ಸ್ಟಾರ್ ನಟನಿಗೆ ಕಿಸ್ ಮಾಡೋ ಆಸೆಯನ್ನು ಹೊರಹಾಕಿದ ಶ್ರೀದೇವಿ ಮುದ್ದಿನ ಮಗಳು..!!!

ಅಂದಹಾಗೇ ಇತ್ತೀಚಿಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ನಟಿ ಶ್ರೀದೇವಿ ಮಗಳು ಜಾಹ್ನವಿ ಕಪೂರ್ ತಮ್ಮ ಮನದಾಸೆಯನ್ನು ಹೊರ ಹಾಕಿದ್ದಾರೆ. ಶ್ರೀದೇವಿಯ ಪ್ರೀತಿಯ ಪುತ್ರಿ ಜಾಹ್ನವಿ ತಾನು ಆ ಸ್ಟಾರ್ ನಟನಿಗೆ ಮುತ್ತಿಕ್ಕುವ ಆಸೆಯನ್ನು ಹೊರ ಚೆಲ್ಲಿದ್ದಾರೆ. ಈ ಬಗ್ಗೆ ಕಾರ್ಯಕ್ರಮದಲ್ಲಿ ಹೇಳಿಕೊಂಡ ಜಾಹ್ನವಿ ಮೇಲೆ ಅಭಿಮಾನಿಗಳು ಬಿಟ್ಟ ಕಣ್ಣು ಬಿಟ್ಟಂತೆಯೇ ನೋಡುತ್ತಿದ್ದಾರೆ.
ಅಂದಹಾಗೇ ಆಕೆ ಯಾವ ನಟನಿಗೆ ಕಿಸ್ ಕೊಡುವಾಸೆ ಇದೆ ಎಂದು ಹೇಳಿಕೊಂಡಿದ್ದು ಯಾರಿಗೆ ಗೊತ್ತಾ..?ಅದೇ ನಟ ವಿಕ್ಕಿ ಕೌಶಲ್'ಗೆ. ಜಾಹ್ನವಿ ಮತ್ತು ಆಕೆಯ ತಂಗಿ ಖುಷಿ ಇತ್ತಿಚೆಗೆ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ್ದಾರೆ. ಈ ವೇಳೆ ಕಾರ್ತಿಕ್ ಆರ್ಯನ್ ಅಥವಾ ವಿಕ್ಕಿ ಕೌಶಲ್ ಇಬ್ಬರಲ್ಲಿ ಒಬ್ಬರಿಗೆ ಕಿಸ್ ಮಾಡುವ ಆಸೆಯಿದೆ ಎಂದಿದ್ದಾರೆ. ಇಬ್ಬರಲ್ಲಿ ಯಾರನ್ನು ಆರಿಸಿಕೊಳ್ಳುತ್ತೀರಿ ಎಂದಾಗ ವಿಕ್ಕಿ ಕೌಶಲ್ ಎಂದು ಸಣ್ಣದಾಗಿ ಸ್ಮೈಲ್ ಮಾಡಿದ್ದಾರೆ.ಕಾಕತಾಳೀಯವೆಂಬಂತೆ ಅಂದಹಾಗೇ ತಖ್ತ್ ಸಿನಿಮಾದಲ್ಲಿ ವಿಕ್ಕಿ ಕೌಶಲ್ ಮತ್ತು ಜಾಹ್ನವಿ ಒಟ್ಟಿಗೆ ಅಭಿನಯಿಸಿದ್ದಾರೆ. ಇದೇ ಸಿನಿಮಾದಲ್ಲಿ ಸಾರಾ ಮತ್ತು ಕಾರ್ತಿಕ್ ಆರ್ಯನ್ ಕೂಡ ಜೊತೆಯಾಗಿದ್ದಾರೆ. ಬಿ ಟೌನ್ ನಲ್ಲಿ ಅದಾಗಲೇ ಕಾರ್ತಿಕ್ ಸಾರಾ ಡೇಟಿಂಗ್ ನಲ್ಲಿದ್ದಾರೆಂಬ ಸುದ್ದಿಯಿದೆ.
Comments