'ವೀಕೆಂಡ್ ವಿತ್ ರಮೇಶ್' ಗೆ ಬರಲಿದ್ದಾರಂತೆ ಆ ಖ್ಯಾತ ಸ್ಟಾರ್ ಹಿರೋಯಿನ್.....?!!!

ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಇದೀಗ ದಕ್ಷಿಣ ಭಾರತದ ಮೋಸ್ಟ್ ಸ್ಟಾರ್ ಹೀರೋಯಿನ್ ಗೆಸ್ಟ್ ಆಗಿ ಬರಲಿದ್ದಾರೆ ಎಂಬ ಸುದ್ದಿ ಇದೀಗ ವೈರಲ್ ಆಗಿದೆ. ಇತ್ತೀಚೆಗೆ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಖಾಸಗಿ ವಾಹಿನಿಯ ಬಿಸಿನೆಸ್ ಹೆಡ್ ಆಗಿರುವಂತಹ ರಾಘವೇಂದ್ರ ಹುಣಸೂರು ಅವರು ಈ ವಿಚಾರವನ್ನು ರಿವೀಲ್ ಮಾಡಿದ್ದಾರೆ. ನಮ್ಮ ನಾಡಿನಲ್ಲಿ ಹುಟ್ಟಿ ಬೇರೆ ಕಡೆ ಹೆಸರು ಮಾಡಿದ ಸಾಧಕರನ್ನು ಕರೆ ತರುವ ಯೋಚನೆ ಮಾಡುತ್ತಿದ್ದೇವೆ.
ರಾಜ್ಯದಲ್ಲಿ ಹುಟ್ಟಿ ಬೇರೆ ಕಡೆ ಹೆಸರು ಮಾಡಿದ ವ್ಯಕ್ತಿಗಳು ಈ ಶೋನಲ್ಲಿ ಭಾಗವಹಿಸಲಿದ್ದಾರೆ ಎನ್ನುವ ವಿಚಾರ ಹೊರಬರುತ್ತಿದ್ದಂತೆ ಅನುಷ್ಕಾ ಶೆಟ್ಟಿ, ಐಶ್ವರ್ಯಾ ರೈ, ಸುನಿಲ್ ಶೆಟ್ಟಿ ಬರುತ್ತಾರಾ ಎನ್ನುವ ಪ್ರಶ್ನೆ ಎದ್ದಿದೆ. ಆದರೆ ಕೆಲ ಗುಪ್ತ ಮೂಲಗಳ ಪ್ರಕಾರ ನಟಿ ಅನುಷ್ಕಾ ಶೆಟ್ಟಿ ಅವರನ್ನು ಈ ಕಾರ್ಯಕ್ರಮಕ್ಕೆ ಕರೆ ತರುವ ಪ್ರಯತ್ನ ಮಾಡಲಾಗುತ್ತಿದೆ.ಆದರೆ ಅವರು ಕರೆದಿದ್ದಾರೆಂದರೇ, ಅನುಷ್ಕಾ ಶೆಟ್ಟಿ ಕಾರ್ಯಕ್ರಮಕ್ಕೆ ಬರಲು ಒಪ್ಪಿದ್ದಾರಾ, ಅಥವಾ ಇಲ್ಲವಾ ಎಂಬ ಖಚಿತ ಮಾಹಿತಿ ಲಭ್ಯವಾಗಿಲ್ಲ. ಅನುಷ್ಕಾ ಶೆಟ್ಟಿ ಅಲ್ಲದೇ ರಜನಿಕಾಂತ್, ಐಶ್ವರ್ಯ ರೈ ಬಚ್ಚನ್, ಎಸ್.ಎಸ್ ರಾಜಮೌಳಿ, ರಾಹುಲ್ ಡ್ರಾವಿಡ್ ಅವರನ್ನು ಕರೆ ತರಲು ವೀಕೆಂಡ್ ವಿತ್ ರಮೇಶ್ ತಂಡ ಮುಂದಾಗುತ್ತಿದೆ.
ವೀಕೆಂಡ್ ವಿತ್ ನಾಲ್ಕನೇ ಆವೃತಿ ಶುರುವಾಗಿದೆ. ಮೊದಲ ಸಂಚಿಕೆಯ ಅತಿಥಿ ಡಾ. ವಿರೆಂದ್ರ ಹೆಗ್ಗಡೆಯುವರು ಆಗಮಿಸಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ಮಾಲಶ್ರೀ, ಪ್ರೇಮಾ, ರಾಘವೇಂದ್ರ ರಾಜ್ ಕುಮಾರ್ ಅವರನ್ನು ಕರೆತರುವ ಪ್ರಯತ್ನ ಮಾಡಲಾಗ್ತಿದ್ಯಂತೆ.
Comments