ಸರಿಯಾಗಿ ಮಸಾಜ್ ಮಾಡಿಲ್ಲವೆಂದು ಮಸಾಜ್ ಮಾಡುವವನನ್ನೇ ಇರಿದ ಮಾಡಲ್..!!!
ತನ್ನ ಮೈ-ಕೈ ಮಸಾಜ್ ಮಾಡಿಸಿಕೊಳ್ಳಲು ಬಂದ ರೂಪದರ್ಶಯೊಬ್ಬಳು ಸರಿಯಾಗಿ ಮಸಾಜ್ ಮಾಡಿಲ್ಲವೆಂದು ಮಸಾಜ್ ಮಾಡುವವನಿಗೆ ಇರಿದ ಘಟನೆಯೊಂದು ವರದಿಯಾಗಿದೆ. ಮಿಸ್ ನ್ಯಾಷನಲ್ ಆಸ್ಟ್ರೇಲಿಯಾ-2018ರ ಫೈನಲಿಸ್ಟ್ ಮರಿಯಾ ಡೆಲೊಸ್ಯಾಂಜೆಲೆಸ್ ಹೊರಿಗೋಮ್ ಈ ಕೃತ್ಯ ಎಸಗಿದ್ದಾಳೆ. ಮರಿಯಾಗೆ ಹಲವು ದಿನಗಳಿಂದ ಭುಜದ ನೋವಿತ್ತಂತೆ. ಅದನ್ನು ನಿವಾರಿಸಿಕೊಳ್ಳಲು ಕೆಲ ದಿನಗಳಿಂದಲೂ ಮಸಾಜ್ ಪಾರ್ಲರ್ ಗೆ ಬರುತ್ತಿದ್ದಳಂತೆ.
ಆದರೆ ಎಷ್ಟು ಮಸಾಜ್ ಮಾಡಿದ್ರು ಅವಳ ಭುಜದ ನೋವು ಕಡಿಮೆಯಾಗಿಲ್ಲ. ಇದರಿಂದಾಗಿ ಸಿಟ್ಟಾಗಿ ಮಸಾಜ್ ಮಾಡುವವನಿಗೆ ಫೀಸ್ ಕೊಟ್ಟಿಲ್ಲ. ಈ ಸಂದರ್ಭ ಇಬ್ಬರ ಮಧ್ಯೆ ಘರ್ಷಣೆ ಉಂಟಾಗಿ ಆಕೆ ತನ್ನ ಬ್ಯಾಗ್ ನಲ್ಲಿದ್ದ ಚೂಪಾದ ವಸ್ತುವಿನಿಂದ ಮಸಾಜ್ ಮಾಡುವವನಿಗೆ ಇರಿದಿದ್ದಾಳೆ. ಆತನ ಗಾಯಗಳಿಗೆ ಹೊಲಿಗೆ ಹಾಕಿ ಚಿಕಿತ್ಸೆ ನೀಡಲಾಗಿದೆ. ಮತ್ತೊಂದೆಡೆ ನನ್ನ ಮೂಗು ಮುಖಕ್ಕೂ ಗಾಯಗಳಾಗಿದ್ದು, ಅಂದಗೆಟ್ಟಿದೆ. ಇದರಿಂದ ನನಗೆ ಮಾಡೆಲಿಂಗ್ ಮೂಲಕ ಬರುತ್ತಿದ್ದ ಸಂಪಾದನೆಗೂ ತೊಂದರೆ ಆಗಿದೆ ಎಂದು ಮಾಡೆಲ್ ದೂರಿದ್ದಾಳೆ.
Comments