ಪ್ರಭಾವಿ ರಾಜಕಾರಣಿ ಮಗ ಸ್ಯಾಂಡಲ್’ವುಡ್’ಗೆ ಎಂಟ್ರಿ…
ಸ್ಯಾಂಡಲ್ ವುಡ್ ಗೆ ಈ ವರ್ಷ ಹೊಸ ಮುಖಗಳು ಪರಿಚಯವಾಗುತ್ತಿವೆ. ಸ್ಟಾರ್ ನಟ-ನಟಿಯರ ಮಕ್ಕಳು ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಇದೇ ಸಾಲಿಗೆ ಇದೀಗ ರಾಜಕಾರಣಿ ಮಗವೊಬ್ಬ ಸೇರ್ಪಡೆಗೊಂಡಿದ್ದಾರೆ. ಪ್ರಭಾವಿ ರಾಜಕಾರಣಿ ಮಗ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುವುದರ ಮೂಲಕ ಕನ್ನಡ ಚಿತ್ರರಂಗಕ್ಕೆ ಮತ್ತೊಬ್ಬ ಸ್ಟಾರ್ ಸೇರಿಕೊಳ್ಳುತ್ತಿದ್ದಾರೆ. ಹೊಸ ಹುಡುಗರ ಜನರೇಷನ್ ಆರಂಭವಾಗಿದೆ. ಸಚಿವ ಜಮೀರ್ ಅಹ್ಮದ್ ಅವರ ಪುತ್ರ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.
ಶಶಿ ಕುಮಾರ್ ವರ ಮಗ, ರಕ್ಷಿತಾ ಅವರ ಸಹೋದರ. ದರ್ಶನ್ ಅವರ ಸಂಬಂಧಿ, ಸುದೀಪ್ ಅವರ ಕಸಿನ್, ರಾಮ್ ಕುಮಾರ ಅವರ ಮಗ-ಮಗಳು ಹೀಗೆ ಅನೇಕಾನೇಕ ಮಂದಿ ಅಗ್ನಿ ಪರೀಕ್ಷೆಗೆ ಕನ್ನಡ ಇಂಡಸ್ಟ್ರಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅದೇ ಸಾಲಿಗೆ ಜಮೀರ್ ಅಹ್ಮದ್ ಅವರ ಪುತ್ರ ಕೂಡ ಸೇರಿಕೊಂಡಿದ್ದಾರೆ. ಜಮೀರ್ ಪುತ್ರ ಜಾಯೀದ್ ಅಹ್ಮದ್ ಈಗಾಗಲೇ ಮುಂಬೈ ನಲ್ಲಿ ನಟನೆ ತರಬೇತಿಯನ್ನು ಪಡೆದುಕೊಂಡಿದ್ದಾರೆ. ಬೆಲ್ ಬಾಟಂ ಚಿತ್ರದ ನಿರ್ದೇಶಕ ಜಯತೀರ್ಥ ನಟ ರಿಶಬ್ ಶೆಟ್ಟಿಯನ್ನು ಹೀರೋ ಆಗಿ ಮಾಡಿದ್ದಾರೆ. ಇದೇಗ ಅದೇ ನಿರ್ದೇಶಕ ಜಾಯಿದ್ ಅವರಿಗೂ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಜಯತೀರ್ಥ ಅವರ ಸಾರಥ್ಯದಲ್ಲಿ ಜಮೀರ್ ಪುತ್ರ ಮೊದಲ ಬಾರಿಗೆ ಸಿನಿಮಾದಲ್ಲಿ ಹೀರೋ ಆಗಿ ನಟಿಸುತ್ತಿದ್ದಾರೆ. ಈ ಬಗ್ಗೆ ಸಿನಿಮಾ ಹೆಸರು, ನಿರ್ಮಾಪಕ ಬಗ್ಗೆ ಮಾಹಿತಿ ಸದ್ಯಕ್ಕಂತೂ ರಿವೀಲ್ ಮಾಡಿಲ್ಲ.
Comments