ಬಾಯ್ ಪ್ರೆಂಡ್ ಜೊತೆಗಿನ ಸಂಬಂಧಕ್ಕೆ ಎಳ್ಳು ನೀರು ಬಿಟ್ಳಾ ಶೃತಿ ಹಾಸನ್..!!

ಪ್ರೇಮಿಗಳು ಅಂದ ಮೇಲೆ ಬ್ರೇಕ್ಅಫ್, ಫ್ಯಾಚ್ ಅಫ್ ಎಲ್ಲವೂ ಕೂಡ ಇದ್ದಿದ್ದೆ…. ಈ ಲವ್ ದುನಿಯಾದಲ್ಲಿ ಸ್ಟಾರ್ ನಟನಟಿಯರು ಮಕ್ಕಳು ಕೂಡ ಮುಂದೆಯೇ ಇದ್ದಾರೆ… ಇದೀಗ ಕಮಲಹಾಸನ್ ಪುತ್ರಿ ಶೃತಿ ಹಾಸನ್ ಕೂಡ ತಮ್ಮ ಲವ್ ಬ್ರೇಕ್ಅಪ್ ಮಾಡಿಕೊಂಡಿದ್ದಾರೇನೋ ಅನಿಸುತ್ತಿದೆ..ಈ ಹಿಂದೆ ಸಾಕಷ್ಟು ಬಾರಿ ಬ್ರಿಟಿಷ್ ನಟನ ಜೊತೆ ಕಾಣಿಸಿಕೊಂಡಿದ್ದರು.. ಇದೀಗ ಇದಕ್ಕೆಲ್ಲಾ ಬ್ರೇಕ್ ಬಿದ್ದಿದೆ ಎಂಬ ಅನುಮಾನಗಳು ಹುಟ್ಟಿಕೊಂಡಿವೆ…
ಕಮಲ ಹಾಸನ್ ಪುತ್ರಿ ಶ್ರುತಿ ಹಾಸನ್, ಬ್ರಿಟಿಷ್ ನಟ ಮೈಕಲ್ ಕೋರ್ಸೆಲ್ ಜೊತೆಲವ್ ನಲ್ಲಿ ಬಿದ್ದಿದ್ದಾರೆ ಎಂಬ ಗುಸು ಗುಸು ಶುರುವಾಗಿತ್ತು.., ಇದನ್ನು ಶೃತಿ ಬಹಿರಂಗವಾಗಿ ಎಲ್ಲರ ಮುಂದೆ ಹೇಳಿಕೊಳ್ಳದಿದ್ದರೂ, ಚಿತ್ರರಂಗದ ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ಇದಕ್ಕೆ ಇಬ್ಬರು ಪುಷ್ಟಿ ನೀಡುತ್ತಿದ್ದರು… ಇದೀಗ ಬಹಿರಂಗವಾಗಿರುವ ಮಾಹಿತಿಯಂತೆ ಶೃತಿ ಹಾಸನ್ ಹಾಗೂ ಮೈಕಲ್ ಕೊರ್ಸೆಲ್ ನಡುವಿನ ಸಂಬಂಧದಲ್ಲಿ ಬಿರುಕು ಬಿಟ್ಟಿದೆಯಂತೆ. ಹೀಗಾಗಿ ಕೆಲ ಕಾಲದಿಂದ ಇವರುಗಳು ಎಲ್ಲಿಯೂ ಕೂಡ ಜೊತೆಯಾಗಿ ಕಾಣಿಸಿಕೊಳ್ಳುತ್ತಿಲ್ಲ ಎಂದು ಹೇಳಲಾಗುತ್ತಿದೆ… ಅದಷ್ಟೇ ಅಲ್ಲದೇ , ಶೃತಿ ಹಾಸನ್ ತಾವು ಇನ್ಸ್ಟಾಗ್ರಾಮ್ ನಲ್ಲಿ ಈ ಹಿಂದೆ ಶೇರ್ ಮಾಡಿದ್ದ ಇಬ್ಬರಿರುವ ಫೋಟೋಗಳನ್ನು ಕೂಡ ಡಿಲೀಟ್ ಮಾಡಿದ್ದಾರೆ. ಹಾಗೆಯೇ ಶೃತಿಯ ಕೆಲವೊಂದು ಪೋಸ್ಟ್ ಗಳಿಗೆ ಕಮೆಂಟ್ ಮಾಡುತ್ತಿದ್ದ ಮೈಕಲ್ ಅದನ್ನು ಸಂಪೂರ್ಣವಾಗಿ ನಿಲ್ಲಿಸಿ ಬಿಟ್ಟಿದ್ದಾರೆ ಎನ್ನಲಾಗುತ್ತಿದೆ.. ಇದನ್ನೆಲ್ಲ ಗಮನಿಸಿರುವ ಚಿತ್ರರಂಗದ ಮಂದಿ ಇಬ್ಬರ ನಡುವಿನ ಸಂಬಂಧದಲ್ಲಿ ಬಿರುಕು ಬಿಟ್ಟಿದೆ ಎಂದು ಮಾತನಾಡಿಕೊಳ್ಳುತ್ತಿದೆ. ಒಟ್ಟಾರೆಯಾಗಿ ಸಿನಿರಂಗದಲ್ಲಿ ಲವ್ ಶುರು ಆಗೋದು ಕಾಮನ್ ಆದ್ರೂ ಬ್ರೇಕ್ ಆಪ್ ಆಗೋದು ಕೂಡ ಅಷ್ಟೆ ಕಾಮನ್… ಶೃತಿ ಹಾಸನ್ ತುಂಬಾ ಬೋಲ್ಡ್ ನಟಿ.. ಇದನ್ನೆಲ್ಲಾ ನಾರ್ಮಲ್ ಆಗಿ ತೆಗೆದುಕೊಳ್ಳುತ್ತಾರೆ, ಯಾವುದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ ಎಂಬುದು ಅಭಿಮಾನಿಗಳ ಮಾತು.
Comments