ಐಪಿಎಲ್ ನೋಡಲು ಬಂದ ನಟಿಯ ರಾದ್ಧಾಂತ : ಕುಡಿದು ಕಿರಿಕಿರಿ ಮಾಡಿದ ಸೀರಿಯಲ್ ಕಲಾವಿದೆ...!!!!
ಐಪಿಎಲ್ ಪಂದ್ಯ ನೋಡಲು ಹೋದ ಕಿರುತೆರೆ ನಟಿ ಮಧ್ಯ ಸೇವಿಸಿ ಇತರೆ ಪ್ರೇಕ್ಷಕರಿಗೆ ಕಿರಿಕಿರಿ ಉಂಟು ಮಾಡಿರುವ ಘಟನೆಯೊಂದು ವರದಿಯಾಗಿದೆ. ನಟಿ ಕಾರ್ಪೋರೇಟ್ ಬಾಕ್ಸ್ ನಲ್ಲಿ ಕುಳಿತು ಸ್ನೇಹಿತರೊಂದಿಗೆ ಆಟ ನೋಡುತ್ತಿದ್ದರು. ಆದರೆ ಇದೇ ವೇಳೆ ಕಂಠ ಪೂರ್ತಿ ಕುಡಿದು ಅಮಲಿನಲ್ಲಿ ಇತರೆ ಪ್ರೇಕ್ಷಕರಿಗೆ ತೊಂದರೆ ಉಂಟು ಮಾಡಿದ್ದಾರೆ ಎಂದು ಆಕೆಯ ಮೇಲೆ ದೂರು ದಾಖಲಾಗಿದೆ.ಘಟನೆ ಹೈದರಬಾದಿನಲ್ಲಿ ನಡೆದಿದೆ.
ಭಾನುವಾರದಂದು ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ಸನ್ ರೈಸರ್ಸ್ ಹೈದರಾಬಾದ್ ಹಾಗೂ ಕೋಲ್ಕತ್ತ ನೈಟ್ ರೈಡರ್ಸ್ ತಂಡಗಳ ನಡುವೆ ಪಂದ್ಯ ನಡೆದಿದ್ದು, ಇದನ್ನು ವೀಕ್ಷಿಸಲು ತೆಲುಗು ಕಿರುತೆರೆ ನಟಿ ಪ್ರಶಾಂತಿ ತನ್ನ ಐವರು ಸ್ನೇಹಿತರ ಜೊತೆ ತೆರಳಿದ್ದರು. ಜೋಷ್ ನಲ್ಲಿ ಕೂಗುವುದು, ಇತರರು ಆಟ ನೋಡದಂತೇ ಎದ್ದು ನಿಲ್ಲುವುದು, ಕಾರ್ಪೊರೇಟ್ ಬಾಕ್ಸಿನಲ್ಲಿ ಕುಳಿತಿದ್ದ ಇವರುಗಳು ಮದ್ಯ ಸೇವಿಸಲು ಆರಂಭಿಸಿದ್ದು, ಜೊತೆಗೆ ಗಲಾಟೆ ಮಾಡತೊಡಗಿದ್ದಾರೆ. ಪಂದ್ಯ ವೀಕ್ಷಿಸಲು ಬಂದಿದ್ದ ಸಂತೋಷ್ ಎಂಬವರು ಇದನ್ನು ಪ್ರಶ್ನಿಸಿದಾಗ ಅವರಿಗೆ ಅಡ್ಡಿಪಡಿಸಿದ್ದಾರೆ. ಪ್ರಶಾಂತಿ ಗಲಾಟೆ ಮಾಡುತ್ತಿರುವ ಸಂಪೂರ್ಣ ದೃಶ್ಯಾವಳಿಗಳು ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ಪ್ರಶಾಂತಿ ವಿರುದ್ಧ ದೂರು ದಾಖಲಿಸಲಾಗಿದೆ.
Comments