ರಿಯಲ್ ಸ್ಟಾರ್ ಉಪ್ಪಿಗೆ ‘ಐ ಲವ್ ಯೂ’ ಹೇಳಲು ಹೊರಟ ಕನ್ನಡದ ಸ್ಟಾರ್ ನಟ..!!
ಸ್ಯಾಂಡಲ್ ವುಡ್ ನಲ್ಲಿ ವಿಭಿನ್ನ ಕಥಾ ಹಂದರವನ್ನು ಹೊಂದಿರುವ ಸಿನಿಮಾಗಳು ತೆರೆ ಮೇಲೆ ಬರುತ್ತಲೆ ಇರುತ್ತವೆ..ಅದರಲ್ಲೂ ಉಪ್ಪಿ ಸಿನಿಮಾದಲ್ಲಿ ಏನೋ ಒಂದು ಸ್ಪೆಷಲ್ ಇರುತ್ತದೆ ಎಂಬುದು ಅಭಿಮಾನಿಗಳ ಮಾತು. ಇಷ್ಟು ದಿನ ಲೋಕಸಭಾ ಚುನಾವಣೆಯಲ್ಲಿ ಬ್ಯುಸಿಯಾಗಿದ್ದ ಉಪೇಂದ್ರ ಇದೀಗ ಬಿಡುವು ಮಾಡಿಕೊಂಡು ‘ಐ ಲವ್ ಯೂ’ ಸಿನಿಮಾದ ಟ್ರೇಲರ್ ಬಿಡುಗಡೆಗೆ ಮುಂದಾಗಿದ್ದಾರೆ.
ರಿಯಲ್ ಸ್ಟಾರ್ ಉಪೇಂದ್ರ, ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್ ಅಭಿನಯದ 'ಐ ಲವ್ ಯೂ' ಚಿತ್ರ ಈಗಾಗಲೇ ಬಿಡುಗಡೆಗೆ ಸಿದ್ಧವಾಗಿದೆ. ಈಗಾಗಲೇ ಬಿಡುಗಡೆಯಾಗಿರುವ ಪೋಸ್ಟರ್ ನಿಂದಲೇ‘ ಐ ಲವ್ ಯೂ’ ಸಿನಿಮಾ ಗಮನ ಸೆಳೆದಿದೆ. . ಈ ಚಿತ್ರದ ಟ್ರೇಲರನ್ನು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬಿಡುಗಡೆ ಮಾಡಲಿದ್ದಾರೆ. ಸುದೀಪ್ ಸಾಕಷ್ಟು ಹೊಸ ಚಿತ್ರಗಳ ಟ್ರೇಲರ್ ಹಾಗೂ ಟೀಸರ್ ಬಿಡುಗಡೆ ಮಾಡಿ ಶುಭಾಷಯ ತಿಳಿಸುತ್ತಿದ್ದಾರೆ. ಅದೇ ರೀತಿ ಉಪೇಂದ್ರ ಅವರ 'ಐ ಲವ್ ಯೂ' ಚಿತ್ರದ ಟ್ರೇಲರ್ ರಿಲೀಸ್ ಮಾಡುತ್ತಾರೆ. ಆರ್ ಚಂದ್ರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಮುಂದಿನ ತಿಂಗಳು ಈ ಚಿತ್ರ ತೆರೆಗೆ ಬರಲಿದೆ. ಅಭಿಮಾನಿಗಳು ಬುಲ್ ಬುಲ್ ಬೆಡಗಿ ಹಾಗೂ ರಿಯಲ್ ಸ್ಟಾರ್ ಕಾಂಬೀನೇಷನ್ ಅನ್ನು ತೆರೆ ಮೇಲೆ ನೋಡಲು ಕಾತುರದಿಂದ ಕಾಯುತ್ತಿದ್ದಾರೆ.
Comments