನಿ ಅಂಚನ್ ಹೋಮ್ ಮಿನಿಸ್ಟರ್ ಚಿತ್ರದ ಲೀಡ್ ರೋಲ್‍ನಲ್ಲಿ ನಟಿಯಾಗಿ ಅಭಿನಯಿಸುತ್ತಿದ್ದಾರೆ.
ಕಳೆದ 22ರಂದು ಚಾಂದಿನಿ ಅಂಚನ್ ಅವರ ಭಾಗದ ಚಿತ್ರೀಕರಣ ಕಬ್ಬನ್ ಪಾರ್ಕಿನಲ್ಲಿ ನಡೆಯುತ್ತಿತ್ತು. ಅಕ್ಕನ ಚಿತ್ರೀಕರಣದ ಭಾಗವನ್ನು ನೋಡಲು ನಟಿ ಹಾಗೂ ಮಾಡೆಲ್ ಸುಷ್ಮಿತಾ ಅಂಚನ್ ಅಲ್ಲಿಗೆ ಆಗಮಿಸಿದ್ದರು.ಸುಷ್ಮಿತಾ ಅಂಚನ್ ತನ್ನ ಸಹೋದರಿ ಚಾಂದಿನಿ ನಟನೆಯನ್ನು ನೋಡುತ್ತಾ ಕಬ್ಬನ್ ಪಾರ್ಕಿನ ಸೆಂಟ್ರಲ್ ಲೈಬ್ರರಿ ಮುಂದೆ ನಿಂತಿದ್ದರು. ಈ ವೇಳೆ ಕಳ್ಳರು ನಟಿ ಸುಷ್ಮಿತಾ ಕೈಯಲ್ಲಿದ್ದ ಐಫೋನ್ ಕಸಿದು ಅಲ್ಲಿಂದ ಪರಾರಿಯಾಗಿದ್ದಾರೆ. ಸಂದರ್ಭದಲ್ಲಿ ಸುಷ್ಮಿತಾ ಸ್ವಲ್ಪ ಜೋರಾಗಿಯೇ ಕೂಗಿಕೊಂಡರೂ, ಕಳ್ಳರು ಅಲ್ಲಿಂದ ಕಾಲ್ಕಿತ್ತಿದ್ದಾರೆ.ಸುಷ್ಮಿತಾ ಅಂಚನ್, ನಟಿ ಹಾಗೂ ಮಾಡೆಲ್ ಆಗಿದ್ದು, ಲೂಸ್ ಮಾದ ಯೋಗೇಶ್ ಅಭಿನಯದ ‘ಪುಂಡ’ ಚಿತ್ರದಲ್ಲಿ ಅಭಿನಯಿಸಿದ್ದರು. ಅಲ್ಲದೆ ಮಿಸ್ ಗ್ಲೋರಿ ಇಂಡಿಯಾ 2019 ಸ್ಪರ್ಧೆಯಲ್ಲಿ ಮಿಸ್ ಬ್ಯೂಟಿಫುಲ್ ಐಸ್ ಪ್ರಶಸ್ತಿಯನ್ನು ಪಡೆದಿದ್ದರು.
Comments