ಶಾಕಿಂಗ್ : ಜನಪ್ರಿಯ 'ರಾಧಾ ರಮಣ' ಧಾರವಾಹಿಯಿಂದ ರಾಧಾಮಿಸ್ ಇನ್ನಿಲ್ಲ…!!!

ಕನ್ನಡ ಕಿರುತೆರೆ ಜನಪ್ರಿಯ ಧಾರವಾಹಿ ರಾಧಾ ರಮಣ ಧಾರವಾಹಿ ಎಲ್ಲರ ಮೆಎಚ್ಚುಗೆ ಗಳಿಸಿತ್ತು. ಸೀರಿಯಲ್ ನಲ್ಲಿ ರಾಧಾ ಪಾತ್ರ ಮಾಡುತ್ತಿದ್ದ ರಾಧಾ ಮಿಸ್ ಅಲಿಯಾಸ್ ಶ್ವೇತಾ ಆರ್. ಪ್ರಸಾದ್ ಧಾರವಾಹಿಯಿಂದ ಹೊರ ಬಂದಿದ್ದಾರೆ. ಇನ್ನು ಮುಂದೆ ಧಾರವಾಹಿಯಲ್ಲಿ ರಾಧಾ ಮಿಸ್ ಇರೋದಿಲ್ಲ.ಈ ಸುದ್ದಿ ಕೇಳುತ್ತಿದ್ದಂತೇ ರಾಧಾ ಅವರ ಅಭಿಮಾನಿಗಳು ಶಾಕ್ ಆಗಿದ್ದಾರೆ. ಅಂದಹಾಗೇ ಅವರು ಧಾರವಾಹಿಯಿಂದ ಹೊರ ನಡೆದಿರುವುದು ಸದ್ಯಕ್ಕೆ ಖಚಿತವಾಗಿದೆ.ಇನ್ನು ರಾಧಾ ಅವರ ಜಾಗಕ್ಕೆ ಹೊಸ ನಾಯಕಿ ಆಗಮನ ಆಗಲಿದ್ದಾರೆ.
ಇದು ರಾಧಾ ಮಿಸ್ ಅಭಿಮಾನಿಗಳಿಗೆ ಶಾಕಿಂಗ್ ಸಂಗತಿ. ಆದರೆ ರಾಧಾ ಈ ಧಾರವಾಹಿಯಿಂದ ಹೊರಬಂದಿರುವುದು ಪಕ್ಕಾ ಆಗಿದೆ. ಇನ್ನೀಗ ರಾಧಾ ರಮಣ ಧಾರವಾಹಿಗೆ ಹೊಸ ನಾಯಕಿ ಆಗಮನವಾಗಲಿದ್ದಾರೆ. ಅವರನ್ನು ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೆ ಎಂದು ಕಾದು ನೋಡಬೇಕಿದೆ. ಅಷ್ಟಕ್ಕೂ ಧಾರವಾಹಿಯಲ್ಲಿ ಶ್ವೇತಾ ಹೊರ ಬರೋಕೆ ಕಾರಣ ಏನ್ ಗೊತ್ತಾ..? ಈ ಹಿಂದೆ ಜೀ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಶ್ರೀರಸ್ತು ಶುಭಮಸ್ತು ಧಾರವಾಹಿಯಲ್ಲಿ ನಟಿಸುತ್ತಿದ್ದರು.
ಆ ನಂತರ ಕಲರ್ಸ್ ಕನ್ನಡ ವಾಹಿನಿಯ ಮುಖ್ಯಸ್ಥ ಪರಮೇಶ್ವರ್ ಗುಂಡ್ಕಲ್ ಅವರ ಒತ್ತಾಯಕ್ಕೆ ಮಣಿದು ರಾಧ ರಮಣ ಧಾರವಾಹಿಯಲ್ಲಿ ನಟಿಸೋಕೆ ಒಪ್ಪಿದ್ದರಂತೆ. ಅದು ಒಪ್ಪಂದದ ಮೇರೆಗೆ. ಕೇವಲ ಒಂದು ವರ್ಷದ ಮಟ್ಟಿಗೆ ಧಾರವಾಹಿಯಲ್ಲಿ ನಟಿಸೋಕೆ ನಾನ್ ಸಿದ್ಧರಾಗಿದ್ದೇನೆ ಎಂದು ಒಪ್ಪಂದ ಮಾಡಿಕೊಂಡಿದ್ದರಂತೆ. ಆದರೆ ಜನರ ಪ್ರತಿಕ್ರಿಯೆ ನೋಡಿ ಇಷ್ಟು ಸಮಯದವರೆಗೆ ಒಪ್ಪಂದ ಮುಂದುವರಿಸಿದ್ದರು. ಆದರೆ ಇದೀಗ ತಮಗೆ ಧಾರವಾಹಿಗಳಿಂದ ಬ್ರೇಕ್ ತೆಗೆದುಕೊಳ್ಳಬೇಕು ಎನಿಸಿದೆ. ಅದಕ್ಕೆ ಧಾರವಾಹಿಯಿಂದ ಹೊರಬಂದೆ ಎಂದು ರಾಧಾ ಮಿಸ್ ಅಲಿಯಾಸ್ ಶ್ವೇತಾ ಹೇಳಿದ್ದಾರೆ.
Comments