ಓಟರ್ ಐಡಿ ತರದೇ ಮತ ಹಾಕಲು ಬಂದ ಕ್ರೇಜಿಸ್ಟಾರ್…
ಲೋಕಸಭಾ ಚುನಾವಣೆ ಎಲ್ಲೆಡೆ ಭರದಿಂದ ಸಾಗುತ್ತಿದೆ. ಸಿನಿಮಾ ರಂಗದ ಅನೇಕ ನಟ-ನಟಿಯರು ಕೂಡ ಮತದಾನ ಮಾಡಿ ಇತರರಿಗೂ ಮಾದರಿಯಾಗುತ್ತಿದ್ದಾರೆ. ಕ್ರೇಜಿಸ್ಟಾರ್ ರವಿಚಂದ್ರನ್ ಅವರು ತಮ್ಮ ಕುಟುಂಬದವರ ಜೊತೆ ಬಂದು ಮತದಾನ ಮಾಡಿ ಹೋಗಿದ್ದಾರೆ. ರಾಜಾಜಿನಗರದ ಠಾಗೊರ್ ಆಂಗ್ಲ ಮಾಧ್ಯಮ ಶಾಲೆಗೆ ಬಂದು ರವಿಚಂದ್ರನ್ ಓಟ್ ಮಾಡಿದ್ದಾರೆ. ಆದರೆ ಮತ ಹಾಕಲು ಬಂದ ಕ್ರೇಜಿಸ್ಟಾರ್ ವೊಟರ್ ಐಡಿ ತರಲು ಮರೆತಿದ್ದರು. ಆದರೆ...
ನಾನು ಆ ನಂತರ ತಂದು ಓಟರ್ ಐಡಿ ತಂದು ತೋರಿಸುತ್ತೇನೆ ಎಂದರು ಇಲ್ಲವಾದರೇ ಐಡಿ ಬರುವ ತನಕ ಕಾಯುವುದಾಗಿ ಹೇಳಿದ್ದಾರೆ. ಕೊನೆಗೆ ಸಿಬ್ಬಂದಿ ರವಿಚಂದ್ರನ್ ಅವರಿಗೆ ಮತದಾನಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ ರವಿಚಂದ್ರನ್ ಪುತ್ರಿ, ಪುತ್ರರು ಕೂಡ ಐಡಿ ಕಾರ್ಡ್ ಮರೆತು ಬಂದಿದ್ದರು. ನಂತರ ಮತಗಟ್ಟೆ ಕೇಂದ್ರದಿಂದ ವಾಪಸ್ ಮನೆಗೆ ಹೋಗಿ ಐಡಿ ಕಾರ್ಡ್ ತಂದು ಮತ್ತೆ ಮತದಾನ ಮಾಡಿದ್ದಾರೆ. ಇದೇ ವೇಳೆ ಅಪ್ಪ ಮತ್ತು ಅಮ್ಮ ಐಡಿ ಕಾರ್ಡ್ ತಂದು ತೋರಿಸಿದ್ದಾರೆ. ನಾವು ಬದುಕಿದ್ದೇವೆ ಎಂದು ಗೊತ್ತಾಗ ಬೇಕಾದರೇ ದಯಮಾಡಿ ಮತದಾನ ಮಾಡಿ. ನಮ್ಮ ನಾಯಕರನ್ನು ನಾವೇ ಆರಿಸೋಣ, ಪ್ರತೀ ಬಾರಿಯೂ ನಾನು ಓಟ್ ಮಾಡುವಾಗ ಜನರು ಕಡಿಮೇ ಇರುತ್ತಾರೆ. ಇಂದು ಕೂಡ ಜನ ಕಡಿಮೆ. ಏಳಿ, ಎದ್ದೇಳಿ ಮತದಾನ ಮಾಡುವುದನ್ನು ಮರೆಯಬೇಡಿ ಎಂದು ಕರೆ ನೀಡಿದ್ದಾರೆ.
Comments