ಕನ್ನಡದ ನಟನಿಗೆ ಹಿಗ್ಗಾಮುಗ್ಗಾ ಥಳಿಸಿದ ತಮಿಳಿನ ಸ್ಟಾರ್ ನಟ...!!!

ತಮಿಳಿನ ಸ್ಟಾರ್ ಒಬ್ಬರು ಕನ್ನಡದ ನಟನೊಬ್ಬನಿಗೆ ಹಿಗ್ಗಾ-ಮುಗ್ಗಾ ಥಳಿಸಿರುವ ಘಟನೆಯೊಂದು ವರದಿಯಾಗಿದೆ.ಚಿಕ್ಕ ಕಾರಣಕ್ಕಾಗಿ ತನ್ನ ಸ್ನೇಹಿತರ ಜೊತೆ ಸೇರಿ ಕನ್ನಡದ ಸ್ಟಾರ್ ನಟನಿಗೆ ಕಾಲಿನಿಂದ ಒದ್ದು ಹಲ್ಲೆ ಮಾಡಿರುವ ಘಟನೆ ಚೆನ್ನೈನಲ್ಲಿ ನಡೆದಿದೆ. ಹಲ್ಲೆಗೊಳಗಾದ ಕನ್ನಡದ ನಟ ಯಾರ್ ಗೊತ್ತಾ..
ಚೆನ್ನೈ ನಲ್ಲಿ ವೀರು ಪಾಕಂ ಅಪಾರ್ಟ್’ಮೆಂಟ್ ವೊಂದರಲ್ಲಿ ಈ ಘಟನೆ ನಡೆದಿದೆ. ಅಲ್ಲಿಗೆ ಹೋದ ತಮಿಳಿನ ನಟ ವಿಮಲ್ ಅವರು ನನಗೆ ರೂಂ ಬೇಕು ಎಂದು ಕೇಳಿದ್ದಾರೆ. ಅಪಾರ್ಟ್ ಮೆಂಟ್ನಲ್ಲಿ ತಂಗಿದ್ದ ಕನ್ನಡದ ನಟ ಅಭಿಷೇಕ್ ಅವರು ಫೋನ್ ನಲ್ಲಿ ಮಾತನಾಡುತ್ತಾ ಹೊರಗೆ ಬಂದಿದ್ದಾರೆ. ಅವರ ಬಳಿ ಹೋದ ವಿಮಲ್ ಮತ್ತು ಆತನ ಸ್ನೇಹಿತರು ನಮಗೆ ರೂಂ ಕೊಡಿ ಎಂದು ದರ್ಪದಿಂದ ಕೇಳಿದ್ದಾರೆ. ಆದರೆ ಅಭಿಷೇಕ್, ವಿಮಲ್’ಗೆ ನಾನು ರೂಂ ಬಾಯ್ ಅಲ್ಲ. ನಿಮಗೆ ರೂಂ ಕೊಡೋಕೆ ಎಂದು ಹೇಳಿದ್ದಾರೆ. ಹೀಗೆ ಸಣ್ಣದಾಗಿ ವಾಗ್ವಾದ ಶುರುವಾಗಿದ್ದು ಆ ನಂತರ ಹಲ್ಲೆ ಮಾಡುವ ಹಂತಕ್ಕೆ ಬೆಳೆದಿದೆ. ಈ ವಿಚಾರಕ್ಕೆ ಪಿತ್ತ ನೆತ್ತಿಗೇರಿಸಿಕೊಂಡ ವಿಮಲ್ ಮತ್ತು ಆತನ ಸ್ನೇಹಿತರು ಅಭಿಷೇಕ್ ಅವರನ್ನು ಕೆಳಗೆ ಹಾಕಿ, ಕಾಲಿನಿಂದ ಒದ್ದು ಅವರನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಆದರೆ ನಟ ಅಭಿಷೇಕ್ ಅವರ ಫೋಟೋ ಲೀಕ್ ಆಗಿಲ್ಲ. ಆ ಬಗ್ಗೆ ಅಭಿಷೇಕ್ ಕಂಪ್ಲೇಟ್ ಕೂಡ ಕೊಟ್ಟಿದ್ದಾರೆ. ಪೊಲೀಸರು ವಿಮಲ್ ಅವರನ್ನು ಹುಡುಕುತ್ತಿದ್ದಾರಂತೆ. ಆದರೆ ವಿಮಲ್ ಪರಾರಿಯಾಗಿದ್ದಾರೆ. ತಮಿಳಿನಲ್ಲಿ ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟು ಅಭಿಮಾನಿಗಳ ಪಾಲಿಗೆ ಸ್ಟಾರ್ ಹೀರೋ ಆದ ಇವರು ಇನ್ನೊಬ್ಬ ನಟನ ಎದುರು ವೀರಾವೇಷಾ ತೋರಿಸುವ ಅಗತ್ಯವಿತ್ತೇ...
Comments