ನಟಿ ಶ್ರೀದೇವಿ ಸಾವಿಗೆ ಕನ್ನಡದ ಸ್ಟಾರ್ ನಟಿ ಕಾರಣವಂತೆ : ಅನಾಮಿಕನಿಂದ ರಿವಿಲ್ ಆಯ್ತು ಸಾವಿನ ರಹಸ್ಯ….
ಖ್ಯಾತ ನಟಿ ಶ್ರಿದೇವಿ ಅವರ ಸಾವು ಚಿತ್ರರಂಗಕ್ಕೆ ನುಂಗಲಾರದ ತುತ್ತಾಗಿತ್ತು. ಶ್ರಿದೇವಿ ಸತ್ತಿದ್ದು ಆಕಸ್ಮಿಕವಲ್ಲ, ಅವರದ್ದು ಮರ್ಡರ್ ಎಂಬ ವರದಿಯೂ ಬಂತು. ಆತ್ಮೀಯರ ಮದುವೆಗೆ ಹೋಗಿದ್ದ ಶ್ರೀದೇವಿ ಹೋಟೆಲ್’ವೊಂದರ ಬಾತ್ ಟಬ್ನಲ್ಲಿ ಹೆಣವಾಗಿ ಸಿಕ್ಕರು. ಆದರೆ ಇದೀಗ ಶ್ರೀದೇವಿ ಸಾವಿಗೆ ಕನ್ನಡದ ನಟಿಯೊಬ್ಬರು ಕಾರಣವಾಗಿದ್ದಾರೆ ಎಂಬ ಮಾಹಿತಿ ಎಲ್ಲೆಡೆ ಹರಿದಾಡುತ್ತಿದೆ. ಈ ವಿಚಾರದ ಬಗ್ಗೆ ಅನೇಕ ಚರ್ಚೆಗಳು ಸೃಷ್ಟಿಯಾಗಿವೆ. ಶ್ರೀದೇವಿ ಸಾವಿಗೂ, ಆ ಕನ್ನಡದ ನಟಿಗೂ ಯಾವ ಸಂಬಂಧ ಅಂತಾ ಕೇಳ್ತೀರಾ. ಶ್ರೀದೇವಿ ಸಾವು ಹೇಗಾಗಿದೆ ಎಂದು ಎಲ್ಲರಿಗೂ ಸಹಜವಾದ ಕುತೂಹಲ ಇದ್ದೇ ಇದೆ. ಆದರೆ ಸಾವಿನ ನಂಟು ಕನ್ನಡದ ನಟಿ, ಪುನೀತ್ ರಾಜ್ ಕುಮಾರ್ ಅಭಿನಯದ ರಾಜಕುಮಾರ ಸಿನಿಮಾ ಹಿರೋಯಿನ್ ಪ್ರಿಯಾ ಆನಂದ್ ಮೇಲೆ ಬಂದಿದೆ.
ಇಂತಹದ್ದೊಂದು ಗಂಭೀರ ಆರೋಪಕ್ಕೆ ಸ್ವತಃ ಪ್ರಿಯಾ ಆನಂದ್ ಕೂಡ ಶಾಕ್ ಆಗಿದ್ದಾರಂತೆ.ಅಂದಹಾಗೇ ಪ್ರಿಯಾ ಆನಂದ್ ರಾಜಕುಮಾರ ನಂತರ ಕನ್ನಡದ ಮತ್ತೊಂದು ಸಿನಿಮಾ ಆರೆಂಜ್ ನಲ್ಲಿಯೂ ಕಾಣಿಸಿಕೊಂಡಿದ್ದರು. ಇರಲಿ. ಆದರೆ ಪ್ರಿಯಾಗೂ ಮತ್ತು ಶ್ರೀದೇವಿಗೂ ಸಾವಿಗೂ ಏನು ಸಂಬಂಧ. ಅವರ ಕೊಲೆ….ಬಾಲಿವುಡ್ ಎವರ್ಗ್ರೀನ್ ನಟಿ ಶ್ರೇದೇವಿ ಸಾವಿಗೆ ಈಕೆಯೇ ಕಾರಣವೆಂದು ಅನಾಮಿಕ ವ್ಯಕ್ತಿಯೊಬ್ಬರು ಹೇಳಿದ್ದಾರೆ. ಹೌದು, ಕಳೆದ ವರ್ಷ ದುಬೈನ ಹೋಟೆಲ್ ವೊಂದರಲ್ಲಿ ಅನುಮಾನಸ್ಪಾದವಾಗಿ ಸಾವನ್ನಪ್ಪಿದ ಶ್ರೀದೇವಿ ಆಕಸ್ಮಿಕ ಸಾವಿಗೆ ಶರಣಾಗಿದ್ದರು ಎಂದು ಪ್ರಕರಣವನ್ನ ಕ್ಲೋಸ್ ಮಾಡಲಾಗಿದೆ. ಶ್ರೀದೇವಿ ಮತ್ತು ಪ್ರಿಯಾ ಆನಂದ್ ಒಟ್ಟಿಗೆ ಇಂಗ್ಲಿಷ್ ವಿಂಗ್ಲಿಷ್ ಚಿತ್ರದಲ್ಲಿ ನಟನೆ ಮಾಡಿದ್ದಾರೆ. ಸಿನಿಮಾದುದ್ದಕ್ಕೂ ಶ್ರೀದೇವಿ ಜೊತೆಯೇ ಪ್ರಿಯಾ ಕೂಡ ಕಾಣಿಸಿಕೊಂಡಿದ್ದಾರೆ.
