ಡಿಪ್ಪಿ ಚಪ್ಪಲಿಯನ್ನು ಕೈಯಲ್ಲಿ ಹಿಡಿದು ಮದುವೆ ಮನೆಯಲ್ಲಿ ಸುತ್ತಾಡ್ತಿದ್ರಂತೆ ರಣವೀರ್...!!!
ಬಾಲಿವುಡ್’ನ ಮೋಸ್ಟ್ ಸೆಲೆಬ್ರಿಟಿ ಸ್ಟಾರ್ ಜೋಡಿ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಸದಾ ಒಂದಿಲ್ಲೊಂದು ವಿಚಾರದಲ್ಲಿ ಸುದ್ದಿಯಾಗುತ್ತಲೇ ಇದ್ದಾರೆ. ಅಂದಹಾಗೇ ಈ ಕ್ಯೂಟ್ ಕಪಲ್ ಇತ್ತೀಚಿಗೆ ಮದುವೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ನಡೆದ ಒಂದು ಘಟನೆ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ದೀಪಿಕಾ ಪಡುಕೋಣೆ ಕಾರ್ಯಕ್ರಮಕ್ಕೆ ಬಂದವರ ಜೊತೆ ಮಾತನಾಡುತ್ತಿದ್ದಾಗ ರಣವೀರ್ ಡಿಪ್ಪಿ ಚಪ್ಪಲಿಗಳನ್ನು ಕೈಯಲ್ಲಿ ಹಿಡಿದುಕೊಂಡು ಓಡಾಡುತ್ತಿದ್ದರಂತೆ.
ಯಾರೋ ಇದನ್ನು ವಿಡಿಯೋ ಮಾಡಿ ಶೇರ್ ಮಾಡಿದ್ದಾರೆ.ಅಷ್ಟೇ ಅಲ್ಲದೆ ದೀಪಿಕಾ ಮಾತಿನಲ್ಲಿ ಬ್ಯುಸಿಯಾಗಿದ್ದಾರೆ. ದೀಪಿಕಾ ಧರಿಸಿದ ಚಪ್ಪಲಿಗಳನ್ನು ರಣವೀರ್ ಸಿಂಗ್ ಕೈ ಯಲ್ಲಿ ಹಿಡಿದು ಡಿಪ್ಪಿ ಹಿಂದೆ ನಿಂತಿದ್ದಾರೆ. ಈ ಫೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ದೀಪಿಕಾದ್ದು ಬೆಸ್ಟ್ ಸೆಲೆಕ್ಷನ್ ಎಂದು ಹಾಡಿ ಹೊಗಳಿದ್ದಾರೆ. ಇಬ್ಬರ ರಿಲೇಷನ್ಶಿಪ್ ಮೇಲೆ ಯಾರ ಕೆಂಗಣ್ಣು ಬೀಳದಿರಲಿ ಎಂದು ಡಿಪ್ಪಿ ಅಭಿಮಾನಿಗಳು ದೃಷ್ಟಿ ತೆಗೆದಿದ್ದಾರೆ. ಈ ಹಿಂದೆಯೂ ಹೋಟೆಲ್ ವೊಂದಕ್ಕೆ ಡಿನ್ನರ್ ಗೆ ಹೋಗಿದ್ದ ಸಂದರ್ಭದಲ್ಲಿ ಮಾಧ್ಯಮದವರಿಗೆ ಪೋಸ್ ಕೊಡುವಾಗ ಡಿಪ್ಪಿ ಬಟ್ಟೆ ಮೇಲಿದ್ದ ಕಸ ತೆಗೆದು ಹಾಕಿದ್ದರಂತೆ ರಣವೀರ್. ರಣವೀರ್ ದೀಪಿಕಾಳನ್ನು ಗಟ್ಟಿಯಾಗಿ ಅಪ್ಪಿಕೊಂಡು ಆಕೆಯ ಹಣೆ ಮೇಲೆ ಕಿಸ್ ಮಾಡಿದ್ದರು. ನಂತರ ದೀಪಿಕಾ ಫೋಟೋಗ್ರಾಫರ್ ಗಳಿಗೆ ಧನ್ಯವಾದ ತಿಳಿಸಿ ಅಲ್ಲಿಂದ ಹೊರಟು ಹೋಗಿದ್ದರು.
Comments