ಶ್ರೀಲಂಕಾ ಬಾಂಬ್ ಸ್ಫೋಟದಿಂದ ಕೂದಲೆಳೆ ಅಂತರದಲ್ಲಿ ಪಾರಾದ ಸ್ಟಾರ್ ನಟಿ...?!!!

ಶ್ರೀಲಂಕಾದಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ಅನೇಕರು ಅಮಾಯಕರು ಸಾವನ್ನಪ್ಪಿದ್ದಾರೆ. ಶ್ರೀ ಲಂಕಾದ ಬೀದಿಗಳು ಅಕ್ಷರಶಃ ರಕ್ತ ಕೋಡಿಯಾಗಿದೆ. ಅವಶೇಷಗಳಡಿ ಸಿಕ್ಕಿ ಪ್ರಾಣಬಿಟ್ಟ ಅದೆಷ್ಟೋ ಮಂದಿ, ಇನ್ನು ಸಿಲುಕಿ ನರಳಾಡುತ್ತಿರುವ ಜನರ ಕೂಗು ಕೇಳುತ್ತಿದೆ. ಶ್ರೀ ಲಂಕಾದಲ್ಲಿ ಇಂದು ಸರಣಿ ಬಾಂಬ್ ಸ್ಪೋಟಗೊಂಡಿದೆ. ಈ ವೇಳೆ ಕರ್ನಾಟಕದ ಮಂಗಳೂರಿನ ಬೈಕಂಪಾಡಿ ಮೂಲದ ಮಹಿಳೆಯೊಬ್ಬಳು ಬಾಂಬ್ ಸ್ಪೋಟದಲ್ಲಿ ಮೃತ ಪಟ್ಟಿದ್ದಾರೆ. ಹೋಟೆಲ್ 'ವೊಂದರಲ್ಲಿ ನಡೆದ ಬಾಂಬ್ ದಾಳಿಯಲ್ಲಿ ಸ್ಟಾರ್ ಹೀರೋಯಿನ್ ಪಾರಾಗಿದ್ದಾರೆ.
ಶ್ರೀಲಂಕಾದಲ್ಲಿ ಹೋಟೆಲ್ ವೊಂದರಲ್ಲಿ ಬಾಂಬ್ ಸ್ಫೋಟಿಸಿದ ಹಿನ್ನಲೆಯಲ್ಲಿ ಮಂಗಳೂರಿನ ಮೂಲದವರು ಕೂಡ ಮೃತಪಟ್ಟಿದ್ದಾರೆ. ಕೊಲಂಬೊದ ಸಿನ್ಮಾಮನ್ ಗ್ರ್ಯಾಂಡ್ ಹೋಟೆಲ್ನಲ್ಲಿ ನಡೆದ ಭೀಕರ ಬಾಂಬ್ ದಾಳಿಗೆ ಅನೇಕರು ಬಲಿಯಾಗಿದ್ದಾರೆ. ಅಂದಹಾಗೇ ಇದೇ ಹೋಟೆಲ್ ನಲ್ಲಿ ತಂಗಿದ್ದ ಖ್ಯಾತ ನಟಿ ಬಾಂಬ್ ಸ್ಫೋಟದಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಕನ್ನಡ ಮತ್ತು ಇತರೆ ಭಾಷೆಗಳಲ್ಲಿ ನಟಿಸಿದ ಬಹುಭಾಷಾ ಕಲಾವಿದೆ ನಟಿ ರಾಧಿಕಾ ಶರತ್ ಕುಮಾರ್ಕೆಲಸದ ವಿಚಾರವಾಗಿ ಕೊಲಂಬೊದ ಸಿನ್ಮಾಮನ್ ಗ್ರ್ಯಾಂಡ್ ಹೋಟೆಲ್ನಲ್ಲಿ ರಾಧಿಕಾ ಶರತ್ ಕುಮಾರ್ ರವರು ರೂಮ್ ಬುಕ್ ಮಾಡಿಕೊಂಡು ತಂಗಿದ್ದರು. ಬಾಂಬ್ ಸ್ಪೋಟವಾಗುವುದಕ್ಕಿಂತ ಕೆಲವೇ ನಿಮಿಷಗಳ ಹಿಂದಷ್ಟೇ ಹೋಟೆಲ್ನಿಂದ ಹೊರಗೆ ಹೊರಟಿದ್ದರು. ಇದರಿಂದ ತಾವು ಸೇಫ್ ಆಗಿದ್ದಾರೆ ಎಂದು ತಮ್ಮ ಟ್ವಿಟರ್ ಖಾತೆಯಲ್ಲಿ ಜಸ್ಟ್ ಮಿಸ್ ಫಾರ್ ಬಾಂಬ್ ಬ್ಲಾಸ್ಟ್ ಎಂದು ಬರೆದುಕೊಂಡಿದ್ದಾರೆ.
Comments