ನಾನು ರಾಹುಲ್ ಗಾಂಧಿಯನ್ನು ಪ್ರೀತಿಸುತ್ತಿದ್ದೇನೆಂದ ಖ್ಯಾತ ನಟಿ..?!!!

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಇದೀಗ ನಟಿಯೊಬ್ಬರು ಐ ಲವ್ ಯೂ ಎಂದು ಹೇಳಿರುವ ಸುದ್ದಿ ಇದೀಗ ವೈರಲ್ ಆಗಿದೆ. ಅಂದಹಾಗೇ ಈ ಹಿಂದೆಯೂ ರಾಹುಲ್ ಗಾಂಧಿ ಜೊತೆ ಹುಡುಗಿಯೊಬ್ಬಳು ಸುತ್ತಾಡುತ್ತಿದ್ದ ವಿಚಾರ ಮಾಧ್ಯಮಗಳ್ಲಲಿ ದೊಡ್ಡ ಮಟ್ಟದ ಸುದ್ದಿಯಾಗಿತ್ತು. ಆ ನಂತರ ಆಕೆಗೆ ಮದುವೆ ಫಿಕ್ಸ್ ಆಗಿ ಬೇರೆಯವರ ಮನೆ ಸೊಸೆ ಕೂಡ ಆದರು. ಆದರೆ ಇದೀಗ ಬಾಲಿವುಡ್'ನ ಖ್ಯಾತ ನಟಿಯೊಬ್ಬರು ನಾನು ರಾಹುಲ್ ಗಾಂಧಿಯವರನ್ನು ಪ್ರೀತಿಸುತ್ತೇನೆಂದು ಹೇಳುವ ಮೂಲಕ ಬಿರುಗಾಳಿ ಎಬ್ಬಿಸಿದ್ದಾರೆ.
ನಟಿ ಮಹಿಕಾ ಶರ್ಮಾ ಈ ಕುರಿತು ಸಾಮಾಜಿಕ ತಾಣದಲ್ಲಿ ಪೋಸ್ಟ್ ಹಾಕಿಕೊಂಡಿದ್ದಾಳೆ. ತನ್ನ ಇನ್‍ಸ್ಟಾಗ್ರಾಮ್‍ನಲ್ಲಿ ಮಹಿಕಾ ಈ ಸಂಬಂಧ ಪೋಸ್ಟ್ ಮಾಡಿದ್ದಾರೆ. ಅಷ್ಟೇ ಅಲ್ಲದೇ ರಾಹುಲ್ ಜೊತೆ ತೆಗೆಸಿಕೊಂಡಿರುವ ಫೋಟೋವನ್ನು ಶೇರ್ ಮಾಡಿದ್ದಾರೆ. ರಾಹುಲ್ ಜೊತೆ ತಮ್ಮ ಫೋಟೋವನ್ನು ಹರಿಬಿಟ್ಟಿರುವ ಮಹಿಕಾ ಶರ್ಮಾ ತಾನು ರಾಹುಲ್ ಅನ್ನು ಪ್ರೀತಿಸುತ್ತಿರುವುದರ ಕಾರಣ ಸಹ ನೀಡಿದ್ದಾರೆ. “ರಾಹುಲ್ ಗಾಂಧಿಗೆ ವಿಚಿತ್ರ ಮಾತುಗಳಿಂದ ಜನರನ್ನು ನಗಿಸುವ ಗುಣವಿದೆ. ಇದಕ್ಕಾಗಿ ನಾನು ರಾಹುಲ್ ಅವರನ್ನು ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ.”ರಾಜನಾದವ ತನ್ನ ಪ್ರಜೆಗಳನ್ನು ಸದಾ ಸಂತೋಷವಾಗಿರುವಂತೆ ನೋಡಿಕೊಳ್ಳಬೇಕಾದದ್ದು ಧರ್ಮ.ಆ ಗುಣ ರಾಹುಲ್ ಅವರಲ್ಲಿದೆ” ಎಂದು ಮಹಿಕಾ ಬರೆದುಕೊಂಡಿದ್ದಾರೆ.ಅಂದಹಾಗೇ ಮಹಿಕಾ ಪೋಸ್ಟ್ ಮಾಡಿರುವ ಹೇಳಿಕೆಗೆ ಕಾಂಗ್ರೆಸ್ ನಿಂದ ಭಾರೀ ಚರ್ಚೆಗಳು ಕಾರಣವಾಗಿವೆ. ಅಷ್ಟೇ ಅಲ್ಲದೇ ಮಹಿಕಾ ಪೋಸ್ಟ್ಗೆ ಟೀಕೆಗಳು ಕೂಡ ವ್ಯಕ್ತವಾಗಿವೆ.
Comments