ಬಿಗ್ ಬಾಸ್ ನ ಮುಂದಿನ ನಿರೂಪಕಿ ಅನುಷ್ಕಾಶೆಟ್ಟಿ..!!
ಕಿರುತೆರೆಯಲ್ಲಿಯೇ ಬಿಗ್ ರಿಯಾಲಿಟಿ ಷೋ ಎಂದರೆ ಅದು ಬಿಗ್ ಬಾಸ್… ಎಲ್ಲಾ ಭಾಷೆಗಳಲ್ಲಿಯೂ ಬಿಗ್ ಬಾಸ್ ತನ್ನದೆ ಆದ ಅಭಿಮಾನಿಗಳ ಬಳಗವನ್ನು ಹೊಂದಿದೆ.. ಇದೀಗ ತೆಲುಗು ಬಿಗ್ ಬಾಸ್ 3 ರಿಂದ ಹೊಸ ಸುದ್ದಿಯೊಂದು ಬಂದಿದೆ… ದಕ್ಷಿಣ ಭಾರತದ ಸ್ಟಾರ್ ನಟಿ ಅನುಷ್ಕಾ ಶೆಟ್ಟಿ ತೆಲುಗಿನ ಬಿಗ್ ಬಾಸ್ ಸೀಸನ್ -3 ರಿಯಾಲಿಟಿ ಶೋಗೆ ನಿರೂಪಣೆ ಮಾಡುತ್ತಾರೆ ಎಂಬ ಮಾತು ಟಿ-ಟೌನ್‍ನಲ್ಲಿ ಹೆಚ್ಚು ಸದ್ದು ಮಾಡುತ್ತಿದೆ.. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಿರುವ ಅನುಷ್ಕಾ ಬಿಗ್ ಬಾಸ್ ನಿರೂಪಣೆ ಮಾಡುತ್ತಾರ ಎಂಬ ಮಾತುಗಳು ಕೇಳಿ ಬರುತ್ತಿವೆ.
ಬಿಗ್ ಬಾಸ್ ಮೊದಲ ಸೀಸನ್ ನಟ ಜೂ. ಎನ್‍ಟಿಆರ್ ಯಶಸ್ವಿಯಾಗಿ ನಡೆಸಿಕೊಟ್ಟಿದ್ದರು. ನಂತರ ಎರಡನೇ ಸೀಸನ್ ನಟ ನಾನಿ ನಿರೂಪಣೆ ಮಾಡಿದ್ದರು. ಈಗ ಮೂರನೇ ಸೀಸನ್‍ಗೆ ಜೂ. ಎನ್‍ಟಿಆರ್ ಅವರ ಜೊತೆ ಮಾತುಕತೆ ನಡೆಸಲಾಗಿತ್ತು. ಆದರೆ ಅವರು ರಾಜಮೌಳಿ ನಿರ್ದೇಶನದ ‘ಆರ್‍ಆರ್‍ಆರ್’ ಚಿತ್ರದಲ್ಲಿ ಬ್ಯುಸಿ ಇರುವ ಕಾರಣ ಈ ಶೋ ನಿರೂಪಣೆ ಮಾಡಲು ಜೂ. ಎನ್‍ಟಿಆರ್ ನಿರಾಕರಣೆ ಮಾಡಿದ್ದಾರಂತೆ.. ಜೂ. ಎನ್‍ಟಿಆರ್ ಅಲ್ಲದೆ ನಾಗಾರ್ಜುನ, ವೆಂಕಟೇಶ್, ರಾಣಾ ದಗ್ಗುಬಾಟಿ ಹಾಗೂ ವಿಜಯ್ ದೇವರಕೊಂಡ ಅವರನ್ನು ಬಿಗ್ ಬಾಸ್ ಸೀಸನ್ -3 ನಿರೂಪಣೆ ಮಾಡಲು ಅಪ್ರೋಚ್ ಮಾಡಲಾಗಿದೆ. ಆದರೆ ಅನೇಕ ಕಾರಣಗಳಿಂದ ನಟರು ಈ ಅವಕಾಶವನ್ನು ತಿರಸ್ಕರಿಸಿದ್ದಾರೆ.. ಹಾಗಾಗಿ ರಿಯಾಲಿಟಿ ಶೋ ತಂಡ ನಟಿ ಅನುಷ್ಕಾ ಶೆಟ್ಟಿ ಅವರಿಗೆ ನಿರೂಪಣೆ ಮಾಡಲು ಅಪ್ರೋಚ್ ಮಾಡಿದೆ ಎನ್ನಲಾಗಿದೆ. ಆದರೆ ಇದರ ಬಗ್ಗೆ ಅನುಷ್ಕಾ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಈ ಅವಕಾಶವನ್ನು ಅನುಷ್ಕಾ ಬಳಸಿಕೊಳ್ಳುತ್ತಾರ ಅಥವಾ ಇವರು ಕೂಡ ಕಾರಣಾಂತರದಿಂದ ನಿರಾಕರಿಸುತ್ತಾರ ಎಂಬುದನ್ನು ಕಾದು ನೋಡಬೇಕಿದೆ..
Comments