ನಟಿಗೆ ಖಾಸಗಿ ಅಂಗವನ್ನು ಶಸ್ತ್ರ ಚಿಕಿತ್ಸೆ ಮಾಡಿಸಿಕೋ ಎಂದ ನಿರ್ದೇಶಕ..!! ಯಾರ್ ಗೊತ್ತಾ..?

ಬಣ್ಣದ ಲೋಕದಲ್ಲಿ ಕಾಸ್ಟಿಂಗ್ ಕೌಚ್ ಎಂಬ ಪದ ಹೆಚ್ಚು ಸದ್ದು ಮಾಡಿತ್ತು.. ಎಲ್ಲಾ ಭಾಷೆಗಳಲ್ಲಿಯೂ ಕೂಡ ಕಾಸ್ಟಿಂಗ್ ಕೌಚ್ ಸುದ್ದಿ ಮಾಡಿತ್ತು.. ಅನೇಕ ನಟಿ ಮಣಿಯರು ತಮಗಾದ ಶೋಷಣೆಯ ಬಗ್ಗೆ ಹೇಳಿಕೊಂಡಿದ್ದರು… ಇದೀಗ ಒಬ್ಬೊಬ್ಬ ನಟಿಯರೇ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡುತ್ತಿದ್ದಾರೆ. ಇದೀಗ ಬಾಲಿವುಡ್ ನಟಿ ಸೋನಾಲಿ ಸೇಗಲ್ ತನ್ನ ಮೇಲಾದ ಶೋಷಣೆಯನ್ನು ಎಲ್ಲರ ಮುಂದಿಟ್ಟಿದ್ದಾಳೆ.
ಸೋನಾಲಿಗೆ ನಿರ್ದೇಶಕರೊಬ್ಬರು ಖಾಸಗಿ ಅಂಗವನ್ನು ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದ್ದರಂತೆ. ಆಡಿಷನ್ ನಲ್ಲಿ ಉತ್ತಮ ಪ್ರದರ್ಶನ ತೋರಿದ್ದ ಸೋನಾಲಿ ಸೇಗಲ್, ಆಯ್ಕೆಯಾಗುವ ಆಸೆ ಹೊಂದಿದ್ದಳಂತೆ. ಕೊನೆಯಲ್ಲಿ ಬಂದ ಪ್ರಸಿದ್ಧ ನಿರ್ದೇಶಕನೊಬ್ಬ ದೇಹದ ಪ್ರಮುಖ ಅಂಗದ ಸರ್ಜರಿ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದ್ದನಂತೆ. ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ್ರೆ ಅಂಗದ ಸೌಂದರ್ಯ ಹೆಚ್ಚಾಗಲಿದೆ. ತದ ನಂತರ ನಟನೆಗೆ ಅವಕಾಶ ನೀಡುತ್ತೇನೆ ಎಂದಿದ್ದರಂತೆ. ಶಸ್ತ್ರಚಿಕಿತ್ಸೆಗೆ ಒಪ್ಪದ ಸೋನಾಲಿ, ಆ ಚಿತ್ರ ಬಿಟ್ಟಿದ್ದಳಂತೆ. ಈ ವಿಷ್ಯವನ್ನು ಸೋನಾಲಿ ಇದೀಗ ಬಹಿರಂಗಪಡಿಸಿದ್ದಾಳೆ. ಮಾಡಲಿಂಗ್ ಮೂಲಕ ವೃತ್ತಿ ಶುರು ಮಾಡಿದ್ದ ಸೋನಾಲಿ ಮೊದಲ ಬಾರಿ ಪ್ಯಾರ್ ಕಿ ಪಂಚನಾಮಾದಲ್ಲಿ ಕಾಣಿಸಿಕೊಂಡಿದ್ದಳು. ಈವರೆಗೆ ಆರು ಚಿತ್ರಗಳಲ್ಲಿ ಸೋನಾಲಿ ನಟಿಸಿದ್ದಾಳೆ. ಬಣ್ಣದ ಲೋಕದಲ್ಲಿ ಆಗಲಿ, ಅಥವಾ ಬೇರ್ಯಾವ ಕ್ಷೇತ್ರದಲ್ಲಿಯೇ ಆಗಲಿ ಹೆಣ್ಣಿಗಂತೂ ಶೋಷಣೆ ತಪ್ಪಿದಲ್ಲ… ದಿನನಿತ್ಯ ಅತ್ಯಚಾರ, ಕೊಲೆಗಳು ನಡೆಯುತ್ತಲೆ ಇವೆ… ಇದಕ್ಕೆಲ್ಲಾ ಕೊನೆ ಯಾವಾಗ ಪ್ರಶ್ನೆ ಹೆಣ್ಣು ಮಕ್ಕಳದ್ದು…
Comments