ಕಾಮಸೂತ್ರದ ಹೀರೋಯಿನ್ ನಿಧನ...!!!
ಬಾಲಿವುಡ್’ನ ಕಾಮಸೂತ್ರ 3D ಸಿನಿಮಾದಲ್ಲಿ ಅಭಿನಯಿಸಿದ್ದ ನಟಿ ಸೈರಾ ಖಾನ್ ವಿಧಿವಶರಾಗಿದ್ದಾರೆ. ನಟಿ ಸೈರಾ ಖಾನ್ ಅವರು ಕಾಮಸೂತ್ರ ಸಿನಿಮಾದ ಮೂಲಕ ರಸಿಕರ ಮನ ಗೆದ್ದಿದ್ದ ಇವರು ಸದ್ಯ ಇಹಲೋಕ ತ್ಯಜಿಸಿದ್ದಾರೆ. ಕೆಲವು ದಿನಗಳಿಂದ ಹೃದಯ ಕಾಯಿಲೆಯಿಂದ ಬಳಲುತ್ತಿದ್ದ ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಸೈರಾ ನಿಧನದ ಸುದ್ದಿ ಕುಟುಂದವರಿಗೆ ಮತ್ತು ಸ್ನೇಹಿತರಿಗೆ ಆಘಾತ ಉಂಟು ಮಾಡಿದ್ದು, ಈ ವಿಚಾರವನ್ನು ನಿರ್ದೇಶಕ ರೂಪೇಶ್ ಪೌಲ್ ತಿಳಿಸಿದ್ದಾರೆ. ‘ಕಾಮಸೂತ್ರ 3D’ ಸಿನಿಮಾ 2013ರಲ್ಲಿ ಬಾಲಿವುಡ್‍ನಲ್ಲಿ ಬಿಡುಗಡೆಯಾಗಿತ್ತು.ಈ ಸಿನಿಮಾಗೆ ಮೊದಲು ಸೈರಾಗಿಮತ ಸರ್ಲಿನ್ ಚೋಪ್ರಾ ಅವರು ಆಯ್ಕೆಯಾಗಿದ್ದರು.ಆದರೆ ಕಾರಣಾಂತರದಿಂದ ಅವರು ಈ ಸಿನಿಮಾದಲ್ಲಿ ನಟಿಸಲು ಸಾಧ್ಯವಾಗಿಲ್ಲ. ಹೀಗಾಗಿ ಆ ಅವಕಾಶವನ್ನು ಸೈರಾ ಖಾನ್ ಪಡೆದಿದ್ದರು ಎಂದು ತಿಳಿದು ಬಂದಿದೆ.ಸೈರಾ ಖಾನ್ ಮುಸ್ಲಿಂ ಕುಟುಂಬದದಿಂದ ಬಂದವರಾಗಿದ್ದಾರೆ. ಹೀಗಾಗಿ ಈ ಸಿನಿಮಾದಲ್ಲಿ ಅಭಿನಯಿಸಲು ಒಪ್ಪಿಸಲು ಚಿತ್ರತಂಡ ಬಹಳ ಕಷ್ಟಪಟ್ಟಿತ್ತು. ಕೊನೆಗೂ ಈ ಸಿನಿಮಾದಲ್ಲಿ ನಟಿಸಲು ಸೈರಾ ಒಪ್ಪಿಕೊಂಡಿದ್ದು, ಪಾತ್ರಕ್ಕೆ ತಕ್ಕ ಹಾಗೆ ನಟಿಸಿದ್ದರು ಎಂದು ರೂಪೇಶ್ ಪೌಲ್ ಹೇಳಿದ್ದಾರೆ. ಈ ಸಿನಿಮಾದ ಮೂಲಕವೇ ಸೈರಾ ಖಾನ್ ಅವರು ಬಾಲಿವುಡ್ ಚಿತ್ರರಂಗಕ್ಕೆ ಪ್ರವೇಶ ಪಡೆದಿದ್ದರು.
Comments