ಲಕ್ ಅಂದ್ರೆ ಇದಪ್ಪಾ…! ಸ್ಯಾಂಡಲ್ ವುಡ್, ಟಾಲಿವುಡ್, ಕಾಲಿವುಡ್ ಆಯ್ತು..!! ಇದೀಗ ಬಾಲಿವುಡ್ನಲ್ಲಿ ಕರ್ನಾಟಕದ ಕ್ರಶ್ ..!!!

ಸ್ಯಾಂಡಲ್ ವುಡ್ ಅನೇಕ ನಟಿ ಮಣಿಯರು ಪರಭಾಷೆಯಲ್ಲಿ ನಟಿಸಿ ಸೈ ಎನಿಸಕೊಂಡಿದ್ದಾರೆ.ಅದರಲಲ್ಲಿ ಕರ್ನಾಟಕದ ಕ್ರಶ್ ರಶ್ಮಿಕಾ ಮಂದಣ್ಣ ಕೂಡ ಒಬ್ಬರು.. ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಸಾನ್ವಿಯಾಗಿ ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಟ್ಟ ಈಕೆ ನಂತರ ಕೊಟ್ಟಿದೆಲ್ಲಾ ಹಿಟ್ ಸಿನಿಮಾಗಳೇ… ಕೇವಲ ಕನ್ನಡದಲ್ಲಿ ಮಾತ್ರವಲ್ಲದೆ ಪರಭಾಷೆಯಲ್ಲೂ ರಶ್ಮಿಕಾ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ..ನಡುವೆ ಒಂದಿಷ್ಟು ಗಾಸಿಫ್ಗಳು ಬಂದರೂ ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ರಶ್ಮಿಕಾ ಸದ್ಯ ಬಹುಬೇಡಿಕೆಯ ನಟಿಯಾಗಿದ್ದಾರೆ.
ಇದೀಗ ನಟಿ ರಶ್ಮಿಕಾ ಮಂದಣ್ಣ ಸ್ಟಾರ್ ಬದಲಾಗಿದೆ. ಮಾಡಿದ ಸಿನಿಮಾಗಳೆಲ್ಲವೂ ಕೂಡ ಸೂಪರ್ ಡೂಪರ್ ಹಿಟ್. ಟಾಲಿವುಡ್, ಕಾಲಿವುಡ್ ನಲ್ಲಿ ಮಿಂಚುತ್ತಿರುವ ಈ ನಟಿಗೆ ಈಗ ಬಾಲಿವುಡ್ ನಲ್ಲೂ ನಟಿಸುವ ಅವಕಾಶ ಒದಗಿ ಬಂದಿದೆ. ಬಾಲಿವುಡ್ ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಸಿನಿಮಾದಲ್ಲಿ ನಟಿಸಲು ರಶ್ಮಿಕಾ ಮಂದಣ್ಣ ಗೆ ಆಫರ್ ಬಂದಿದೆ ಎನ್ನಲಾಗುತ್ತಿದೆ.ರಶ್ಮಿಕಾ ಮಂದಣ್ಣ ಇನ್ನು ಗ್ರೀನ್ ಸಿಗ್ನಲ್ ಕೊಡಬೇಕಾಗಿದೆ. ರಣದೀಪ್ ಹೂಡಾ ನಾಯಕನಾಗಿ ನಟಿಸಲಿದ್ದಾರೆ. ರಶ್ಮಿಕಾ ಗ್ರೀನ್ ಸಿಗ್ನಲ್ ಕೊಟ್ಟರೆ ಬಾಲಿವುಡ್ನಲ್ಲಿಯೂ ನಾಯಕಿಯಾಗಿ ಮಿಂಚಲಿದ್ದಾರೆ. ಸದ್ಯ ವಿಜಯ್ ದೇವರಕೊಂಡ ಜೊತೆ ಡಿಯರ್ ಕಾಮ್ರೆಡ್ ನಲ್ಲಿ ನಟಿಸಿದ್ದಾರೆ. ಅದಿನ್ನೂ ತೆರೆ ಕಾಣಬೇಕಿದೆ. ನೆನ್ನೆ ಮೊನ್ನೆ ಬಂದ ಹುಡುಗಿ ಬಾಲಿವುಡ್ ರೇಂಜ್ ಗೆ ಹೋಗ್ತಿದ್ದಾಳೆ ಎಂದು ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.
Comments