ಯೂಟ್ಯೂಬ್ ನಲ್ಲಿ ಲೀಕ್ ಆಯ್ತು ನಟಿಯ ಅಶ್ಲೀಲ ವಿಡಿಯೋ ....

ಅಂದಹಾಗೇ ಸಾಮಾಜಿಕ ಜಾಲತಾಣಗಳು ಮುಂದುವರಿದಂತೇ ಆಪತ್ತುಗಳೇ ಜಾಸ್ತಿ. ಅದರಲ್ಲೂ ಫೇಸ್ ಬುಕ್, ಟ್ವಿಟ್ಟರ್, ಇನ್ಸ್’ಸ್ಟ್ರಾಗ್ರಾಂ ಗಳಲ್ಲಿ ನಟಿಯರು ಬಹಳ ಹುಷಾರಾಗಿ ಇರಬೇಕು. ತಮ್ಮ ಕೆಲ ಖಾಸಗಿ ಫೋಟೋಗಳು ಲೀಕ್ ಆಗಿ ಪೇಚಿಗೆ ಸಿಕ್ಕ ಘಟನೆಗಳು ಅನೇಕ ನಡೆದಿವೆ. ಕೆಲ ಅಶ್ಲೀಲ ವಿಡಿಯೋ ಮೂಲಕ ನಟಿಯರನ್ನು ಬ್ಲಾಕ್ ಮೇಲೆ ಮಾಡುತ್ತಾರೆ. ಇದೀಗ ಇಂತಹದ್ದೇ ಇನ್ನೊಂದು ಘಟನೆ ನಡೆದಿದೆ. ಯಾರೋಕಿಡಿಗೇಡಿಗಳು ಮಾಡಿದ ಕೆಲಸಕ್ಕೆ ನಟಿಯಗೌರವವನ್ನು ಬೀದಿಗೆ ಎಳೆದಿದ್ದಾರೆ.
ತೆಲುಗು ನಟಿ ಕೌರ್ ಅವರ ಅಶ್ಲೀಲ ವಿಡಿಯೋಗಳನ್ನು ಕಿಡಿಗೇಡಿಗಳು 50 ಯೂಟ್ಯೂಬ್ ಚಾನೆಲ್‍ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಈ ಬಗ್ಗೆ ಪೂನಂ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ನನ್ನ ನಕಲಿ ವಿಡಿಯೋಗಳನ್ನು ಹಾಕುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ನಕಲಿ ಖಾತೆ ಸೃಷ್ಟಿಸಿ ಈ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿದ್ದಾರೆ ಎಂದು ಬುಧವಾರ ಪೂನಂ ಕೌರ್ ಸಿಟಿ ಪೊಲೀಸ್ ಕಮಿಷನರ್ ಬಳಿಕ ದೂರು ದಾಖಲಿಸಿದ್ದರು. ಪೂನಂ ಪೊಲೀಸರ ಬಳಿ, ನನ್ನ ನಕಲಿ ವಿಡಿಯೋ ಹಾಗೂ ಫೋಟೋಗಳನ್ನು ಹಾಕಿ ದುಡ್ಡು ಮಾಡುವ ಸಲುವಾಗಿ ಹೀಗೆಲ್ಲಾ ಮಾಡುತ್ತಿದ್ದಾರೆ. ಇದರಿಂದಾಗಿ ನಾನು ಸಾಕಷ್ಟು ಮುಜುಗರಕ್ಕೀಡಾಗಿದ್ದೇನೆ. ಈ ಬಗ್ಗೆ ತನಿಖೆ ಕೈಗೊಳ್ಳಿ ಎಂದು ಅವಲತ್ತುಕೊಂಡಿದ್ದಾರೆ.ಸೈಬರ್ ಪೊಲೀಸ್ ಕೈಗೋಂಡಿದ್ದಾರೆ.ಪೂನಂ ‘ಶೌರ್ಯಂ’, ‘ವಿನಾಯಾಕುಡು’ ಹಾಗೂ ‘ಗಣೇಶ್ ಜಸ್ಟ್ ಗಣೇಶ್’ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಲ್ಲದೆ ಕನ್ನಡದ ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಅವರ ‘ಬಂಧು-ಬಳಗ’ ಚಿತ್ರ ಸೇರಿದಂತೆ ತಮಿಳು, ಮಲೆಯಾಳಂ ಚಿತ್ರದಲ್ಲೂ ಅಭಿನಯಿಸಿದ್ದಾರೆ.
Comments