ಪ್ರಿಯಾಗೆ ಬಾಲಿವುಡ್ ನಲ್ಲಿ ಇದು ಮೊದಲ ಸಿನಿಮಾವಾಗಿತ್ತು. ಈ ಸಿನಿಮಾದಲ್ಲಿ ಶ್ರೀದೇವಿ ಜೊತೆ ಆ್ಯಕ್ಟ್ ಮಾಡಿದ್ದರಿಂದಲೇ ಆಕೆಯ ಮೇಲೆ ಇಂತಹದ್ದೊಂದು ಗಂಭೀರ ಆರೋಪ ಕೇಳಿ ಬಂದಿದೆ. ಅಂದಹಾಗೇ ಅನಾಮಿಕ ವ್ಯಕ್ತಿಯೊಬ್ಬನ ಟ್ವೀಟ್ ನಿಂದ ಪ್ರಿಯಾ ಮೇಲೆ ಈ ಆರೋಪ ಬಿದ್ದಿದೆ. ಪ್ರಿಯಾ ಬ್ಯಾಡ್ ಲಕ್’ನಿಂದಲೇ ಶ್ರೀದೇವಿ ಸತ್ತಿದ್ದು ಎಂದು ಕಟುವಾಗಿ ಟೀಕಿಸಿದ್ದಾರೆ. ಶ್ರೀದೇವಿ ಜೊತೆ ಇಂಗ್ಲಿಷ್ ವಿಂಗ್ಲಿಷ್ ಸಿನಿಮಾ ಮಾಡಿದ್ರು. ಅಲ್ಲಿ ಶ್ರೀದೇವಿ ನಿಧನವಾದರು. ಆಮೇಲೆ ಎಲ್.ಕೆ.ಜಿ ಅಂತ ಸಿನಿಮಾ ಮಾಡಿದ್ರು ಆ ಚಿತ್ರದಲ್ಲಿ ನಟಿಸಿದ್ದ ಆರ್.ಕೆ ರಿತೇಶ್ ಸಾವನ್ನಪ್ಪಿದರು. ಇದೆಲ್ಲವೂ ಪ್ರಿಯಾ ಅವರ ಐರನ್ ಲೆಗ್ ಕಾರಣ, ಆಕೆ ಜೊತೆ ಸಿನಿಮಾ ಮಾಡಿದ್ರೆ ಯಾರಾದರೂ ಸಾಯ್ತಾರೆ ಎಂದು ಬಹಳ ಕಠಿಣವಾಗಿ ಕಮೆಂಟ್ ಮಾಡಿದ್ದಾರೆ.
ಈ ಕಮೆಂಟ್’ಗಳಿಗೆ ಪ್ರಿಯಾ ಆನಂದ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಇಂಥಾ ಕಮೆಂಟ್’ಗಳಿಗೆ ಭಯ ಪಡುವ ಅಗತ್ಯ ವಿಲ್ಲ. ಇದೊಂದು ಗಂಭೀರ ಆರೋಪ. ನಿಮ್ಮ ಥರವೇ ನಾನು ತಿರುಗೇಟು ಕೊಡ ಬಲ್ಲೆ, ಆದರೆ ಎಚ್ಚರವಿರಲಿ. ನೀವು ಮಾತನಾಡುವ ವಿಚಾರ ಯಾರದ್ದು, ಯಾರ ಬಗ್ಗೆ ಮಾತನಾಡುತ್ತಿದ್ದೀರಿ. ವಿಷಯ ಏನೆಂಬುದು. ಸಾಮಾಜಿಕ ಜಾಲತಾಣಗಳಲ್ಲಿ ಗುರುತಿಸಿಕೊಳ್ಳುವುದು ಸುಲಭದ ಕೆಲಸ. ನಿಮಗೆ ಉತ್ತರ ಕೊಡುವ ಮೂಲಕ ನಿಮ್ಮನ್ನು ಕೀಳು ಮಟ್ಟಕ್ಕೆ ತರಲು ನಾನು ಇಚ್ಛಿಸುವುದಿಲ್ಲವೆಂದಿದ್ದಾರೆ. ಅಭಿಮಾನಿಗಳು ಪ್ರಿಯಾ ಆನಂದ್ ಟ್ವೀಟ್ಗೆ ಸಾಥ್ ನೀಡಿದ್ದಾರೆ. ಅಷ್ಟೇ ಅಲ್ಲದೇ ಆ ಅನಾಮಿಕ ವ್ಯಕ್ತಿ ಮಾಡಿರುವ ಕೀಳು ಮಟ್ಟದ ಆರೊಪಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Comments