'ಅವಕಾಶ ಬೇಕು ಅಂದ್ರೆ ಅಡ್ಜೆಸ್ಟ್ ಮಾಡ್ಕೊಬೇಕು' ಎಂದ ಸಹ ನಿರ್ದೇಶಕನ ಕರ್ಮಕಾಂಡ ಬಯಲಿಗೆಳೆದ ಬೋಲ್ಡ್ ನಟಿ..!!

24 Apr 2019 9:38 AM | Entertainment
1073 Report

ಬಣ್ಣದ ಲೋಕದಲ್ಲಿ ಹೆಣ್ಣು ಮಕ್ಕಳು ಸ್ಥಿರವಾಗಿ ನಿಲ್ಲುವುದು ಕಷ್ಟವೇ ಸರಿ… ಎಲ್ಲಾ ಕ್ಷೇತ್ರಗಳಲ್ಲೂ ಕೂಡ ಹೆಣ್ಣು ಮಕ್ಕಳಿಗೆ ಒಂದಲ್ಲ ಒಂದು ತೊಂದರೆ ಇದ್ದೆ ಇರುತ್ತದೆ… ಆದರೆ ಸಿನಿಮಾ ಜಗತ್ತಿನಲ್ಲಿ ಇದು ಸ್ವಲ್ಪ ಜಾಸ್ತಿಯೇ ಇರುತ್ತದೆ.. ಇತ್ತಿಚಿಗೆ ಸಿನಿಮಾರಂಗದಲ್ಲಿ ಕಾಸ್ಟಿಂಗ್ ಕೌಚ್ ಎಂಬ ಸುದ್ದಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು.. ನಟಿ ಮಣಿಯರು ಇದರ ವಿರುದ್ದ ಸಿಡಿದೆದ್ದಿದ್ದರು.. ಆದರೂ ಕೂಡ ಇನ್ನೂ ಹೆಣ್ಣು ಮಕ್ಕಳಿಗೆ ಈ ಸಮಸ್ಯೆಯಿಂದ ಮುಕ್ತಿ ಸಿಕ್ಕಿಲ್ಲ… ಈ ಸಮಸ್ಯೆ ಈಗ ಮಲಯಾಳಂ ನಟಿ ಸಜಿತಾ ಮಡತಿಲ್ ಅವರನ್ನು ಕೂಡ ಕಾಡುತ್ತಿದೆ. ಅವಕಾಶ ನೀಡುವುದಾಗಿ ಹೇಳಿ ಮಂಚಕ್ಕೆ ಕರೆದ ಸಹ ನಿರ್ದೇಶಕನೊಬ್ಬನ ಕರ್ಮಕಾಂಡವನ್ನು ಸಜಿತಾ  ಮಡತಿಲ್ ಇದೀಗ ಬಯಲಿಗೆಳೆದಿದ್ದಾರೆ.

ತಮಿಳು ಚಿತ್ರರಂಗದಲ್ಲಿ ಸಜಿತಾ ಮಡತಿಲ್ ಬೋಲ್ಡ್ ಪಾತ್ರದ ಮೂಲಕವೇ ಗುರುತಿಸಿಕೊಂಡ ನಟಿ. ಈ ನಟಿಗೆ ಇತ್ತೀಚಿಗೆ ಒಬ್ಬ ಸಹ ನಿರ್ದೇಶಕ ಅಂತ ಹೇಳಿಕೊಂಡು ಕರೆ ಮಾಡಿದ್ದಾನೆ. ನಿಮಗೆ ವಯಸ್ಸು ಎಷ್ಟು? ನೀವು ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತೀರಾ? ಎಂದು ಹೇಳಿ ನಂತರ "ಅವಕಾಶ ಬೇಕು ಅಂದ್ರೆ ಕಾಂಪ್ರಮೈಸ್ ಗೆ ರೆಡಿಯಾಗಬೇಕು ಎಂದು ತಿಳಿಸಿದ್ದಾನೆ.. ಆ ಸಹ ನಿರ್ದೇಶಕನ ಮಾತು ಕೇಳಿ ಸಜಿತಾ ಒಂದು ಕ್ಷಣ ದಂಗಾಗಿದ್ದಾರೆ. ನಂತರ  ಶಾಕ್ ಆದ ಸಜಿತಾ ಫೋನ್ ಮಾಡಿದ ವ್ಯಕ್ತಿ ಯಾರು ಎಂದು ತಿಳಿದುಕೊಳ್ಳುವ ಪ್ರಯತ್ನವನ್ನು ಮುಂದುವರೆಸಿದ್ದಾರೆ. 

ಆ ನಂತರ ಗೊತ್ತಾಗಿದ್ದು ಆತ ಕಾರ್ತಿಕ್ ಎನ್ನುವ ತಮಿಳಿನ ಸಹ ನಿರ್ದೇಶಕ ಎಂದು. ನಂತರ ಸಜಿತಾ ತನಗಾದ ಅನುಭವವನ್ನು ಫೇಸ್ ಬುಕ್ ನಲ್ಲಿ ಹಂಚಿಕೊಳ್ಳುವ ಜೊತೆಗೆ ಸಹ ನಿರ್ದೇಶಕ ಕಾರ್ತಿಕ್ ಫೋನ್ ನಂಬರ್ ಅನ್ನು ಕೂಡ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಯಾರಾದರು ಇದಕ್ಕೆ ಸಿದ್ಧರಾಗಿದ್ದರೆ ಫೋನ್ ಮಾಡಿ ಎಂದು ಬರೆದು ಆತನ ಫೋನ್ ಸಹ ನಿರ್ದೇಶಕನ ನಂಬರ್ ಪೋಸ್ಟ್ ಮಾಡಿದ್ದಾರೆ. ಸಜಿತಾ ಆತನ ಕರ್ಮಕಾಂಡವನ್ನು ಬಯಲಿಗೆ ಎಳೆಯುತ್ತಿದಂತೆ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ. ಇತ್ತ ಸಜಿತಾ ಪೊಲೀಸರಿಗೆ ದೂರು ನೀಡಿದರೆ ಮತ್ತೊಂದು ಕಡೆ ಕಾರ್ತಿಕ್ ಕ್ಷಮೆ ಕೇಳುತ್ತಿದ್ಧಾನೆ…ಇನ್ನೂ ಎಲ್ಲಿಯವರೆಗೆ ಇದನ್ನೆಲ್ಲಾ ಸಹಿಸಿಕೊಂಡು ಇರಬೇಕು,, ಈ ಜಗತ್ತು ಯಾವಾಗ ಬದಲಾಗುತ್ತದೆ ಎಂದು ಸಜಿತಾ ಬೇಸರ ವ್ಯಕ್ತ ಪಡಿಸಿದ್ದಾರೆ.

Edited By

Manjula M

Reported By

Manjula M

Comments