'ಉರಿ' ಖ್ಯಾತಿಯ ವಿಕ್ಕಿ ಆಸ್ಪತ್ರೆಗೆ ದಾಖಲು..!!!

ದೇಶವೇ ಮೆಚ್ಚಿ ಕೊಂಡಾಡಿದ್ದ ಸಿನಿಮಾ ಉರಿ ತುಂಬಾ ಹೆಸರು ಮಾಡಿತ್ತು. ದೇಶದ ರಾಜಕೀಯ ಪರಿಸ್ಥಿಯ ಬಗ್ಗೆ ಎಣೆದಿದ್ದ ಕಥೆ ಎಲ್ಲರ ಮೆಚ್ಚುಗೆ ಗಳಿಸಿತ್ತು. ಉರಿ ಸಿನಿಮಾ ಖ್ಯಾತಿಯ ನಟ ವಿಕ್ಕಿ ಕೌಶಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಿನಿಮಾ ಶೂಟಿಂಗ್ ವೇಳೆ ವಿಕ್ಕಿ ಮೇಲೆ ಬಾಗಿಲು ಬಿದ್ದಿದ್ದರಿಂದ ಗದ್ದದ ಭಾಗದಲ್ಲಿ 13 ಹೊಲಿಗೆ ಹಾಕಲಾಗಿದೆ ಎಂದು ವರದಿಯಾಗಿದೆ.
ಹಾರರ್ ಸಿನಿಮಾದಲ್ಲಿ ನಟಿಸುತ್ತಿರುವ ವಿಕ್ಕಿ ಕೌಶಲ್ ಅವರು ಆ್ಯಕ್ಷನ್ ದೃಶ್ಯಗಳನ್ನು ಚತ್ರೀಕರಿಸಿರುವ ವೇಳೆ ಈ ಘಟನೆ ನಡೆದಿದೆ. ಕಳೆದ ಐದು ದಿನಗಳಿಂದ ಗುಜರಾತಿನಲ್ಲಿ ಈ ಸಿನಿಮಾದ ಚಿತ್ರೀಕರಣ ನಡೆಯುತ್ತಿತ್ತುಇಂದು ಬೆಳಗ್ಗೆ ಈ ಘಟನೆ ನಡೆದಿದ್ದು, ಕೂಡಲೇ ವಿಕ್ಕಿ ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.ಅಲಿಯಾ ಭಟ್ ಸೇರಿದಂತೇ ಅನೇಕ ಸ್ಟಾರ್ ಹೀರೋಯಿನ್’ಗಳ ಜೊತೆ ವಿಕ್ಕಿ ತೆರೆ ಹಂಚಿಕೊಳ್ಳಲಿದ್ದಾರೆ. ಅನೇಕ ಸಿನಿಮಾಗಳಿಗೆ ಸಹಿ ಕೂಡ ಈಗಾಗಲೇ ಮಾಡಿದ್ದಾರೆ. ಸದ್ಯ ಗಾಯಯಿಂದ ನರಳುತ್ತಿರುವ ವಿಕ್ಕಿ ವೈದ್ಯರ ಸಲಹೆಯಂತೇ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.
Comments