ವಿಜಯ್ ದೇವರಕೊಂಡಾ ಜೊತೆ ದಿಗಂತ್ ಫೈಟ್'ಗಿಳಿದ್ರು : ಯಾವ ವಿಚಾರಕ್ಕೆ....

ಸ್ಯಾಂಡಲ್ ವುಡ್’ನ ದೂದ್ ಪೇಡಾ ಖ್ಯಾತಿಯ ದಿಗಂತ್ ತೆಲುಗಿನ ಫೇಮಸ್ ನಟನ ಜೊತೆ ಟಕ್ಕರ್ ಕೊಡೋಕೆ ರೆಡಿಯಾಗಿದ್ದಾರೆ. ಐಂದ್ರಿತಾರನ್ನ ಮದುವೆಯಾದ ಮೇಲೆ ದೂದ್ ಪೇಡಾ ಸಿಕ್ಕಾಪಟ್ಟೆ ಎಂಜಾಯ್ ಮಾಡ್ತಿದ್ರು.ಇತ್ತೀಚೆಗೆ ಮಡದಿಯ ಬರ್ತ್ ಡೇಯನ್ನು ಡಿಫರೆಂಟ್ ಸ್ಟೈಲ್ನಲ್ಲಿ ಆಚರಿಸಿ ಮಾದರಿಯಾಗಿದ್ದರು. ದಶಕಗಳ ನಂತರ ದಿಗಂತ್ ಟಾಲಿವುಡ್ ಗೆ ಹಾರಿದ್ದಾರೆ. ಅಂದಹಾಗೇ ತೆಲುಗಿನಲ್ಲಿ ಅವರು ಯಾರ್ ಜೊತೆ ಆ್ಯಕ್ಟ್ ಮಾಡಿದ್ದಾರೆ ಗೊತ್ತಾ..
ನಟಿ ರಶ್ಮಿಕಾ ಮಂದಣ್ಣ ಜೊತೆ ಗಾಸಿಪ್ಗೆ ಒಳಗಾಗಿ ಕನ್ನಡಿಗರ ವಿರೋಧ ಕಟ್ಟಿಕೊಂಡಿದದ್ದ ವಿಜಯ್ ದೇವರಕೊಂಡಾ ಜೊತೆ ನಟಿಸಲು ಶುರು ಮಾಡಿದ್ದಾರೆ. 2008ರಲ್ಲಿ ತೆರೆಕಂಡ ಕನ್ನಡದ ಹಿಟ್ ಸಿನಿಮಾ ಮುಂಗಾರು ಮಳೆ, ತೆಲುಗು ರೀಮೆಕ್ ‘ವಾನ’ ಚಿತ್ರದಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ದಿಗಂತ್ ಮತ್ತೆ ಟಾಲಿವುಡ್‌ಗೆ ಕಾಲಿಟ್ಟಿದ್ದಾರೆ. ಚಿತ್ರದಲ್ಲಿ ದಿಗಂತ್ ಜೊತೆ ವಿಜಯ್ ಇರ್ತಾರೆ ಅಂತಾ ಮಾತ್ರ ಸುಳಿವಿದೆ. ಇದು ಇಬ್ಬರ ಹೀರೋಗಳ ಕಥೆನಾ..ಅಥವಾ ವಿಜಯ್ ದೇವರಕೊಂಡಾ ರೋಲ್ ಸಿನಿಮಾದಲ್ಲಿ ಏನಿದೆ, ದಿಗಂತ್ ರೋಲ್ ಚಿತ್ರದಲ್ಲಿ ಹೇಗಿದೆ ಅನ್ನೋದರ ಬಗ್ಗೆ ಸ್ವಲ್ಪವೂ ಸುಳಿವಿಲ್ಲ. ಆದರೆ ಇಬ್ಬರು ಹಿರೋಯಿನ್ಗಳು ಮಾತ್ರ ಅದಾಗಲೇ ಫಿಕ್ಸ್ ಆಗಿದ್ದಾರೆ. ಆದರೆ ಸ್ಟೋರಿ ಕಥೆ, ಅಥವಾ ಇನ್ಯಾವುದೇ ಮಾಹಿತಿ ಸದ್ಯಕ್ಕಂತೂ ನಿಂತಿಲ್ಲ. ದೂದ್ ಪೇಡಾ ದಿಗಂತ್ ವಿಜಯ್ ದೇವರಕೊಂಡಾ ಜೊತೆ ನಟಿಸ್ತಾ ಇರೋದೆ ಸ್ಯಾಂಡಲ್ ವುಡ್ನ್ಲಲಿ ಬಿಸಿ ಬಿಸಿ ಸುದ್ದಿಯಾಗಿದೆ. ರಶ್ಮಿಕಾರಿಗೆ ಅದೃಷ್ಟ ತಂದುಕೊಟ್ಟ ವಿಜಯ್, ದಿಗಂತ್ ಗೂ ರೆಡ್ ಕಾರ್ಪೆಟ್ ಹಾಕಿ ಅದೃಷ್ಟ ಲಕ್ಷ್ಮಿ ಒಲಿಯುವಂತೆ ಮಾಡ್ತಾರ ಎಂಬುದು ಕಾದು ನೊಡಬೇಕು. ಅಂದಹಾಗೇ ಸಿನಿಮಾದಲ್ಲಿ ಬೈಕ್ ರೈಡರ್ಸ್ ಆಗಿ ಕಾಣಿಸಿಕೊಳ್ತಿದ್ದಾರೆ ದಿಗಂತ್ ಎಂಬ ಸಣ್ಣ ಸುಳಿವಿದೆ. ಆದರೆ ವಿಜಯ್ ಜೊತೆ ದಿಗಂತ್ ಯಾವ ರೀತಿ ಫೈಟ್ ಮಾಡ್ತಾರೆ ಕಾದು ನೋಡಬೇಕಿದೆ.
Comments