ಸೋಷಿಯಲ್ ಮಿಡಿಯಾದಲ್ಲಿ ಟ್ರೆಂಡ್ ಕ್ರಿಯೆಟ್ ಮಾಡಿದ ಉಪ್ಪಿ ಮತದಾನದ ಪೋಟೋ..!!
ಉಪೇಂದ್ರ ಎಂದರೆ ಸಾಕು ಎಲ್ಲರೂ ಯೋಚನೆ ಮಾಡುವುದು ವಿಭಿನ್ನ ಮತ್ತು ವಿಶಿಷ್ಟ ಎಂದು,,, ಪ್ರತಿಯೊಂದು ವಿಷಯದಲ್ಲು ಕೂಡ ಉಪ್ಪಿ ತುಂಬಾ ವಿಭಿನ್ನವಾಗಿ ಯೋಚನೆ ಮಾಡುತ್ತಾರೆ.. ಸಿನಿಮಾದ ವಿಷಯದಲ್ಲೂ ಕೂಡ ತುಂಬಾ ವಿಭಿನ್ನವಾಗಿ ಯೋಚನೆ ಮಾಡುತ್ತಾರೆ. ಮೊನ್ನೆಯಷ್ಟೆ ಮತ ಹಾಕಿರುವ ಉಪ್ಪಿ ಸಖತ್ತಾಗಿಯೇ ಪೋಟೋ ತೆಗೆದುಕೊಂಡಿದ್ದಾರೆ. ಇದೀಗ ಆ ಪೋಟೋ ಸಿಕ್ಕಾಪಟ್ಟೆ ವೈರಲ್ ಆಗಿ ಟ್ರೆಂಡ್ ಕ್ರಿಯೆಟ್ ಮಾಡಿದೆ.
ಉಪೇಂದ್ರ ಅವರು ಕಣ್ಣಿನ ಸುತ್ತ ಕೈ ಇಟ್ಟು ಸೂಪರ್ ಎಂದು ಕೈ ನಲ್ಲಿ ತೋರಿಸಿದ್ದರು. ಅವರು ಫೋಟೋ ಅಪ್ಲೋಡ್ ಮಾಡಿದ ತಕ್ಷಣ ಅಭಿಮಾನಿಗಳು ಅದೇ ರೀತಿಯ ಸ್ಟೈಲಿನಲ್ಲಿ ತಾವು ಮತದಾನ ಮಾಡಿರುವ ಫೋಟೋವನ್ನು ತೆಗೆದುಕೊಂಡು ಉಪೇಂದ್ರ ಅವರಿಗೆ ರೀಟ್ವೀಟ್ ಮಾಡಿದ್ದಾರೆ. ಈ ಮೂಲಕ ಉಪೇಂದ್ರ ಅವರ ಮತದಾನದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಟ್ರೆಂಡ್ ಕ್ರಿಯೆಟ್ ಮಾಡಿದೆ. ಯುಪಿಪಿ ಯ ಪಕ್ಷವನ್ನು ಉಪೆಂದ್ರ ಕೊಟ್ಟಿದ್ದು, ಇದೀಗ ಅವರ ಮೊದಲ ಚುನಾವಣೆ ಇದಾಗಿದೆ.. ಲೋಕ ಸಮರ ಎದುರಿಸಿರುವ ಪ್ರಜಾಕೀಯದ ಭವಿಷ್ಯ ಹೇಗಿದೆ ಎಂಬುದನ್ನು ಕಾದು ನೋಡಬೇಕಿದೆ.
Comments