ಸುಮಲತಾ ಪರ ಕ್ಯಾಂಪೇನ್ ಮಾಡಿದ್ದರಂತೆ ಚಾಲೆಂಜಿಂಗ್ ಸ್ಟಾರ್ ಪತ್ನಿ : ಎಲ್ಲಿ ಗೊತ್ತಾ...?!!
ಒಂದಷ್ಟು ದಿನ ಮಂಡ್ಯದಲ್ಲಿ ಸ್ಟಾರ್ ಕ್ಯಾಂಪೇನಿಂಗ್ ಅಬ್ಬರ ಇಡೀ ಕರ್ನಾಟಕದಲ್ಲೇ ಮೊಳಗಿತು. ದರ್ಶನ್ ಮತ್ತು ಯಶ್ ಜೋಡೆತ್ತುಗಳ ಹಾಗೇ ಸುಮಲತಾ ಪರ ಪ್ರಚಾರ ಮಾಡಿದ್ರು. ಅಯ್ಯೋ ಎಲ್ಲಿ ಅಂತೀರಾ..?ಹೌದು ಸುಮಲತಾ ಪರ ಕ್ಯಾಂಪೇನ್ ಮಾಡ್ತಿದ್ದ ದರ್ಶನ್ ಪತ್ನಿ ವಿಜಯಲಕ್ಷ್ಮಿ ಸಾಥ್ ಕೊಟ್ಟಿದ್ದಾರೆ. ಅವರು ಕೋಡ ಸುಮಲತಾಗೆ ನೀವು ಓಟ್ ಹಾಕಲೇ ಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ನಿನ್ನೆ ಲೋಕ ಸಭಾ ಚುನಾವಣೆ ಮುಗಿದಿದೆ. ಮತದಾನ ಕೂಡ ಮಂಡ್ಯದಲ್ಲಿ ಉತ್ತಮಮವಾಗಿಯೇ ನಡೆದಿದೆ. ಕೆಲವು ಸಮೀಕ್ಷೆಗಳ ಪ್ರಕಾರ ಸುಮಲತಾರೇ ಈ ಬಾರಿ ವಿನ್ ಆಗಲಿದ್ದಾರೆ ಎಂಬ ವರದಿ ನೀಡಿವೆ.
ಆದರೆ ಅಷ್ಟೇ ದೊಡ್ಡ ಪ್ರಮಾಣದಲ್ಲಿ ನಿಖಿಲ್ ಕೂಡ ಪೈಪೋಟಿ ನಿಡಲಿದ್ದಾರೆ. ಅಂದಹಾಗೇ ಚುನಾವಣಾ ದಿನದಂದೇ ದರ್ಶನ್ ಪತ್ನಿ ವಿಜಯಲಕ್ಷ್ಮಿ ಕ್ಯಾಂಪೇನ್ ಮಾಡಿದ್ದಾರೆ. ಟ್ವೀಟ್ ಮೂಲಕ ಮಂಡ್ಯದ ಅಭ್ಯರ್ಥಿ ಸುಮಲತಾ ಪರ ಮತಯಾಚನೆ ಮಾಡಿದ್ದಾರೆ. ಸುಮಲತಾಗೆ ಹಾರೈಸಿ ಟ್ವೀಟ್ ಮಾಡಿದ್ದಾರೆ. ವಿಜಯಲಕ್ಷ್ಮಿ ಅವರು “ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸುಮಲತಾ ಅಂಬರೀಶ್ ಅವರಿಗೆ ನಿಮ್ಮ ಮತನವನ್ನು ನೀಡಿ ಜಯಶೀಲರನ್ನಾಗಿ ಮಾಡಿ” ಎಂದು ಬರೆದು ಗುರುವಾರ ಬೆಳಗ್ಗೆ 10.55ಕ್ಕೆ ಟ್ವೀಟ್ ಮಾಡಿದ್ದರು.ಅಷ್ಟೇ ಅಷ್ಟೇ ಅಲ್ಲದೇ ಸುಮಲತಾ ಗೆದ್ದರೆ ಎಂದು ಕೆಲವು ಅಂಶಗಳನ್ನು ಫೋಟೋ ಹಾಕುವ ಮೂಲಕ ಸೂಚಿಸಿದ್ದಾರೆ. “ದೇಶದ ಇತಿಹಾಸದಲ್ಲಿ ಲೋಕಸಭಾ ಚುನಾವಣೆಯಲ್ಲಿ ಮಹಿಳೆಯನ್ನ ಪಕ್ಷೇತರವಾಗಿ ಗೆಲ್ಲಿಸಿದ ಕೀರ್ತಿ ಮಂಡ್ಯಕ್ಕೆ ಬರುತ್ತದೆ. ಎರಡನೇಯದ ರಾಜ್ಯದಲ್ಲಿ ಆಡಳಿತರೂಡ ಮುಖ್ಯಮಂತ್ರಿ, ಜಿಲ್ಲೆಯ ಎಂಟು ಶಾಸಕರನ್ನು ಹೊಂದಿದ್ದರೂ ಸ್ವತ ಸಿಎಂ ಪುತ್ರ ಅಭ್ಯರ್ಥಿಯಾಗಿದ್ದರೂ ಹಣದ ಆಸೆಗೆ ಮಂಡ್ಯದ ಜನ ಮರುಳಾಗಲಿಲ್ಲವೆಂಬ ಕೀರ್ತಿ ಬರುತ್ತದೆ. ಕೊನೆಯದಾಗಿ ಕರ್ನಾಟಕದ ಇತಿಹಾಸದಲ್ಲಿ ಪ್ರಪ್ರಥಮ ಪಕ್ಷೇತರ ಮಹಿಳಾ ಸಂಸದೆಯನ್ನು ಗೆಲ್ಲಿಸಿದ ಕೀರ್ತಿ ನಮ್ಮ ಮಂಡ್ಯಕ್ಕೆ ಬರುತ್ತೆ” ಎಂದು ವಿಜಯಲಕ್ಷ್ಮಿ ತಿಳಿಸಿದ್ದಾರೆ. ಒಟ್ಟಾರೆ ಗಂಡನ ಪರಿಶ್ರಮಕ್ಕೆ ಪತ್ನಿಯರು ಸಾಥ್ ನೀಡಿದ್ದಾರೆ. ಪರೋಕ್ಷವಾಗಿ, ಪ್ರತ್ಯಕ್ಷವಾಗಿ ಚುನಾವಣೆಗೆ ನಿಂತ ಸುಮಲತಾ ಬೆನ್ನಿಗೆ ನಿಂತಿದ್ದಾರೆ.
Comments