ನನ್ನ ಮಗ ಮದುವೆ ಮಂಟಪಕ್ಕೆ ಬರುವವರೆಗೂ ನನ್ನ ಗಂಡ ತಾಳಿ ಕಟ್ಟಲಿಲ್ಲ ಎಂದ ಸ್ಟಾರ್ ನಟನ ಪುತ್ರಿ..!

ತಮಿಳಿನ ಸೂಪರ್ ಸ್ಟಾರ್ ರಜನೀಕಾಂತ್ ಮಗಳ ಎರಡನೇ ಮದುವೆ ತುಂಬಾ ಅದ್ದೂರಿಯಿಂದ ಇತ್ತಿಚಿಗಷ್ಟೆ ಆಗಿದ್ದು ಎನ್ನುವುದು ಎಲ್ಲರಿಗೂ ಕೂಡ ಗೊತ್ತಿದೆ. . ಕೆಲ ತಿಂಗಳುಗಳ ಹಿಂದಷ್ಟೆ ಉದ್ಯಮಿ ವಿಶಾಖನ್ ವನಗಮುಡಿ ಜೊತೆ ಅದ್ಧೂರಿಯಾಗಿ ವಿವಾಹವಾಗಿದ್ದರು. ಅಂದಹಾಗೇ ಈ ಹಿಂದೆ ತಾನು ಮದುವೆಯಾಗುತ್ತಿರುವ ವಿಚಾರದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ್ಗ ಪೋಸ್ಟ್ ಮಾಡುತ್ತಿದ್ದ ಪುತ್ರಿ ಸೌಂದರ್ಯ ಎರಡನೇ ಮದುವೆಯ ಸಂಭ್ರಮವನ್ನು ಟ್ವೀಟ್ ಮಾಡುವುದರ ಮೂಲಕ ಹಂಚಿಕೊಂಡಿದ್ದರು..
ಇದೀಗ ಕಾರ್ಯಕ್ರಮವೊಂದರಲ್ಲಿ ಮತ್ತೊಂದು ವಿಷಯವನ್ನು ಬಹಿರಂಗ ಪಡಿಸಿದ್ದಾರೆ. ಸೌಂದರ್ಯ ಮತ್ತು ವಿಶಾಖನ್ ಗೆ ಇದು ಎರಡನೇ ವಿವಾಹವಾಗಿದೆ. ಸೌಂದರ್ಯಗೆ ಈಗಾಗಲೇ ಒಬ್ಬಮಗನಿದ್ದಾನೆ. ಈ ವಿವಾಹದ ಬಗ್ಗೆ ಸಂದರ್ಶನವೊಂದರಲ್ಲಿ ಸೌಂದರ್ಯ ಮಾತನಾಡಿದ್ದಾರೆ. ತನ್ನ ಪುತ್ರನನ್ನು ಪತಿ ವಿಶಾಖನ್ ಹೇಗೆ ನೋಡಿಕೊಳ್ಳುತ್ತಾನೆ ಎಂಬ ಬಗ್ಗೆ ಸೌಂದರ್ಯ ಬಹಿರಂಗಪಡಿಸಿದ್ದಾರೆ.
'ವೇದ್ ಬಗ್ಗೆ ವಿಶಾಖನ್ ಪ್ರೊಟೆಕ್ಟಿವ್. ನಮ್ಮ ಮದುವೆಯಲ್ಲಿ ವೇದ್ ಮಂಟಪಕ್ಕೆ ಬರುವವರೆಗೂ ತಾಳಿ ಕಟ್ಟುವುದಿಲ್ಲ ಎಂದು ವಿಶಾಖನ್ ಹಠ ಹಿಡಿದಿದ್ದರು. ಕೊನೆಗೆ ವೇದ್ ಸಮ್ಮುಖದಲ್ಲೇ ನಾವು ಮದುವೆಯಾದೆವು' ಎಂದು ಸೌಂದರ್ಯ ಹೇಳಿಕೊಂಡಿದ್ದಾರೆ. ವಿಶಾಖನ್ ಕೂಡ ಕನಿಕಾ ಎಂಬವರ ಜೊತೆ ಮದುವೆಯಾಗಿದ್ದರು. ಇಬ್ಬರ ಮಧ್ಯೆ ದಾಂಪತ್ಯ ಜೀವನ ಸರಿ ಹೋಗದ ಕಾರಣ ಅವರು ವಿಚ್ಛೇದನ ಪಡೆದುಕೊಂಡಿದ್ದರು.
Comments