ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೋದರಳಿಯನ ಸಿನಿಮಾ ಟೀಸರ್ ರಿಲೀಸ್...

ಅಂದಹಾಗೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದ್ಯ ಕ್ಯಾಂಪೇನ್ ಮುಗಿಸಿ ರಿಲ್ಯಾಕ್ಷ್ ಮಾಡ್ತಿದ್ದಾರೆ. ಬಿಸಿಲು, ಧೂಳು ಎನ್ನದೇ ಹಗಲು ರಾತ್ರಿ ಸುಮಲತಾ ಪರ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದ ಯಶ್ ಮತ್ತು ದರ್ಶನ್ ಸಿನಿಮಾ ಶೂಟಿಂಗ್ ಗಳಿಗೆ ಬ್ರೇಕ್ ಹಾಕಿ ವಿಶ್ರಾಂತಿ ತೆಗೆದುಕೊಳ್ತಿದ್ದಾರೆ. ಸದ್ಯ ದರ್ಶನ್ ಮತ್ತು ಯಶ್ ರ ಬಹು ನಿರೀಕ್ಷಿತ ಸಿನಿಮಾಗಳು ಶೂಟಿಂಗ್ ಹಂತದಲ್ಲಿವೆ. ಅದೇನೆ ಇರಲೀ... ಈ ನಡುವೆ ಡಿ ಬಾಸ್ ದರ್ಶನ್ ಸೋದರಳಿಯ ಕೂಡ ಸಿನಿ ಲ್ಯಾಂಡ್ ಗೆ ಪರಿಚಯವಾಗಿದ್ದು ಹಳೆಯ ವಿಚಾರ. ಆದರೆ ಸದ್ಯ ಮನೋಜ್ ನಟನೆಯ ಸಿನಿಮಾದ ಟೀಸರ್ ಕೂಡ ರಿಲೀಸ್ ಆಗಿದೆ.
ಸೋಶಿಯಲ್ ಮಿಡಿಯಾದಲ್ಲು ಕೂಡ ಟಕ್ಕರ್ ಒಂದಷ್ಟು ಸೌಂಡು ಮಾಡುತ್ತಿದೆ. ದರ್ಶನ್ ಸೋದರಳಿಯ ಮನೋಜ್ ಟಕ್ಕರ್ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಪ್ರವೇಶ ಮಾಡಿದ್ದು ನಿಮಗೆ ಗೊತ್ತೇ ಇದೆ. ಟಕ್ಕರ್ ಸಿನಿಮಾಗೆ ಹೆಸರಿಟ್ಟ ದಿನದಿಂದ ಇಲ್ಲಿಯವರೆಗೂ ಒಂದಿಲ್ಲೊಂದು ವಿಚಾರಕ್ಕೆ ಸದ್ದು ಮಾಡುತ್ತಲೇ ಬಂದಿದೆ. ಸದ್ಯ ನಿನ್ನೆಯಷ್ಟೇ ಸಿನಿಮಾ ಟೀಸರ್ ರಿಲೀಸ್ ಆಗಿದ್ದು, ಸ್ಯಾಂಡಲ್ ವುಡ್ ನಲ್ಲಿ ಭಾರಿಯೇ ಹವಾ ಕ್ರಿಯೇಟ್ ಮಾಡಿದೆ. ಟೀಸರ್‌ನಲ್ಲಿ ಖಡಕ್ ಲುಕ್ ನಲ್ಲಿ ಕಾಣಿಸಿಕೊಂಡಿರುವ ನಟ ಮನೋಜ್ ಸ್ಯಾಂಡಲ್‌ವುಡ್ ನಲ್ಲಿ ಮಾಸ್ ಅಭಿಮಾನಿಗಳನ್ನು ಸೆಳೆಯುವಲ್ಲಿ ಯಶಸ್ವಿ ಆಗಲಿದ್ದಾರೆ ಎನ್ನುತ್ತಿದ್ದಾರೆ ಸಿನಿಮಾ ಪಂಡಿತರು. ಅಂದಹಾಗೇ ಮನೋಜ್ ಗೆ ನಾಯಕಿಯಾಗಿ ಟಕ್ಕರ್ ಕೊಡೋಕೆ ಟಕ್ಕರ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಪುಟ್ಟಗೌರಿ ಸೀರಿಯಲ್ ಖ್ಯಾತಿಯ ರಂಜನಿ ರಾಘವನ್. ಹೊಸ ಸಿನಿ ಕಲಾವಿದರ ಜೊತೆ ತಮ್ಮ ಸೊದರಳಿಯನನ್ನು ಕೂಡ ಹುರುದುಂಬಿಸ್ತಾ ಇದ್ದಾರೆ ದಚ್ಚು.
Comments