ಓಟ್ ಮಾಡಿದ ರಜನೀಕಾಂತ್ ಎಡಗೈ ಬದಲು ಬಲಗೈ ಬೆರಳಿಗೆ ಇಂಕ್...!

ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಎಲ್ಲೆಡೆ ಭರದಿಂದ ಸಾಗುತ್ತಿದೆ. ಚುನಾವಣೆಯಲ್ಲಿ ಮತದಾನ ಮಾಡುವವರಿಗೆ ಎಡಗೈ ತೋರು ಬೆರಳಿನ ತುದಿಗೆ ಇಂಕ್ ಹಚ್ಚಿದ್ದಾರೆ. ಆದರೆ ಸೂಪರ್ ಸ್ಟಾರ್ ರಜನೀಕಾಂತ್ ಅವರ ಬಲಗೈ ಬೆರಳಿಗೆ ಶಾಹಿ ಹಚ್ಚಿದ್ದು ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.
ಆದರೆ, ತಮಿಳುನಾಡಿನಲ್ಲಿ ಲೋಕಸಭೆ ಚುನಾವಣೆಯಲ್ಲಿ ಮತ ಚಲಾಯಿಸಿದ ಸೂಪರ್‌ಸ್ಟಾರ್ ನಟ ರಜನೀಕಾಂತ್ ಅವರ ಎಡಗೈ ಬೆರಳಿಗೆ ಇಂಕ್ ಹಚ್ಚುವ ಬದಲಿಗೆ ಅಧಿಕಾರಿಯೊಬ್ಬರು ಬಲಗೈ ಬೆರಳಿಗೆ ಹಚ್ಚಿದ್ದಾರೆ.ಹಾಗೇ ಬೆರಳಿಗೆ ಹಚ್ಚಿದ್ದು ಅಪರಾಧವಾಗುತ್ತದೆ.ನಿರ್ಧಿಷ್ಟ ಕಾರಣವಿಲ್ಲದೇ ಬಲಗೈ ಬೆರಳ ತುದಿಗೆ ಇಂಕ್ ಹಚ್ಚಬಾರದು. ಆದರೆ…. ತಮಿಳುನಾಡು ಮುಖ್ಯ ಚುನಾವಣಾಧಿಕಾರಿ ಸತ್ಯಬ್ರತಾ ಸಾಹೂ ಅವರು, 'ಮತದಾರರ ಎಡಗೈ ಬೆರಳಿಗೆ ಶಾಯಿ ಹಚ್ಚುವುದು ಮೊದಲ ಆದ್ಯತೆಯಾಗಬೇಕು. ನಿರ್ದಿಷ್ಟ ಕಾರಣವಿದ್ದರೆ, ಬಲಗೈನ ಬೆರಳಿಗೆ ಶಾಯಿ ಹಚ್ಚಬಹುದು,' ಎಂದರು. ಅಲ್ಲದೆ, ಇದು ಅಧಿಕಾರಿಯಿಂದ ಆಗಿರುವ ತಪ್ಪು ಎಂಬಂತೆ ತೋರ್ಪಡುತ್ತಿದೆ ಎಂದು ಅವರು ಹೇಳಿದರು.
Comments