ಎಲೆಕ್ಷನ್ ಮುಗಿದ ಮೇಲೆ ಮಂಡ್ಯ ಅಖಾಡಕ್ಕೆ ಎಂಟ್ರಿ ಕೊಟ್ಟ ಯಶ್ ಪತ್ನಿ…!!!
ಮಂಡ್ಯ ಲೋಕಸಭಾ ಚುನಾವಣೆ ಮುಗಿದಿದ್ದು ಸದ್ಯಕ್ಕೆ ಫಲಿತಾಂಶವೊಂದೇ ಬಾಕಿಯಿದೆ. ಆದರೆ ಇದೀಗ ಮಂಡ್ಯ ಅಖಾಡಕ್ಕೆ ಸ್ಟಾರ್ ನಟರ ಪತ್ನಿಯರು ಎಂಟ್ರಿಯಾಗಿದ್ದಾರೆ. ಮಂಡ್ಯ ಕ್ಷೇತ್ರದಲ್ಲಿ ಚುನಾವಣೆಗೆ ನಿಂತಿರುವ ಪಕ್ಷೇತರ ಅಭ್ಯರ್ಥಿಯಾಗಿರುವ ಸುಮಲತಾ ಅವರ ಪರವಾಗಿ ದರ್ಶನ್ ಮತ್ತು ಯಶ್ ಪ್ರಚಾರ ಮಾಡಿದ್ದಾರೆ. ನಿನ್ನೆಯಷ್ಟೇ ಎಲೆಕ್ಷನ್ ಕೂಡ ಮುಗಿದಿದೆ. ಇನ್ನು ರಿಸಲ್ಟ್ ಮಾತ್ರ ಬಾಕಿಯಿರೋದು.
ಪತಿ ಯಶ್, ಸುಮಲತಾ ಪರ ಕ್ಯಾಂಪೇನ್ ಮಾಡಿದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ ರಾಧಿಕಾ ಪಂಡಿತ್. ನಾನು ಯಾರ ಪರವೂ ನಿಲ್ಲಲಾರೆ. ಇದು ಜನರ ತೀರ್ಮಾನವಾಗಿದ್ದು, ಅವರಿಗೆ ಬೇಕಾದವರನ್ನು ಆರಿಸಿ ಕಳಿಸಲಿ. ಮಂಡ್ಯದ ಜನರು ಬುದ್ಧಿವಂತರು. ಅವರು ಖಂಡಿತಾ ಒಳ್ಳೆಯ ವ್ಯಕ್ತಿಯನ್ನೇ ಆರಿಸಿ ಕಳುಹಿಸುತ್ತಾರೆ. ಮಂಡ್ಯದ ಬಗ್ಗೆ ಮಾತನಾಡಲ್ಲ ಎಂದು ಹೇಳಿದ್ದಾರೆ. ಇದೇ ವೇಳೆ ಯಶ್ ಯಾವಾಗಲೂ ಯೋಚನೆ ಮಾಡಿ ಕೆಲಸ ಮಾಡುತ್ತಾರೆ. ಅವರೆಂದೂ ತಪ್ಪು ಹೆಜ್ಜೆ ಹಾಕಿಲ್ಲ. ಯಶ್ ಸಂಬಂಧಗಳಿಗೆ ಬೆಲೆ ಕೊಡುತ್ತಾರೆ. ಅದಕ್ಕಾಗಿ ಅವರು ಈ ನಿರ್ಧಾರ ತೆಗೆದುಕೊಂಡಿದ್ದು, ಸಂಬಂಧಕ್ಕೆ ಬೆಲೆ ಕೊಡುವ ಯಶ್ ಜೊತೆ ಸದಾ ನಾನಿದ್ದೇನೆ ಎಂದು ಹೇಳಿದ್ದಾರೆ. ಅಂದಹಾಗೇ ಯಶ್ ಮತ್ತು ರಾಧಿಕಾ ಜೋಡಿ ಸ್ಯಾಂಡಲ್ ವುಡ್’ನಲ್ಲೊಂದು ಮಾದರಿ ಜೋಡಿಯೆನಿಸಿಕೊಂಡಿದೆ.
Comments